ಸಾರಾಂಶ
ಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ತಾಲೂಕಿನ ಬಿಸನಳ್ಳಿ ಗ್ರಾಮದ ಶ್ರೀ ಕ್ಷೇತ್ರ ಕಾಶಿ ಖಾಸಾ ಶಾಖಾಮಠದ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಕಾಶಿ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಪ್ರತಿದಿನ ಸಾಮೂಹಿಕ ಇಷ್ಠಲಿಂಗ ಮಹಾಪೂಜೆ, ಸಂಜೆ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ, ವೇದ ಪಾಠಶಾಲೆಯ ದಶಮಾನೋತ್ಸವ ಕಾರ್ಯಕ್ರಮ ನಾಡಿನ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಡಿ.೨೦ರಿಂದ ಡಿ.೨೫ರವರೆಗೆ ನಡೆಯಲಿದೆ.ಡಿ.೨೦ರಂದು ಸಂಜೆ ೫.೩೦ಕ್ಕೆ ಶ್ರೀ ಪಂಚಾಚಾರ್ಯ ದ್ವಜಾರೋಹಣವನ್ನು ಶ್ರೀ ಕಾಶಿ ಜಗದ್ಗುರು ನೆರವೇರಿಸುವರು. ನಂತರ ನಡೆಯಲಿರುವ ಧರ್ಮ ಸಮಾರಂಭದ ಸಾನಿಧ್ಯವನ್ನು ಉಜ್ಜಯನಿ ಜ.ಸಿದ್ಧಲಿಂಗ ರಾಜದೇಶಿಕೇಂದ್ರ ಭಗವತ್ಫಾದರು ಹಾಗೂ ಶ್ರೀ ಕಾಶಿ ಡಾ. ಚಂದ್ರಶೇಖರ ಶಿವಾಚಾರ್ಯರು ವಹಿಸುವರು. ಬಂಕಾಪುರ ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಜಿ ಅಧ್ಯಕ್ಷತೆ ವಹಿಸುವರು. ಗುಳೆದಗುಡ್ಡದ ಶ್ರೀ ಡಾ. ನೀಲಕಂಠ ಶಿವಾಚಾರ್ಯರು ಪ್ರಾಸ್ತಾವಿಕ ನುಡಿನಮನ ಸಲ್ಲಿಸುವರು.
ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ವೇದ ಪಾಠಶಾಲೆಯ ಉಪಾಧ್ಯಕ್ಷ ಶಂಭಣ್ಣ ಮಾ.ಪ. ಶೆಟ್ಟರ ಆಗಮಿಸುವರು. ಡಿ.೨೧ರಂದು ಸಂಜೆ ೬ ಗಂಟೆಗೆ ನಡೆಯಲಿರುವ ಧರ್ಮಸಭೆಯ ಸಾನಿಧ್ಯವನ್ನು ಶ್ರೀ ಕಾಶಿ ಡಾ. ಚಂದ್ರಶೇಖರ ಶಿವಾಚಾರ್ಯರು ವಹಿಸುವರು. ನೇತೃತ್ವವನ್ನು ತುಮಕೂರಿನ ಡಾ. ಶಿವಾನಂದ ಶಿವಾಚಾರ್ಯರು ವಹಿಸುವರು. ಯುವ ಬ್ರಿಗ್ರೇಡ್ ಕಿರಣ ರಾಮ್ ಉಪನ್ಯಾಸ ನೀಡುವರು. ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೀಣಾ ಕಾಶಪ್ಪನವರ, ಕಾನೂನು ಸಚಿವ ಎಚ್.ಕೆ. ಪಾಟೀಲ, ಧಾರವಾಡ ಶಾಸಕ ವಿನಯ ಕುಲಕರ್ಣಿ ಸೇರಿದಂತೆ ಇತರರು ಆಗಮಿಸುವರು. ಡಿ.೨೨ರಂದು ಸಂಜೆ ೬ ರಿಂದ ನಡೆಯಲಿರುವ ಧರ್ಮಸಭೆಯ ಸಾನಿಧ್ಯವನ್ನು ಶ್ರೀ ಕಾಶಿ ಶ್ರೀಗಳು ವಹಿಸುವರು. ನೇತೃತ್ವವನ್ನು ಕೊಟ್ಟೂರಿನ ಡಾ.ಸಿದ್ಧಲಿಂಗ ಶಿವಾಚಾರ್ಯರು ವಹಿಸುವರು.ಉಪನ್ಯಾಸಕರಾಗಿ ಡಾ. ಎ.ಸಿ. ವಾಲಿ ಆಗಮಿಸುವರು. ವಿಧಾನಸಭೆ ಉಪಸಭಾಧ್ಯಕ್ಪ ತಿ ರುದ್ರಪ್ಪ ಲಮಾಣಿ, ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಇತರರು ಆಗಮಿಸುವರು. ಡಿ.೨೩ರಂದು ಸಂಜೆ ನಡೆಯಲಿರುವ ಧರ್ಮಸಭೆಯ ಸಾನಿಧ್ಯವನ್ನು ಕಾಶಿ ಶ್ರೀಗಳು ವಹಿಸುವರು. ರಾಣಿಬೆನ್ನೂರಿನ ಶ್ರೀ ಶಿವಯೋಗಿ ಶಿವಾಚಾರ್ಯರು ನೇತೃತ್ವ ವಹಿಸುವರು. ಕವಿತಾ ಮಿಶ್ರಾ ಉಪನ್ಯಾಸ ನೀಡುವರು. ಮಾಜಿ ಮುಖ್ಯಮಂತ್ರಿಗಳಾಸ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಇತರರು ಆಗಮಿಸುವರು.ಡಿ. ೨೪ರ ಸಂಜೆ ನಡೆಯಲಿರುವ ಧರ್ಮಸಭೆಯ ಸಾನಿಧ್ಯವನ್ನು ಶ್ರೀ ಶೈಲ ಪೀಠದ ಶ್ರೀ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಶ್ರೀ ಕಾಶಿ ನೂತನ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ವಹಿಸುವರು. ಬೆಂಗಳೂರಿನ ಡಾ.ಮಹಾಂತಲಿಂಗ ಶಿವಾಚಾರ್ಯರು ಹಿರೇಮಣಕಟ್ಟಿ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯರು ಆಗಮಿಸುವರು. ಚಕ್ರವರ್ತಿ ಸೂಲಿಬೆಲೆ, ಪ್ರಶಾಂತ ರಿಪ್ಪನಪೇಟೆ ಉಪನ್ಯಾಸ ನೀಡುವರು. ಡಿ.೨೫ರ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದ ಸಾನಿಧ್ಯವನ್ನು ಕಾಶಿ ಶ್ರೀಗಳು ವಹಿಸುವರು. ಡಾ. ಕಲ್ಲಯ್ಯ ಹಿರೇಮಠ ಉಪನ್ಯಾಸ ನೀಡುವರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ರಾಘವೇಂದ್ರ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ಇತರರು ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.