ಗಣಪತಿ ಪೆಂಡಾಲ್‌ನಲ್ಲಿ ಸಾಮೂಹಿಕ ಲಲಿತ ಸಹಸ್ರನಾಮ

| Published : Sep 05 2025, 01:00 AM IST

ಸಾರಾಂಶ

ಪೆಂಡಾಲ್ ಗಣಪತಿ ಆವರಣದಲ್ಲಿ ವಿಜೃಂಭಣೆಯಿಂದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರಿ ಲಲಿತ ಸಹಸ್ರನಾಮ ಪಾರಾಯಣವನ್ನು ಪಠಿಸಿದ್ದೇವೆ. ಇಂತಹ ಅವಕಾಶವನ್ನು ಗಣಪತಿ ಸೇವಾ ಸಮಿತಿಯಿಂದ ಮಾಡಿಕೊಟ್ಟಿರುವುದಕ್ಕೆ ಧನ್ಯವಾದ ಹೇಳಿದರು. ನಗರದ ವಿವಿಧ ಭಜನಾ ಮಂಡಳಿಗಳ ಮಹಿಳಾ ಸದಸ್ಯರುಗಳಿಂದ ವಿಷ್ಣು ಸಹಸ್ರನಾಮವನ್ನು ಬಹಳ ಭಕ್ತಿಪೂರ್ವಕವಾಗಿ ಪಠಿಸಲಾಯಿತು. ವಿಷ್ಣು ಸಹಸ್ರನಾಮ ಪಠಣೆಯನ್ಮು ಪಠಿಸಲು ಶ್ರೀ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಧರ್ಮದರ್ಶಿಗಳು ಹಾಗೂ ಸೇವಾ ಸಮಿತಿಯ ಸರ್ವ ಸದಸ್ಯರು ಸಹಕರಿಸಿ ಅವಕಾಶವನ್ನು ಮಾಡಿ ಕೊಟ್ಟಿರುವುದಾಗಿ ಹೇಳಿದರು.

ಹಾಸನ: ನಗರದ ಸಿಟಿ ಬಸ್ ನಿಲ್ದಾಣ ಬಳಿ ಶ್ರೀ ಗಣಪತಿ ಸೇವಾ ಸಂಸ್ಥೆಯಿಂದ ಪ್ರತಿಷ್ಠಾಪಿಸಲಾಗಿರುವ ಶ್ರೀ ಗಣೇಶೋತ್ಸವ ಆವರಣದಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ನೇತ್ರಾವತಿ ಗಿರೀಶ್ ನೇತೃತ್ವದಲ್ಲಿ ಮಹಿಳೆಯರಿಂದ ಲಲಿತ ಸಹಸ್ರನಾಮ ಪಾರಾಯಣವನ್ನು ಯಶಸ್ವಿಯಾಗಿ ನಡೆಸಿದರು.

ನಗರಸಭೆಯ ಮಾಜಿ ಅಧ್ಯಕ್ಷರಾದ ನೇತ್ರಾವತಿ ಗಿರೀಶ್ ಮಾತನಾಡಿ, ಪೆಂಡಾಲ್ ಗಣಪತಿ ಆವರಣದಲ್ಲಿ ವಿಜೃಂಭಣೆಯಿಂದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರಿ ಲಲಿತ ಸಹಸ್ರನಾಮ ಪಾರಾಯಣವನ್ನು ಪಠಿಸಿದ್ದೇವೆ. ಇಂತಹ ಅವಕಾಶವನ್ನು ಗಣಪತಿ ಸೇವಾ ಸಮಿತಿಯಿಂದ ಮಾಡಿಕೊಟ್ಟಿರುವುದಕ್ಕೆ ಧನ್ಯವಾದ ಹೇಳಿದರು. ನಗರದ ವಿವಿಧ ಭಜನಾ ಮಂಡಳಿಗಳ ಮಹಿಳಾ ಸದಸ್ಯರುಗಳಿಂದ ವಿಷ್ಣು ಸಹಸ್ರನಾಮವನ್ನು ಬಹಳ ಭಕ್ತಿಪೂರ್ವಕವಾಗಿ ಪಠಿಸಲಾಯಿತು. ವಿಷ್ಣು ಸಹಸ್ರನಾಮ ಪಠಣೆಯನ್ಮು ಪಠಿಸಲು ಶ್ರೀ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಧರ್ಮದರ್ಶಿಗಳು ಹಾಗೂ ಸೇವಾ ಸಮಿತಿಯ ಸರ್ವ ಸದಸ್ಯರು ಸಹಕರಿಸಿ ಅವಕಾಶವನ್ನು ಮಾಡಿ ಕೊಟ್ಟಿರುವುದಾಗಿ ಹೇಳಿದರು.