ಸಾರಾಂಶ
ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಮಠದ ಹರೀಶ್ವಾರನಂದ ಸರಸ್ವತಿ ಸಂಸ್ಥಾನದ ಸಿದ್ಧರೂಢರ ಮಠದ 26ನೇ ಜಾತ್ರಾ ಮಹೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹ ಸಮಾರಂಭ ಜರುಗಿತು.
ಯಾದಗಿರಿ:ಸಾಮೂಹಿಕ ವಿವಾಹಗಳು ಬಡವರ ಪಾಲಿಗೆ ವರದಾನವಾಗಿವೆ. ಸಿದ್ಧಾರೂಢರ ಸಮ್ಮುಖದಲ್ಲಿ ಸಾಮೂಹಿಕ ವಿವಾಹವಾದವರ ಬಾಳು ಬೆಳಗಲಿ ಎಂದು ಸದ್ಗುರು ಹರೀಶ್ವಾರನಂದ ಸರಸ್ವತಿ ಮಹಾಸ್ವಾಮಿಗಳು ಹಾರೈಸಿದರು.
ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಮಠದ ಹರೀಶ್ವಾರನಂದ ಸರಸ್ವತಿ ಸಂಸ್ಥಾನದ ಸಿದ್ಧರೂಢರ ಮಠದ 26ನೇ ಜಾತ್ರಾ ಮಹೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಸಮಾರಂಭವನ್ನು ಉದ್ಘಾಟಿಸಿ ನವ ವಧುವರರಿಗೆ ಶುಭಾಶಯ ತಿಳಿಸಿ ಮಾತನಾಡಿದ ಯುವ ಮುಖಂಡ ಮಹೇಶರೆಡ್ಡಿಗೌಡ ಮುದ್ನಾಳ, ಜಾತ್ರಾ ಮಹೋತ್ಸವದಲ್ಲಿ ಬಡವರಿಗೆ ಉಚಿತ ಸಾಮೂಹಿಕ ವಿವಾಹ ಆಯೋಜಿಸಿರುವುದು ಮಾದರಿಯಾಗಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಖಂಡಪ್ಪ ದಾಸನ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆನಂದಮ್ಮ ಜಲ್ಲಪ್ಪನೋರ, ಮಹೇಶ ಸಾಹುಕಾರ ವಾಲಿ, ರುದ್ರೇಗೌಡ, ಗಣೇಶ ದುಪ್ಪಲ್ಲಿ, ಹಣಮಂತ ಇಟಗಿ, ಮೌಲಾರಿ ಜಾಗೀರದಾರ, ಕಾಶಪ್ಪ ಹೆಗ್ಗಣಗೆರಿ, ಜಗಪ್ಪಗೌಡ ಸೇರಿದಂತೆ ಇತರರಿದ್ದರು.