ಸಾರಾಂಶ
ದೇಂದಡ್ಕ ಪುತ್ತೂರಿನಲ್ಲಿ ಬೃಹತ್ ಆರೋಗ್ಯ ಶಿಬಿರ ಹಾಗೂ ಉಚಿತ ದಂತ ವೈದ್ಯಕೀಯ ಶಿಬಿರ ನಡೆಯಿತು. ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ನ ಉಪಾಧ್ಯಕ್ಷ ಪುಷ್ಪರಾಜ್ ಚೌಟ ಉದ್ಘಾಟಿಸಿದರು.
ಕನ್ನಡಪ್ರಭವಾರ್ತೆ ಮೂಲ್ಕಿ
ಮೂಲ್ಕಿಯ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್, ಲಿಯೋ ಕ್ಲಬ್ ಯೆನ್ ಇನ್ಸ್ ಫಯರ್, ಮೂಲ್ಕಿಯ ಕವತ್ತಾರಿನ ಹರಿಹರ ಭಜನಾ ಮಂಡಳಿ ಪುತ್ತೂರು, ಮಹಾಲಿಂಗೇಶ್ವರ ಗೆಳೆಯರ ಬಳಗ, ವಿಸಿಸಿ ಕ್ರಿಕೆಟ್ ಕ್ಲಬ್ ಕರ್ನಿರೆ, ಧೂಮವತಿ ಸಾನ ನಡಿಬೆಟ್ಟು ಆಡಳಿತ ಮಂಡಳಿ, ಅಂಬಾಭವಾನಿ ಭಜನಾ ಮಂದಿರ ಕವತ್ತಾರು, ಜೋಗಿದೋಟ್ಟು ಯುವಕ ವೃಂದ ಕವತ್ತಾರುನ ಜಂಟಿ ಆಶ್ರಯದಲ್ಲಿ ಮಂಗಳೂರಿನ ಎ.ಜೆ.ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಗೂ ಎ.ಬಿ.ಶೆಟ್ಟಿ ಮೆಮರಿಯಲ್ ಡೆಂಟಲ್ ಸೈನ್ಸ್ ನ ಸಹಯೋಗದೊಂದಿಗೆ ದೇಂದಡ್ಕ ಪುತ್ತೂರಿನಲ್ಲಿ ಜರುಗಿದ ಬೃಹತ್ ಆರೋಗ್ಯ ಶಿಬಿರ ಹಾಗೂ ಉಚಿತ ದಂತ ವೈದ್ಯಕೀಯ ಶಿಬಿರವನ್ನು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ನ ಉಪಾಧ್ಯಕ್ಷ ಪುಷ್ಪರಾಜ್ ಚೌಟ ಉದ್ಘಾಟಿಸಿದರು.ಕ್ಲಬ್ಬಿನ ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್, ಕೋಶಾಧಿಕಾರಿ ಅನಿಲ್ ಕುಮಾರ್, ನಿಕಟ ಪೂರ್ವ ಅಧ್ಯಕ್ಷ ಸುದೀರ್ ಎನ್. ಬಾಳಿಗ, ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನದಾಸ್ ಶೆಟ್ಟಿ, ಅಶೋಕ ಭಂಡಾರಿ, ಪಾಂಡುರಂಗ ಕಾಮತ್, ರಾಮದಾಸ್ ಶೆಟ್ಟಿ, ದಯಾನಂದ ರಾವ್, ಹರೀಶ್ ಶೆಟ್ಟಿ, ಪ್ರೀತಮ್ ರೈ, ಎಜೆ ಶೆಟ್ಟಿ ಆಸ್ಪತ್ರೆಯ ಡಾ. ಆಕಾಂಕ್ಷ ಶೆಟ್ಟಿ, ಎ. ಬಿ ಶೆಟ್ಟಿ ದಂತ ವೈದ್ಯಕೀಯ ಆಸ್ಪತ್ರೆಯ ಡಾ. ಶೋಭಿತ್ ಮತ್ತಿತರರು ಉಪಸ್ಥಿತರಿದ್ದರು.