ಸಾರಾಂಶ
ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ ರಾಜ್ಯದಲ್ಲಿ ಒಳಮೀಸಲಾತಿ ವರ್ಗಿಕರಣ ಜಾರಿ ಮಾಡುವಂತೆ ಹಾಗೂ ಎಲ್ಲ ನೇಮಕಾತಿ ಮುಂಬಡ್ತಿಗಳಲ್ಲಿ ಒಳಮೀಸಲಾತಿ ಜಾರಿ ನಂತರ ಮುಂದುವರಿಸುವಂತೆ ಆಗ್ರಹಿಸಿ ಘೋಷಣೆ ಕೂಗಲಾಯಿತು.
ಹುಬ್ಬಳ್ಳಿ:
ಸುಪ್ರೀಂಕೋರ್ಟ್ ತೀರ್ಪಿನಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣ ಜಾರಿಗೆ ಆಗ್ರಹಿಸಿ ಬುಧವಾರ ಪರಿಶಿಷ್ಟ ಜಾತಿಗಳ ಸಾಮರಸ್ಯ ಐಕ್ಯತಾ ಒಕ್ಕೂಟ ವತಿಯಿಂದ ನಗರದಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಳಾಯಿತು.ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿರುವ ಡಾ. ಬಾಬು ಜಗಜೀವನ ರಾಮ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಬೃಹತ್ ಮೆರವಣಿಗೆ ಚಾಲನೆ ನೀಡಲಾಯಿತು. ನಗರದ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ರೈಲು ನಿಲ್ದಾಣದ ಹತ್ತಿರವಿರುವ ಅಂಬೇಡ್ಕರ್ ವೃತ್ತದ ವರೆಗೆ ಮೆರವಣಿಗೆ ತೆರಳಿದರು.
ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ ರಾಜ್ಯದಲ್ಲಿ ಒಳಮೀಸಲಾತಿ ವರ್ಗಿಕರಣ ಜಾರಿ ಮಾಡುವಂತೆ ಹಾಗೂ ಎಲ್ಲ ನೇಮಕಾತಿ ಮುಂಬಡ್ತಿಗಳಲ್ಲಿ ಒಳಮೀಸಲಾತಿ ಜಾರಿ ನಂತರ ಮುಂದುವರಿಸುವಂತೆ ಆಗ್ರಹಿಸಿ ಘೋಷಣೆ ಕೂಗಲಾಯಿತು.ನಂತರ ತಹಸೀಲ್ದಾರ್ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಹಕ್ಕೊತ್ತಾಯದ ಮನವಿ ಮಂಡಿಸಲಾಯಿತು. ಈ ವೇಳೆ ಒಕ್ಕೂಟದ ಸಂಚಾಲಕರಾದ ಡಾ. ವಿಜಯ ಗುಂಟ್ರಾಳ, ಬಸಪ್ಪ ಮಾದರ, ವೀರಭದ್ರಪ್ಪ ಹಾಲಹರವಿ, ಸುರೇಶ ಕಣಮಕ್ಕಲ, ರವಿ ಕಲ್ಯಾಣಿ, ಸಹದೇವ ಮಾಳಗಿ, ಮಂಜುನಾಥ ಸಣ್ಣಕಿ, ಭೀಮು ಹಲಗಿ, ಶಂಕರ ಅಜಮನಿ, ಮೇಘರಾಜ್ ಹಿರೇಮನಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.