ನೇಹಾ ಹತ್ಯೆ ಖಂಡಿಸಿ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನೆ

| Published : Apr 23 2024, 01:48 AM IST

ನೇಹಾ ಹತ್ಯೆ ಖಂಡಿಸಿ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಖಂಡಿಸಿ ಮಲೇಬೆನ್ನೂರಿನ ಹಳೇ ವೃತ್ತದಲ್ಲಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ನೀರಾವರಿ ಇಲಾಖೆವರೆಗೆ ಬೃಹತ್ ಪ್ರತಿಭಟನೆ ವೇಳೆ ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು.

- ಬಜರಂಗ ದಳದ ಮುಖಂಡ ಸತೀಶ್ ಪೂಜಾರಿ ನೇತೃತ್ವದಲ್ಲಿ ಆಯೋಜನೆ

- - -

- ಹಂತಕರ ಎನ್‌ಕೌಟರ್‌ಗೆ ಮೌಲ್ವಿಗಳು ಫತ್ವಾ ಹೊರಡಿಸಲಿ

- ಹಿಂದೂ ವಿದ್ಯಾರ್ಥಿನಿಯರು ಆತ್ಮರಕ್ಷಣೆಗೆ ಪೆನ್, ಬುಕ್ ಜತೆಗೆ ಚಾಕು ಇಟ್ಟುಕೊಳ್ಳಬೇಕು

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಖಂಡಿಸಿ ಮಲೇಬೆನ್ನೂರಿನ ಹಳೇ ವೃತ್ತದಲ್ಲಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ನೀರಾವರಿ ಇಲಾಖೆವರೆಗೆ ಬೃಹತ್ ಪ್ರತಿಭಟನೆ ವೇಳೆ ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು. ಬಜರಂಗ ದಳದ ಮುಖಂಡ ಸತೀಶ್ ಪೂಜಾರಿ ಈ ಸಂದರ್ಭ ಮಾತನಾಡಿ, ನಲ್ಲೂರಲ್ಲಿ ದಲಿತರ ಕಾಲೋನಿಯಲ್ಲಿ ರಾಮನವಮಿ ನಡೆದಾಗಲೂ ಮುಸ್ಲಿಂರು ದೌರ್ಜನ್ಯ ನಡೆಸಿದರು. ಕಾರಿನಲ್ಲಿ ಭಕ್ತಿಗೀತೆ ಹಾಕಿದಾಗ ಹಲ್ಲೆ ಮಾಡಿದ್ದಾರೆ. ಮಲೇಬೆನ್ನೂರಲ್ಲಿಯೂ ಅಂಗಡಿ ಒಳಗೆ ನುಗ್ಗಿ ಚಾಕು ಹಾಕಿದರು. ಹುಬ್ಬಳ್ಳಿಯಲ್ಲಿ ಬಹಿರಂಗವಾಗಿ ಹಗಲು ಮಹಿಳೆಯರನ್ನು ಕೋಳಿ ಕತ್ತರಿಸಿದ ಹಾಗೆ ಕಟ್ ಮಾಡುತ್ತಾರಲ್ಲಾ, ಕರ್ನಾಟಕದಲ್ಲಿ ಸರ್ಕಾರ ಇದೆಯಾ? ಲಜ್ಜೆಗೆಟ್ಟ ಸರ್ಕಾರದಲ್ಲಿ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟುತ್ತೇನೆಂದ ಮುಖ್ಯಮಂತ್ರಿ ಮತ್ತು ಗೃಹಮಂತ್ರಿ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.

ನೇಹಾ ಕುಟುಂಬಕ್ಕೆ ಅನ್ಯಾಯವಾಗಿದೆ, ಈ ವಿಚಾರವಾಗಿ ಮುಸಲ್ಮಾನರು ಬೀದಿಗಳಿದು ಹೋರಾಟ ಮಾಡಿಲ್ಲ. ಮಹಮ್ಮದ್ ಪೈಗಂಬರ್ ಶಾಂತಿ ಬಯಸಿದರು. ಅಬ್ದುಲ್ ಕಲಾಂ ಅವರನ್ನು ದೇವರೆಂದು ಗೌರವಿಸುತ್ತೇವೆ. ಆದರೆ, ಹಿಂದುಗಳ ಜತೆ ಸಹಬಾಳ್ವೆ ಮಾಡಿದಾಗ ಮಾತ್ರ ಐಕ್ಯತೆಗೆ ಅರ್ಥ ಬರುತ್ತದೆ ಎಂದರು.

ಹುತಾತ್ಮ ನೇಹಾಳ ಆತ್ಮಕ್ಕೆ ಶಾಂತಿ ದೊರಕಲು ಮೌಲ್ವಿಗಳು ಹತ್ಯೆ ಮಾಡಿದವನನ್ನು ಎನ್‌ಕೌಟರ್ ಮಾಡಲು ಫತ್ವಾ ಹೊರಡಿಸಬೇಕು. ಹಿಂದೂಗಳು ಜೀವಿಸುವ ಹಕ್ಕು ಕಸಿದುಕೊಂಡಿದ್ದೀರಿ. ಹಿಂದೂಗಳು ಕೈಗೆ ಬಳೆ ತೊಟ್ಟಿಲ್ಲ. ಹಿಂದೂ ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳುವಾಗ ಆತ್ಮರಕ್ಷಣೆಗೆ ಪೆನ್, ಬುಕ್ ಜತೆಗೆ ಚಾಕು ಇಟ್ಟುಕೊಳ್ಳಬೇಕು, ಲವ್ ಜಿಹಾದ್ ವಿರುದ್ಧ ಸಿಡಿದೇಳಬೇಕು ಎಂದು ಸತೀಶ್ ಹೇಳಿದರು.

ಭಾಜಪ ಮತ್ತು ಹಿಂದೂಪರ ಸಂಘಟನೆಗಳ ಚಂದ್ರಶೇಖರ್ ಪೂಜಾರ್, ನಗರಸಭಾ ಸದಸ್ಯೆ ಅಶ್ವಿನಿ, ಕೆ.ಜಿ ಮಂಜುನಾಥ್, ನಾಗನಗೌಡ, ಸುನೀತಾ, ಪುಷ್ಪಾ, ಶಕುಂತಲಮ್ಮ, ಸೌಜನ್ಯ, ಶಶಿಕಲಾ, ಅಂಬುಜಾ, ಬೆಳ್ಳೂಡಿ ಗೀತಾ, ಮೀನಾಕ್ಷಿ, ಅಣ್ಣಪ್ಪ, ಸುನಿಲ್, ಬಸವರಾಜ್, ಲಿಂಗರಾಜು, ಸಿದ್ದೇಶ್, ಎ.ರೇವಣಸಿದ್ದಪ್ಪ, ರಂಗನಾಥ್, ಹನುಮಗೌಡ, ಮಲ್ಲೇಶಪ್ಪ, ಗಂಗಾಧರ್ ಹಾಗೂ ನೂರಾರು ಸಂಘಟನೆಯ ಪದಾಧಿಕಾರಿಗಳು ಇದ್ದರು.

- - - -ಚಿತ್ರ೧: ನೇಹಾ ಹಿರೇಮಠ್ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು.