ಸಾರಾಂಶ
ಮಠ-ಮಂದಿರ, ದೇವಾಲಯಗಳು ಅಧ್ಯಾತ್ಮದ ಮೂಲ ಕೇಂದ್ರಗಳಾಗಿವೆ. ಪ್ರತಿಯೊಬ್ಬರು ಮಠ-ಮಂದಿರಗಳ ಬಗ್ಗೆ ಭಕ್ತಿ ಗೌರವಗಳನ್ನು ಹೊಂದಬೇಕು. ಆಗ ಹಿಂದೂ ಧರ್ಮ ಬಲಿಷ್ಠಗೊಳ್ಳುವುದು ಎಂದು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಸೋದೆ ವಾದಿರಾಜ ಮಠದ ಪ್ರಸ್ತುತ ಪೀಠಾಧಿಪತಿ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಚನ್ನಗಿರಿಯಲ್ಲಿ ನುಡಿದಿದ್ದಾರೆ.
- ಚನ್ನಗಿರಿಯಲ್ಲಿ ನಾಗರೀಕ ಅಭಿನಂದನಾ ಸಮಾರಂಭ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಮಠ-ಮಂದಿರ, ದೇವಾಲಯಗಳು ಅಧ್ಯಾತ್ಮದ ಮೂಲ ಕೇಂದ್ರಗಳಾಗಿವೆ. ಪ್ರತಿಯೊಬ್ಬರು ಮಠ-ಮಂದಿರಗಳ ಬಗ್ಗೆ ಭಕ್ತಿ ಗೌರವಗಳನ್ನು ಹೊಂದಬೇಕು. ಆಗ ಹಿಂದೂ ಧರ್ಮ ಬಲಿಷ್ಠಗೊಳ್ಳುವುದು ಎಂದು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಸೋದೆ ವಾದಿರಾಜ ಮಠದ ಪ್ರಸ್ತುತ ಪೀಠಾಧಿಪತಿ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ನುಡಿದರು.ಸೋಮವಾರ ಪಟ್ಟಣದ ಮಠದ ಬೀದಿಯ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠಕ್ಕೆ ಭೇಟಿ ನೀಡಿ, ನಾಗರೀಕ ಅಭಿನಂದನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಹಿಂದೂ ಧರ್ಮದ ಸನಾತನ ಪರಂಪರೆ ಮುಂದುವರಿಯಲು, ಮುಂದಿನ ಪೀಳಿಗೆಗೆ ಈ ಬಗ್ಗೆ ತಿಳಿಯ ಬೇಕಾದರೆ ಮಠಗಳು, ದೇವಾಸ್ಥಾನಗಳಿಂದ ಮಾತ್ರ ಸಾಧ್ಯ. ಮಧ್ವಚಾರ್ಯರು ಉಡುಪಿಯ ಶ್ರೀ ಕೃಷ್ಣನನ್ನು ಆರಾಧಿಸುವ ಸಲುವಾಗಿ ಎಂಟು ಮಠಗಳನ್ನು ಸ್ಥಾಪಿಸಿ, ಎಂಟು ಯತಿಗಳನ್ನು ನೇಮಕ ಮಾಡಿದರು. ಅಲ್ಲಿ ಪೂಜೆ ಮಾಡುವಂತೆ ವ್ಯವಸ್ಥೆ ಮಾಡಿದ್ದಾರೆ ಎಂದ ಅವರು, ಸೋದೆ ಶ್ರೀ ವಾದಿರಾಜ ಮಠದ ಶ್ರೀಗಳು ಪ್ರಥಮ ಯತಿಗಳಾಗಿದ್ದಾರೆ ಎಂದರು.ದೇವರ ತೊಟ್ಟಿಲ ಪೂಜೆ, ಭೂತರಾಯರ ವಿಶೇಷ ಪೂಜೆ, ಗುರುಗಳಿಂದ ಸಂಸ್ಥಾನ ಪೂಜೆ, ಬೆಳಗ್ಗೆ 11.30ರಿಂದ ಶ್ರೀಗಳವರಿಗೆ ಪಾದಪೂಜೆ ನಡೆಯಿತು. ಮಠದಲ್ಲಿ ನಡೆದ ದೇವತಾ ಕಾರ್ಯಗಳಲ್ಲಿ ಭಾಗವಹಿಸಿ, ಕಾರ್ತಿಕೋತ್ಸವದಲ್ಲಿ ಭಾಗಿಯಾದರು.
ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಪ.ನ.ಕೃಷ್ಣ ಉಪಾಧ್ಯ, ಟ್ರಸ್ಟಿಗಳಾದ ಕೆ.ರಾಮಮೂರ್ತಿ, ಜಿ.ಸಿ.ವೆಂಕಟೇಶ್, ಎ.ಎನ್.ಗುರುಪ್ರಸಾದ್, ವಿದ್ಯಾರಣ್ಯ ಮಾರ್ಕೋಡ್, ಪಿ.ವಿ. ವರದರಾಜ್, ಕಾಶಿನಾಥ ಜ್ಯೋಯ್ಸ್, ವಾದಿರಾಜ ಸೇರಿದಂತೆ ಭಕ್ತರು ಆಶೀರ್ವಾದ ಪಡೆದು, ಮಂತ್ರಾಕ್ಷತೆ ಪಡೆದರು.- - - -2ಕೆಸಿಎನ್‌ಜಿ1:
ಚನ್ನಗಿರಿಯಲ್ಲಿ ಸೋದೆ ವಾದಿರಾಜ ಮಠದ ಪೀಠಾಧಿಪತಿ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.-2ಕೆಸಿಎನ್‌ಜಿ2: ಚನ್ನಗಿರಿಗೆ ಆಗಸಮಿತಿ ಶ್ರೀ ಸೋದೆ ವಾದಿರಾಜ ಮಠದ ಪೀಠಾಧಿಪತಿ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರನ್ನು ವಿಪ್ರ ಸಮಾಜ ಬಾಂಧವರು ಸಂಭ್ರಮದಿಂದ ಸ್ವಾಗತಿಸಿದರು.