ಸಾರಾಂಶ
ನರಗುಂದ: ಮಠಗಳು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಬಡ ಮಕ್ಕಳಿಗೆ ಬೆಳಕಾಗಿ ಶಿಕ್ಷಣ ಕ್ರಾಂತಿ ಮಾಡಿವೆ.
ಹಾಗೇ ಶಿರೋಳ ತೋಂಟದಾರ್ಯ ಮಠದ ಶ್ರೀಗುರುಬಸವ ಶ್ರೀಗಳು ಮಠಕ್ಕೆ ಸೀಮಿತವಾಗದೆ ಶಿಕ್ಷಣ, ಧರ್ಮ, ದಾಸೋಹ, ಸಂಸ್ಕಾರವನ್ನು, ಕಾಯಕ ತತ್ವಗಳನ್ನು ಗಡಿ ಭಾಗದಲ್ಲಿ ಕನ್ನಡ-ನುಡಿ ಸೇವೆ ಶ್ರೀಮಠದಿಂದ ನಡೆಸಿದರು ಎಂದು ಗದುಗಿನ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದಲ್ಲಿ ನಡೆದ ಶಾಂತಲಿಂಗ ಸ್ವಾಮಿಗಳ ಉತ್ತರಾಧಿಕಾರಿ ಹಾಗೂ ಪುರ ಪ್ರವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಂತಲಿಂಗ ಶ್ರೀಗಳು ಬೈರನಹಟ್ಟಿಯ ಮಠದ ಜತೆಗೆ ಶಿರೋಳ ಮಠವನ್ನು ಮುನ್ನಡೆಸಲಿದ್ದಾರೆ ಎಂದರು.
ಬೈರನಹಟ್ಟಿ-ಶಿರೋಳ ನಿಯೋಜಿತ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಹಿಂದಿನ ಶ್ರೀಗಳು ಬೆಳಗಾವಿ ಜಿಲ್ಲೆಯ ಚಿಂಚಣಿ ಗ್ರಾಮದಲ್ಲಿ ಕನ್ನಡ ಬಳಗ ಕಟ್ಟಿ ಕನ್ನಡ ಬೆಳೆಸಿದರು ಹಾಗೂ ಶಿರೋಳ ತೋಂಟದಾರ್ಯ ಮಠದ ಬೆಳವಣಿಗೆಗೆ ರೊಟ್ಟಿ ಜಾತ್ರೆಯನ್ನು ಉತ್ತಮ ಸಂಘಟನಾತ್ಮಕವಾಗಿ ರೂಪಿಸಿದರು. ನಾನು ಅದೇ ಹಾದಿಯಲ್ಲಿ ಭಕ್ತರ ಸಹಕಾರದಿಂದ ಶ್ರೀಮಠವನ್ನು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿಗಳ ಮಾರ್ಗ ದರ್ಶನದಲ್ಲಿ ಬೆಳೆಸೋಣ ಎಂದರು.ಲಯನ್ಸ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ ಮಾತನಾಡಿ, ಗುರುಬಸವ ಶ್ರೀಗಳು, ಗದಗ ಶ್ರೀಗಳ ಆಶಯದಂತೆ ಶ್ರೀಮಠದಲ್ಲಿ ದಾಸೋಹ, ಬಸವ ತತ್ವ ಪ್ರಸಾರ, ಸಕಲರನ್ನು ಸಂತೈಸುವ, ಸಮನ್ವಯ ದೃಷ್ಟಿಹೊಂದಿರುವ ಹಾದಿಯಲ್ಲಿ ಶಾಂತಲಿಂಗ ಸ್ವಾಮೀಜಿ ಜಾಣ್ಮೆಯ ಕನ್ನಡದ ಯೋಗಿಗಳಾಗಿದ್ದಾರೆ ಎಂದರು.
ಗುರು ಮಂಟಪ ಹೈದರಾಬಾದ್ ಶಿವಹಂಸಾರೋಡ ಸ್ವಾಮೀಜಿ, ಕಿತ್ತಲಿಯ ಮಂಜುನಾಥ ಸ್ವಾಮೀಜಿ, ಬೆಳಗಾವಿ ಕಾರಂಜಿ ಮಠದ ಶಿವಯೋಗಿ ದೇವರು, ಗದಗ ತೋಂಟದಾರ್ಯ ವಿದ್ಯಾಪೀಠದ ಆಡಳಿತ ಅಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಚನ್ನಬಸಪ್ಪ ಕಂಠಿ, ನರಗುಂದದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್, ತಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ ಹಾಗೂ ಬೈರನಹಟ್ಟಿಯ ಬಿ.ಬಿ. ಐನಾಪೂರ ಮಾತನಾಡಿದರು.ಭೈರನಹಟ್ಟಿ ಶಾಂತಲಿಂಗ ಶ್ರೀಗಳನ್ನು ಬಸ್ ನಿಲ್ದಾಣದಲ್ಲಿರುವ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣನ ಮೂರ್ತಿಗೆ ಹೂ ಮಾಲೆ ಹಾಕಿ ಶಿರೋಳ ತೋಂಟದಾರ್ಯ ಮಹದ್ವಾರ ಮುಂದೆ ಸ್ವಾಗತಿಸಲಾಯಿತು.
ಹಿರೇಮಠದ ಅಪ್ಪಯ್ಯ ಹಿರೇಮಠ, ವೀರಯ್ಯ ಹಿರೇಮಠ ಹಾಗೂ ರುದ್ರಯ್ಯ ಹಿರೇಮಠ ಅವರಿಂದ ಪಾದಪೂಜೆ ಮಾಡಿ ಸಕಲ ವಾದ್ಯ ವೈಭವಗಳೊಂದಿಗೆ ಬೆಳ್ಳಿ ರಥದಲ್ಲಿ ಗ್ರಾಮದಲ್ಲಿ ಭವ್ಯ ಮೆರವಣಿಗೆ ಮೂಲಕ ಮಠಕ್ಕೆ ಬರಮಾಡಿಕೊಂಡು ಶ್ರೀಗಳನ್ನು ಸಿಂಹಾಸನದ ಮೇಲೆ ಕುಡಿಸಿ ಕಿರೀಟ, ಬೆತ್ತವನ್ನು ನೀಡಿ ಶಿರೋಳ ತೋಂಟದಾರ್ಯ ಮಠದ ಉತ್ತರಾಧಿಕಾರಿ ಎಂದು ಡಂಬಳ-ಗದಗ ಡಾ. ಸಿದ್ಧರಾಮ ಸ್ವಾಮೀಜಿ ನೇಮಿಸಿದರು.ಈ ಸಂದರ್ಭದಲ್ಲಿ ಬಾಬುಗೌಡ ತಿಮ್ಮನಗೌಡ್ರ, ಎಸ್.ಬಿ. ದಂಡಿನ, ಚಂದ್ರು ದಂಡಿನ, ಅಂದಾನಗೌಡ ಪಾಟೀಲ, ಲಿಂಗರಾಜ ಪಾಟೀಲ, ವಿ.ಕೆ. ಮರಿಗುದ್ದಿ, ಶೇಖರಯ್ಯ ನಾಗಲೋಟಿಮಠ, ದ್ಯಾಮಣ್ಣ ಕಾಡಪ್ಪನವರ, ನಾಗನಗೌಡ ತಿಮ್ಮನಗೌಡ್ರ, ಜಾತ್ರಾ ಸಮಿತಿ ಅಧ್ಯಕ್ಷ ಲಾಲಸಾಬ ಅರಗಂಜಿ, ಉಪಾಧ್ಯಕ್ಷ ಶರಣಪ್ಪ ಕಾಡಪ್ಪನವರ, ಕಾರ್ಯದರ್ಶಿ ವೀರಯ್ಯ ದೊಡಮನಿ, ಸಹಕಾರ್ಯದರ್ಶಿ ಉಮೇಶ ಮರಿಗುದ್ದಿ, ಬಸವರಾಜ ಗಡ್ಡಿ, ಶರಣಯ್ಯ ನಾಗಲೋಟಿಮಠ ದೇವೇಂದ್ರಪ್ಪ ಶಾಂತಗೇರಿ, ಮಾಂತಪ್ಪ ಶೆಟ್ಟರ, ಮಹಾಬಳೇಶ್ವರ ಕೋಡಬಳಿ, ಗುರುಬಸವ ಶೆಲ್ಲಿಕೇರಿ, ಹನಮಂತ ಕಾಡಪ್ಪನವರ ಸೇರಿದಂತೆ ಇತರರು ಇದ್ದರು.