ಬೆಳಕು ಬೆಳಕಲ್ಲ, ಕತ್ತಲು ಕತ್ತಲಲ್ಲ. ಕತ್ತಲಿಂದ ಬೆಳಕಿನೆಡೆಗೆ ಸಾಗಬೇಕಾದರೆ ಅಜ್ಞಾನಿಯಾಗಿರುವ ಮನುಷ್ಯನಲ್ಲಿರುವ ಮೂಲ ದೋಷ, ನಿಕ್ಷೇಪ ದೋಷ, ಆವರಣ ದೋಷಗಳನ್ನು ವಿಜ್ಞಾನದೆಡೆಗೆ, ಧ್ಯಾನದೆಡೆಗೆ, ಸನ್ಮಾರ್ಗದೆಡೆಗೆ ಪ್ರತಿಯೊಬ್ಬರು ಸಾಗಿದಾಗ ಜೀವನ ಸಾರ್ಥಕವಾಗುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ದೀಪೋತ್ಸವವು ನಮ್ಮ ಮನಸ್ಸಿನಲ್ಲಿರುವ ಕತ್ತಲನ್ನು ಹೋಗಲಾಡಿಸುವ ಪರಂಜ್ಯೋತಿಯಾಗಲಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶಿಸಿದರು.ನಗರದ ಹೆಬ್ಬಾಳಿನಲ್ಲಿರುವ ಶ್ರೀಲಕ್ಷ್ಮಿಕಾಂತಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ದೀಪೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಳಕು ಪ್ರತಿಯೊಬ್ಬ ಮನುಷ್ಯನಲ್ಲಿಯೂ ಇರುತ್ತದೆ. ಅದನ್ನು ಪಡೆಯಲು ಹಂಬಲ, ಸಾಧನೆ ಮಾಡಬೇಕು ಎಂದರು.
ಬೆಳಕು ಬೆಳಕಲ್ಲ, ಕತ್ತಲು ಕತ್ತಲಲ್ಲ. ಕತ್ತಲಿಂದ ಬೆಳಕಿನೆಡೆಗೆ ಸಾಗಬೇಕಾದರೆ ಅಜ್ಞಾನಿಯಾಗಿರುವ ಮನುಷ್ಯನಲ್ಲಿರುವ ಮೂಲ ದೋಷ, ನಿಕ್ಷೇಪ ದೋಷ, ಆವರಣ ದೋಷಗಳನ್ನು ವಿಜ್ಞಾನದೆಡೆಗೆ, ಧ್ಯಾನದೆಡೆಗೆ, ಸನ್ಮಾರ್ಗದೆಡೆಗೆ ಪ್ರತಿಯೊಬ್ಬರು ಸಾಗಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶಾಸಕರಾದ ಜಿ.ಟಿ. ದೇವೇಗೌಡ, ಕೆ. ಹರೀಶ್ ಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಐಪಿಎಸ್ ಅಧಿಕಾರಿ ಎ.ಎನ್. ಪ್ರಕಾಶ್ ಗೌಡ, ಮುಖಂಡರಾದ ಗುಂಡಪ್ಪಗೌಡ, ನಾರಾಯಣ, ಪ್ರಶಾಂತ್ ಗೌಡ, ಶ್ರೀಧರ್, ಗಂಗಾಧರ್, ಮಂಜೇಗೌಡ, ಬೆಳಗೊಳ ಸುಬ್ರಹ್ಮಣ್ಯ, ಗೋಪಾಲ್ ಮೊದಲಾದವರು ಇದ್ದರು.
ತುಮಕೂರಿನ ವಿನೋದ್ ದೀಕ್ಷಿತ್ ಅವರಿಂದ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಭಜನಾ ಕಾರ್ಯಕ್ರಮ ನೃತ್ಯರೂಪಕ, ದೇವರ ಮೆರವಣಿಗೆ ನಡೆದವು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ವಾಜಮಂಗಲ ರೋಟರಿ ಶಾಲೆ ವಿದ್ಯಾರ್ಥಿಗಳ ಸಾಧನೆ
ಕನ್ನಡಪ್ರಭ ವಾರ್ತೆ ಮೈಸೂರುವಾಜಮಂಗಲದ ರೋಟರಿ ಮೈಸೂರು ಉತ್ತರ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರಸಕ್ತ 2025 -26ನೇ ಸಾಲಿನ ಮೆಲ್ಲಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಬಹುಮಾನಗಳಿಸಿದ್ದಾರೆ.
ಕಥೆ ಹೇಳುವ ಸ್ಪರ್ಧೆಯಲ್ಲಿ ಲಾವಣ್ಯ ಪ್ರಥಮ, ಇಂಗ್ಲಿಷ್ ಕಂಠಪಾಠ ತೇಜಸ್ವಿನಿ ಪ್ರಥಮ, ಇಂಗ್ಲಿಷ್ ಕಂಠಪಾಠ ಸೌಜನ್ಯಾ ಪ್ರಥಮ, ಧಾರ್ಮಿಕ ಪಠಣ ಮಾನಸ ತೃತೀಯ ಸ್ಥಾನ, ಕ್ಲೇ ಮಾಡ್ಲಿಂಗ್ ಗಾನ್ವಿತ್ ದ್ವಿತೀಯ, ಅಭಿನಯ ಗೀತೆ ಖುಷಿ ತೃತೀಯ, ಪ್ರಬಂಧ ಯೋಗಿತಾ ತೃತೀಯ ಸ್ಥಾನ, ಛಾದ್ಮ ವೇಷ ತನಿಷ್ ರಾಜ್ ಪ್ರಥಮ ಸ್ಥಾನ, ಚಿತ್ರಕಲೆ ಪೂರ್ವಿಕ ದ್ವಿತೀಯ ಸ್ಥಾನ ಪಡೆದಿದ್ದಾರೆ.ಈ ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.