ಕೊಪ್ಪಳ ಜಿಲ್ಲೆಯಲ್ಲಿ 10ನೇ ಮೇ ಸಾಹಿತ್ಯ ಸಮ್ಮೇಳನ

| Published : Feb 06 2024, 01:31 AM IST

ಕೊಪ್ಪಳ ಜಿಲ್ಲೆಯಲ್ಲಿ 10ನೇ ಮೇ ಸಾಹಿತ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಮೇ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಮಾಡಿದಾಗ ಬಹುತೇಕರು ಕೊಪ್ಪಳದಲ್ಲಿಯೇ ಆಯೋಜನೆ ಮಾಡುವ ಕುರಿತು ಒಲವು ತೋರಿದರು. ಆದರೆ, ಸಭೆಯಲ್ಲಿ ಸಾಹಿತಿ ಅಜ್ಮೀರ್ ನಂದಾಪುರ, ಗಂಗಾವತಿಯಲ್ಲಿ ಆಯೋಜನೆ ಮಾಡುವುದು ಸೂಕ್ತ ಎಂದಿದ್ದಾರೆ.

ಕೊಪ್ಪಳ: 10ನೇ ಮೇ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಮತ್ತು ಅಚ್ಚುಕಟ್ಟಾಗಿ ಮಾಡೋಣ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರಿಂದಲೇ ಆಯೋಜನೆಯಾಗುತ್ತಿರುವ ಈ ಸಮ್ಮೇಳನಕ್ಕೆ ತಾವು 1000 ರೊಟ್ಟಿ ನೀಡುವುದಾಗಿ ಹೇಳಿದರು.

ಮೇ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಮಾಡಿದಾಗ ಬಹುತೇಕರು ಕೊಪ್ಪಳದಲ್ಲಿಯೇ ಆಯೋಜನೆ ಮಾಡುವ ಕುರಿತು ಒಲವು ತೋರಿದರು. ಆದರೆ, ಸಭೆಯಲ್ಲಿ ಸಾಹಿತಿ ಅಜ್ಮೀರ್ ನಂದಾಪುರ, ಗಂಗಾವತಿಯಲ್ಲಿ ಆಯೋಜನೆ ಮಾಡುವುದು ಸೂಕ್ತ ಎಂದಿದ್ದಾರೆ.

ಸಮ್ಮೇಳನವು ಕೊಪ್ಪಳ ಜಿಲ್ಲೆಯಲ್ಲಿ ಆಯೋಜಿಸುವುದು ಖಚಿತವಾಗಿದ್ದು, ಅಂತಿಮ ತೀರ್ಮಾನವನ್ನು ಮುಂದಿನ ಸಭೆಯಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ.

ಸಭೆಯಲ್ಲಿ ಡಾ. ವಿ.ಬಿ. ರಡ್ಡೇರ, ರವಿತೇಜ ಅಬ್ಬಿಗೇರಿ, ಮಹಾಂತೇಶ ಮಲ್ಲನಗೌಡರ, ಬಸವರಾಜ ಸೂಳಿಬಾವಿ, ಈಶ್ವರ ಹತ್ತಿ, ಅಶೋಕ ಬರಗುಂಡಿ, ಡಾ.ಬಸವರಾಜ ಪೂಜಾರ, ಡಾ.ಸಿದ್ಲಿಂಗಪ್ಪ ಕೊಟ್ನಿಕಲ್, ಅಂದಪ್ಪ ಬೆಣಕಲ್ಲ, ಡಿ.ಎಂ. ಬಡಿಗೇರ, ಬಿ.ಶ್ರೀನಿವಾಸ, ಮಹೇಶ ಬಳ್ಳಾರಿ, ಅನಿಲ ಹೊಸಮನಿ, ಡಾ.ಮಹೇಶ ಪೊಲೀಸ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.