ಮನುಷ್ಯ ತನ್ನನ್ನು ತಾನು ಧರ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ

ರಾಣಿಬೆನ್ನೂರು: ಸೀಗೆ ಹುಣ್ಣಿಮೆ ಎಲ್ಲರ ಬಾಳಲ್ಲಿ ಸಿಹಿ ಉಂಟು ಮಾಡಲಿ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.

ಇಲ್ಲಿನ ಮೃತ್ಯುಂಜಯ ನಗರದ ಶ್ರೀ ಚನ್ನೇಶ್ವರ ಮಠದಲ್ಲಿ ಆಯೋಜಿಸಿದ್ದ ಜ್ಞಾನವಾಹಿನಿ ಮಾಸಿಕ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಭೂದೇವಿಯು ನಾಡಿನ ಸಮಸ್ತ ಜನರನ್ನು ಸಮೃದ್ಧವಾಗಿಡಲಿ. ನಾಡಿನ ತುಂಬೆಲ್ಲ ಒಳ್ಳೆಯ ಮಳೆ ಬೆಳೆ ಬರುವಂತಾಗಲಿ ಎಂದರು.

ಈಶ್ವರ ನಗರ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಮಂಜುನಾಥ ಮಣೇಗಾರ ಮಾತನಾಡಿ, ಮನುಷ್ಯ ತನ್ನನ್ನು ತಾನು ಧರ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರು. ಕಾಶಿ ಪೀಠದ ಲಿಂಗೈಕ್ಯ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯರ ಕುರಿತು ನಿವೃತ್ತ ಶಿಕ್ಷಕ ವಿ.ವೀ.ಹರಪನಹಳ್ಳಿ ಉಪನ್ಯಾಸ ನೀಡಿದರು.

ನೀಲನಗೌಡ ಪಾಟೀಲ, ಶೈಲ ವಿಜಯಕುಮಾರ, ಕೊಟ್ರೇಶ ಕೊಟ್ಟೂರು, ವೀರಣ್ಣ ತೋಗರ್ಸಿಮಳೆಮಠ, ಗಣಪ ಕುಲಕರ್ಣಿ. ರಜನಿ ಕರೆಗಾರ, ಯುವರಾಜ, ಅಮೃತಗೌಡ್ರು ಹಿರೇಮಠ, ಹಾಲಸಿದ್ದಯ್ಯ ಶಾಸ್ತ್ರಿಗಳು, ದೇವೇಂದ್ರಪ್ಪ ಬೇಲೂರು, ಆರ್.ಎಸ್. ಆರಾಧ್ಯಮಠ, ಕೊಟ್ರೇಶಪ್ಪ ಎಮ್ಮಿ, ಪ್ರಭುಲಿಂಗ ಹಲಗೇರಿ, ಉಮೇಶ ಗುಂಡಗಟ್ಟಿ, ಸೋಮನಾಥ ಹಿರೇಮಠ, ಮೃತ್ಯುಂಜಯ ಪಾಟೀಲ, ಬಿದ್ದಾಡೆಪ್ಪ ಚಕ್ರಸಾಲಿ, ಗಾಯತ್ರಮ್ಮ ಕುರುವತ್ತಿ, ಶಕುಂತಲಾ ಅಂಗಡಿ, ಪೂರ್ಣಿಮಾ ತೊಗರ್ಸಿಮಳೇಮಠ, ಜಯಮ್ಮ ಆರಾಧ್ಯಮಠ ಉಪಸ್ಥಿತರಿದ್ದರು.