ಸಾರಾಂಶ
- ಬೂದಿಹಾಳಿನಲ್ಲಿ ದೇವರಬೆಳಕೆರೆ ವಲಯಮಟ್ಟದ ಕ್ರೀಡಾಕೂಟ
- - -ಮಲೇಬೆನ್ನೂರು: ಕ್ರೀಡಾ ಸಾಧನೆಯು ವ್ಯಕ್ತಿಯ ಶಿಕ್ಷಣ ಹಾಗೂ ಉದ್ಯೋಗ ಗಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡಾಪಟುವಿನ ಶ್ರಮದಿಂದ ರಾಜ್ಯ, ದೇಶಕ್ಕೂ ಹೆಸರು ಬರಬಲ್ಲದು. ಆದ್ದರಿಂದ ಕ್ರೀಡೆಯಲ್ಲಿ ತೀರ್ಪುಗಾರರು ನೀಡುವ ತೀರ್ಪು ನ್ಯಾಯಯುತವಾಗಿರಬೇಕು ಎಂದು ದುರ್ಗ ರಂಗನಾಥ ಸ್ವಾಮಿ ವಿದ್ಯಾಸಂಸ್ಥೆ ಕಾಯದರ್ಶಿ ಬಿ.ಎನ್. ರಂಗನಾಥ ಹೇಳಿದರು.
ಇಲ್ಲಿಗೆ ಸಮೀಪದ ಬೂದಿಹಾಳು ಪಿ.ಬಿ. ಬಸವನಗೌಡ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ದೇವರಬೆಳಕೆರೆ ವಲಯಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ನಮ್ಮ ವಿದ್ಯಾಸಂಸ್ಥೆ ಸದಾ ಪಠ್ಯ ಮತ್ತು ಕ್ರೀಡೆಗೆ ಬೆಂಬಲ ನೀಡುತ್ತಿದೆ. ಕ್ರೀಡೆಯು ವಿದ್ಯಾರ್ಥಿಗಳ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆ. ತಾರತಮ್ಯ ಮಾಡದೇ ತೀರ್ಪು ನೀಡಬೇಕಾದ್ದು ನಿರ್ಣಾಯಕರ ಕರ್ತವ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕಿ ಮಂಜುಳಾ ಮಾತನಾಡಿ, ಆಟೋಟದಲ್ಲಿ ೧೪ ಮತ್ತು ೧೭ರ ವಯೋಮಿತಿಯ 2 ವಿಭಾಗದಲ್ಲಿ ಭಾಗವಹಿಸುವ ಪ್ರತಿ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ ನಂತರ ಕ್ರೀಡೆಗೆ ಕಳುಹಿಸುವುದು ಹೊಸ ನಿಯಮವಾಗಿದೆ. ಯಾವುದೇ ದೈಹಿಕ ಶಿಕ್ಷಕರು ರಾಜಕೀಯ ಮಾಡದೇ ತೀರ್ಪು ನೀಡಬೇಕು. ತೀರ್ಪು ಒಪ್ಪಿಗೆ ಇಲ್ಲದಿದ್ದರೆ ಗಂಟೆ ಒಳಗೆ ತಕರಾರು ಹಾಕುವ ಅವಕಾಶವಿದೆ ಎಂದು ಎಚ್ಚರಿಸಿದರು.ತಾಲೂಕು ಗ್ಯಾರಂಟಿ ಸಮಿತಿ ಮುಖ್ಯಸ್ಥ ನಂದಿಗಾವಿ ಶ್ರೀನಿವಾಸ್ ಗುಂಡು ಎಸೆತ ಮೂಲಕ ಚಾಲನೆ ನೀಡಿ ಮಾತನಾಡಿ, ಶೇ.೫೦ ಗ್ರಾಮೀಣ ಭಾಗದ ಆಟಗಾರರು ಕ್ರೀಡೆಯಲ್ಲಿ ಯಶಸ್ಸು ಕಂಡಿದ್ದಾರೆ. ವೇದಿಕೆಗೆ ಮೇಲ್ಛಾವಣಿ ಹಾಕಿಸಿಕೊಡುವುದಾಗಿ ಭರವಸೆ ನೀಡಿದರು.
ಮುಖಂಡ ಗುಳದಹಳ್ಳಿ ಮಹಂತೇಶ್ ಅವರು, ಕ್ರೀಡೆಯಲ್ಲಿ ಬಾಹ್ಯ ಮತ್ತು ಆಂತರಿಕ ಕ್ರೀಡೆಗಳೆಂದು ಎರಡು ವಿಧಗಳಿವೆ. ಗುಂಪು ಮತ್ತು ವೈಯಕ್ತಿಕ ಆಟಗಳಾಗಿದ್ದು, ಶಿಕ್ಷಣಕ್ಕೆ ಸಮಾನ ಪೈಪೋಟಿ ನೀಡುವುದು ಕ್ರೀಡೆಯಾಗಿದೆ ಎಂದರು.ಗ್ರಾ.ಪಂ. ಅಧ್ಯಕ್ಷೆ ಸೀತಮ್ಮ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಸೌಪರ್ಣಿಕಾ ಪ್ರತಿಜ್ಞಾವಿಧಿ ಬೋಧಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪ, ತಾಲೂಕು ದೈಹಿಕ ಅಧಿಕಾರಿ ವಿಜಯ್, ಮುಖ್ಯ ಶಿಕ್ಷಕ ರುದ್ರೇಶ್, ತೀರ್ಪುಗಾರರಾದ ಗೀತಾ, ಶೀಲಾ, ಯುವರಾಜ್, ಅರುಣ್, ಪದ್ದಪ್ಪ, ಜೆ.ಮಂಜುನಾಥ್, ಭೀಮಪ್ಪ, ಅಮಿತ್ ಹಾಗೂ ಗ್ರಾಪಂ ಸದಸ್ಯರು ಮತ್ತು ಗುಳದಹಳ್ಳಿ, ಬೂದಿಹಾಳು, ದೇವರಬೆಳಕೆರೆ, ಕುಣೆಬೆಳಕೆರೆ, ನಿಟ್ಟೂರು, ಕುಂಬಳೂರು ಗ್ರಾಮಗಳ ೧೪ ಶಾಲೆಗಳ ಕ್ರೀಡಾಪಟುಗಳು ಭಾಗವಹಿಸಿದ್ದವು.
- - - (** ಈ ಫೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಬಹುದು)-ಚಿತ್ರ-೧.ಜೆಪಿಜಿ:
ಮಲೇಬೆನ್ನೂರು ಸಮೀಪದ ಬೂದಿಹಾಳು ಪಿ.ಬಿ. ಬಸವನಗೌಡ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ನಡೆದ ದೇವರಬೆಳಕೆರೆ ವಲಯಮಟ್ಟದ ಪ್ರೌಢಶಾಲಾ ಕ್ರೀಡಾಕೂಟವನ್ನು ನಂದಿಗಾವಿ ಶ್ರೀನಿವಾಸ್ ಗುಂಡು ಎಸೆತ ಮೂಲಕ ಉದ್ಘಾಟಿಸಿದರು.