ಹಿರಿಯ ಶ್ರೀಗಳ ಹಾದಿಯಲ್ಲಿ ಮಠ ಉನ್ನತ ಸ್ಥಾನಕ್ಕೇರಲಿ

| Published : Oct 06 2024, 01:19 AM IST

ಸಾರಾಂಶ

ಕೊಳ್ಳೇಗಾಲ: ಆಲಹಳ್ಳಿ ಮಠದ ಹಿರಿಯ ಶ್ರೀ ಶಿವಕುಮಾರಸ್ವಾಮಿ ಅ‍ವರ ಹಾದಿಯಲ್ಲಿ ಶನಿವಾರ ಪಟ್ಟಾಭಿಷೇಕ ಸ್ವೀಕರಿಸಿದ ಕಿರಿಯ ಶ್ರೀ ಮಠದ ಏಳ್ಗೆಗೆ ದಾಸೋಹ ಪರಿಕಲ್ಪನೆಯಲ್ಲಿ ಎಲ್ಲರ ಸಹಕಾರ ಪಡೆದು ಸಾಗುವಂತಾಗಲಿ ಎಂದು ಜಗದ್ಗುರು ಶ್ರೀ ಶಿವರಾತ್ರಿದೇಶಿ ಕೇಂದ್ರ ಮಹಾ ಸ್ವಾಮೀಜಿ ಹೇಳಿದರು.

ಕೊಳ್ಳೇಗಾಲ: ಆಲಹಳ್ಳಿ ಮಠದ ಹಿರಿಯ ಶ್ರೀ ಶಿವಕುಮಾರಸ್ವಾಮಿ ಅ‍ವರ ಹಾದಿಯಲ್ಲಿ ಶನಿವಾರ ಪಟ್ಟಾಭಿಷೇಕ ಸ್ವೀಕರಿಸಿದ ಕಿರಿಯ ಶ್ರೀ ಮಠದ ಏಳ್ಗೆಗೆ ದಾಸೋಹ ಪರಿಕಲ್ಪನೆಯಲ್ಲಿ ಎಲ್ಲರ ಸಹಕಾರ ಪಡೆದು ಸಾಗುವಂತಾಗಲಿ ಎಂದು ಜಗದ್ಗುರು ಶ್ರೀ ಶಿವರಾತ್ರಿದೇಶಿ ಕೇಂದ್ರ ಮಹಾ ಸ್ವಾಮೀಜಿ ಹೇಳಿದರು.

ತಾಲೂಕಿನ ಆಲಹಳ್ಳಿಯಲ್ಲಿ ಅಯೋಜಿಸಲಾಗಿದ್ದ ಶಿವಕುಮಾರಸ್ವಾಮಿ ಅವರ ಸಂಸ್ಮರಣೆ, ನೂತನ ಶ್ರೀಗಳಿಗೆ ಪಟ್ಟಾಧಿಕಾರ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಹಿರಿಯ ಶ್ರೀಗಳು ಶುಭ ಸಮಾರಂಭಗಳಿಗೆ ಜ್ಯೋತಿಷ್ಯ ಹೇಳುವ ಮೂಲಕ ಈ ಭಾಗದ ಜನರಿಗೆ ಚಿರಪಚಿತರಾಗಿದ್ದರು, ದಾಸೋಹ ಪರಿಕಲ್ಪನೆಯಲ್ಲಿ ನಿಷ್ಟರಾಗಿದ್ದರು, ಭಕ್ತಾಧಿಗಳಲ್ಲಿ ಅಪಾರ ಗೌರವ ಹೊಂದಿದ್ದವರು, ಅವರಂತೆ ನೂತನ ಶ್ರೀಗಳು ಮಠ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಬೇಕು, ದಾಸೋಹ ಪರಿಕಲ್ಪನೆ ಈಮಠದ ದ್ಯೇಯವಾಗಿರಲಿ ಎಂದು ಆಶಿಸಿದರು. ಧಾರ್ಮಿಕ ಸಭೆಯಲ್ಲಿ ವಿಧಿ, ವಿಧಾನಗಳೊಂದಿಗೆ ಸುತ್ತೂರು ಶ್ರೀಗಳು ಆಲಹಳ್ಳಿ ಪಟ್ಟದ ಮಠಕ್ಕೆ ಇಮ್ಮಡಿ ಬಸಪ್ಪ ಸ್ವಾಮೀಜಿ ಅವರಿಗೆ ಪಟ್ಟಾಧಿಕಾರ ನೆರವೇರಿಸಿದರು.

ಈ ಸಂದರ್ಭದಲ್ಲಿ ತುಮಕೂರು ಸಿದ್ದಗಂಗಾ ಮಠದ ಸಿದ್ಧಲಿಂಗಮಹಾಸ್ವಾಮೀಜಿ,‌ ಕನಕಪುರ ದೇಗುಲ ಮಠದ ಚೆನ್ನಬಸವ ಸ್ವಾಮೀಜಿ,‌ ರೇಣುಕಾಶಿವಾಚಾರ್ಯ ಸ್ವಾಮೀಜಿ, ಚೆನ್ನ ಬಸವಸ್ವಾಮೀಜಿ, ಗುರು ಮಲ್ಲೇಶ್ವರ ಮಹಾದಾಸೋಹ ಸಂಸ್ಥಾನ ಮಠದ ಮಹಾಂತಸ್ವಾಮೀಜಿ, ಮೈಸೂರು ಹೊಸಮಠ ಚಿದಾನಂದ ಸ್ವಾಮೀಜಿ, ಕುದೇರು ಮಠದ ಗುರುಶಾಂತ ಸ್ವಾಮೀಜಿ, ಡಾ.ಶ್ರೀ ಶರತ್‌ ಚಂದ್ರಸ್ವಾಮೀಜಿ, ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ, ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ವೃಷಬೇಂದ್ರ, ಎ.ಬಿ.ಬಸವಣ್ಣ ಹಾಗೂ ಗ್ರಾಮದ ಯುವ ಮುಖಂಡ ಎ.ಬಿ.ಮಧು, ಸೋಲಾರ್‌ ಮಂಧು, ದಿಲೀಪ್, ಮಹೇಶ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡರು.