ಸಾರಾಂಶ
ಬಿಜೆಪಿ ಯುವ ಮೋರ್ಚಾ ಬೀದರ್ ನಗರ ಮಂಡಲದಿಂದ ಪಾಪನಾಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಸಸಿ ನೆಡುವ ಕಾರ್ಯಕ್ರಮ ಮಂಗಳವಾರ ಜರುಗಿತು.
ಕನ್ನಡಪ್ರಭ ವಾರ್ತೆ ಬೀದರ್
ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶ ಹಾಗೂ ಧರ್ಮದ ಸೇವೆಗೆ ಇನ್ನಷ್ಟು ಹೆಚ್ಚು ನೀಡಲಿ ಎಂದು ಮಂಗಳವಾರ ಬಿಜೆಪಿ ಯುವ ಮೋರ್ಚಾ ಬೀದರ್ ನಗರ ಮಂಡಲದಿಂದ ಪಾಪನಾಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಪ್ರಧಾನಿಗಳ 74ನೇ ಹುಟ್ಟು ಹಬ್ಬದ ನಿಮಿತ್ಯ 74 ಸಸಿ ನೆಡುವ ಸಂಕಲ್ಪ ಮಾಡಲಾಯಿತು.
ನಂತರ ಗೋ ಮಾತೇ ಪೂಜೆ ಹಾಗೂ ಬಡ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಹುಡುಗಿ, ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಸುಧಾಕರ ರೆಡ್ಡಿ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಪ್ರಧಾನ ಕಾರ್ಯದರ್ಶಿ ಪೀರಪ್ಪಾ ಔರಾದೆ, ಮಹಾದೇವ ಹಲಸೂರೆ, ಬೀದರ್ ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ, ಬಾಬು ವಾಲಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ ಸ್ವಾಮಿ, ಸಂದೀಪ ಪಾಟೀಲ, ಪ್ರಧಾನ ಕಾರ್ಯದರ್ಶಿ ಪುಷ್ಪಕಕುಮಾರ ಜಾಧವ, ಬಸವ ಮೂಲಗೆ, ಗಣೇಶ, ನೀತಿನ ನವೇಲಕೆಲೆ, ದೀಪಕ ಠಾಕೂರ ಹಾಗೂ ಯುವ ಮೋರ್ಚಾ ಪದಾಧಿಕಾರಿಗಳಾದ ಸುಧೀಂದ್ರ, ಉಪ್ಪಾರ ಕೃಷ್ಣ, ಆಕಾಶ, ಸಾಯಿನಾಥ ಮಂಗಲಗಿ, ಸಚಿನ್ ಸ್ವಾಮಿ, ರೋಹಿತ ಮಂಗಲಗಿ, ಮುಕೇಶ ಜಾಧವ ಸೇರಿ ಕಾರ್ಯದರ್ತರು ಉಪಸ್ಥಿತರಿದ್ದರು.