ಹಳೆಯಂಗಡಿಯಲ್ಲಿ ಐದು ವರ್ಷಗಳ ಹಿಂದೆ ಉತ್ತಮ ಉದ್ದೇಶದಿಂದ ಪ್ರಾರಂಭಗೊಂಡ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅತಿ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಯುವಜನತೆಗೆ ಉದ್ಯೋಗದ ಸೃಷ್ಟಿಯ ಮೂಲಕ ಸಮಾಜದಲ್ಲಿ ಸಹಕಾರವೇ ಮೂಲ ತತ್ವ ಎಂಬಂತೆ ಕೆಲಸ ಮಾಡುತ್ತಿರುವ ಈ ಸೊಸೈಟಿಯು ರಾಜ್ಯ ವ್ಯಾಪ್ತಿ ಶಾಖೆಗಳೊಂದಿಗೆ ಪಸರಿಸಲೆಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಮೂಲ್ಕಿ/ಉಡುಪಿ ; ಹಳೆಯಂಗಡಿಯಲ್ಲಿ ಐದು ವರ್ಷಗಳ ಹಿಂದೆ ಉತ್ತಮ ಉದ್ದೇಶದಿಂದ ಪ್ರಾರಂಭಗೊಂಡ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅತಿ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಯುವಜನತೆಗೆ ಉದ್ಯೋಗದ ಸೃಷ್ಟಿಯ ಮೂಲಕ ಸಮಾಜದಲ್ಲಿ ಸಹಕಾರವೇ ಮೂಲ ತತ್ವ ಎಂಬಂತೆ ಕೆಲಸ ಮಾಡುತ್ತಿರುವ ಈ ಸೊಸೈಟಿಯು ರಾಜ್ಯ ವ್ಯಾಪ್ತಿ ಶಾಖೆಗಳೊಂದಿಗೆ ಪಸರಿಸಲೆಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಉಡುಪಿಯ ಸನಿಲ್ ಪ್ಲಾಜಾದಲ್ಲಿ ನೂತನವಾಗಿ ಪ್ರಾರಂಭಗೊಂಡ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಐದನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.ಮೂಲ್ಕಿ ಸೀಮೆಯ ಸಾವಂತ ಅರಸರು ಮತ್ತು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದ್ದರು. ದೀಪ ಪ್ರಜಲ್ವನೆಗೈದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾರ್ಡ್ ಸ್ವಾರ್ಥರಹಿತ ಕಾರ್ಯ ದಕ್ಷತೆಯಿಂದಾಗಿ ಸೊಸೈಟಿಯು ಉನ್ನತ ಸ್ಥಾನಕ್ಕೆ ಏರುತ್ತಿದ್ದು, ಉದ್ಯೋಗ ಸೃಷ್ಟಿಯ ಮೂಲಕ ಬಡ ಜನತೆಯ ಕಣ್ಣೀರು ಒರೆಸುವ ಕಾರ್ಯ ಮಾಡುತ್ತಿದೆ ಎಂದರು.

ಸರ್ವೇಜನಾಃ ಸುಖಿನೋ ಭವಂತು ಎಂಬಂತೆ ಈ ಸೊಸೈಟಿ ಕಾರ್ಯನಿರ್ವಹಿಸುತ್ತಿದ್ದು, ಇನ್ನಷ್ಟು ಅಭಿವೃದ್ಧಿಯಾಗಲೆಂದು ಹಾರೈಸಿದರು.

ಸೇಫ್ ಲಾಕರ್ ಉದ್ಘಾಟನೆ ಮಾಡಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸ್ಪರ್ಧೆ ನೀಡುವ ಜಿಲ್ಲೆಯ ಸಹಕಾರಿ ಸೊಸೈಟಿಗಳಲ್ಲಿ ಒಂದಾದ ಪ್ರಿಯದರ್ಶಿನಿ ಕೋ ಆಪರೇಟರ್ ಸೊಸೈಟಿ ಇನ್ನಷ್ಟು ಅಭಿವೃದ್ಧಿಯಾಗಲೆಂದು ಹಾರೈಸಿದರು. ಕಂಪ್ಯೂಟರ್ ವ್ಯವಸ್ಥೆ ಚಾಲನೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಿಥುನ್ ಎಮ್. ರೈ ಮಾಡಿದರು. ಪ್ರಿಯದರ್ಶಿನಿ ಸ್ವಸಹಾಯ ಪ್ರಥಮ ಗುಂಪಿನ ಸದಸ್ಯರಿಗೆ ದಾಖಲೆ ಪತ್ರವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಬೆಳಪು ಡಾ. ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಹಸ್ತಾಂತರಿಸಿದರು.

ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್., ಉಡುಪಿ ಜಿಲ್ಲಾ ಕೇಂದ್ರ ಸಹಕಾರಿ ಯೂನಿಯನ್ ಮತ್ತು ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ ಲಿ ನ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಸರಸ್ವತಿ ಕೋ ಆಪರೇಟಿವ್ ಸೊಸೈಟಿ, ಪಡುಕುತ್ಯಾರ್ ಉಡುಪಿಯ ಅಧ್ಯಕ್ಷ ಬಿ. ಸೂರ‍್ಯಕುಮಾರ್, ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ ಉಡುಪಿಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ, ಹೈಟೆಕ್ ಮೆಡಿಕೆರ್ ಹಾಸ್ಪಿಟಲ್ ಉಡುಪಿಯ ಎಂ.ಡಿ. ಡಾ.ಟಿ. ಎಸ್. ರಾವ್, ಎಂ ಎಸ್‌., ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘ ಉಡುಪಿಯ ಅಧ್ಯಕ್ಷ ಶ್ರೀಧರ್ ದೇವಾಡಿಗ, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಕಾಂಚನ್, ಉಡುಪಿ ಹೋಮಿಯೋಪಥಿಕ್ ಫಿಶಿಷಿಯನ್ ಡಾ.ಬೆರಿಲ್ ಎ. ಬೆರ್ನಾರ್ಡ್, ಕಟ್ಟಡ ಮಾಲೀಕ ಶಂಭು ಎ. ಸನಿಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸೊಸೈಟಿಯ ನಿರ್ದೇಶಕರಾದ ಉಮಾನಾಥ ಜೆ. ಶೆಟ್ಟಿಗಾರ್, ಧನಂಜಯ ಮಟ್ಟು, ಗೌತಮ್ ಜೈನ್, ಗಣೇಶ್ ಪ್ರಸಾದ್ ದೇವಾಡಿಗ, ಜೈ ಕೃಷ್ಣ ಕೋಟ್ಯಾನ್, ಡಾ. ಶೆರಿಲ್ ಅಯೋನ ಐಮನ್, ರೇಖಾ ಶೆಟ್ಟಿ, ಹರೀಶ್ ಎನ್ ಪುತ್ರನ್, ನವೀನ್ ಸಾಲ್ಯಾನ್ ಪಂಜ, ಮೋಹನದಾಸ್, ಅನಿಲ್ ಪೂಜಾರಿ ಸಸಿಹಿತ್ಲು, ರಜಿಯಾ ಬಾನು, ಕರಿಯ ಕಾಡಿಗ ಇದ್ದರು.

ಸೊಸೈಟಿ ಅಧ್ಯಕ್ಷ ಎಚ್ ವಸಂತ್ ಬೆರ್ನಾರ್ಡ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ವಂದಿಸಿದರು. ಶಾಖಾ ಪ್ರಬಂಧಕಿ ನಿಶಾ ಸುಹೈಲ್ ಡೇನಿಯಲ್ ಕಾರ್ಯಕ್ರಮ ನಿರೂಪಿಸಿದರು. ಲೆಕ್ಕಿಗರಾದ ಲೋಲಾಕ್ಷಿ, ವಿವಿಧ ಶಾಖಾ ಪ್ರಬಂಧಕರಾದ ಮೋಹನ್‌ದಾಸ್, ಪ್ರಜ್ಞಾಶ್ರೀ, ಅಕ್ಷತಾ ಶೆಟ್ಟಿ ಎಮ್, ಅಭಿಷ್ಟಾ ಜೈನ್, ಅಂಜಲಿ ಎಸ್ ದೇವಾಡಿಗ ಸಹಕರಿಸಿದರು.