ಸಾರಾಂಶ
ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿಯೇ ಬರೆಯುವಂತಾಗಬೇಕು. ಆಗ ಮಾತ್ರ ಕನ್ನಡ ಭಾಷೆ ಉಳಿಯಬಲ್ಲದು.
ಕನ್ನಡಪ್ರಭ ವಾರ್ತೆ ಸಿಂದಗಿ
ಕನ್ನಡ ನಾಡು- ನುಡಿ ಮತ್ತು ಜಲದ ಬಗ್ಗೆ ಕೇವಲ ನ.1ರಂದು ಅಷ್ಟೇ ಅಭಿಮಾನ ಪಡುವುದಲ್ಲ. ವರ್ಷದ ಪ್ರತಿಕ್ಷಣವೂ ಕೂಡ ಕನ್ನಡದ ಪ್ರೀತಿ ಹೆಚ್ಚಾಗಬೇಕು, ಅಂದಾಗ ಮಾತ್ರ ಕನ್ನಡ ಉಳಿಯುತ್ತದೆ ಎಂದು ಪಟ್ಟಣದ ಎಲೈಟ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಮುಖ್ಯಸ್ಥ ಮೈಬೂಬ್ ಅಸಂತಾಪೂರ್ ಹೇಳಿದರು.ಕನ್ನಡದಲ್ಲಿ ನಾಮಫಲಕಗಳನ್ನು ಕಡ್ಡಾಯಗೊಳಿಸಬೇಕು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭಿಸಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿಯೇ ಬರೆಯುವಂತಾಗಬೇಕು. ಆಗ ಮಾತ್ರ ಕನ್ನಡ ಭಾಷೆ ಉಳಿಯಬಲ್ಲದು. ಕನ್ನಡಿಗರ ಬಾಳನ್ನು ಬೆಳಗಬಲ್ಲದು. ಕನ್ನಡಿಗರು ಯಾವುದೇ ಮುಜುಗರಕ್ಕೆ ಒಳಪಡದೆ ಪರಭಾಷಿಕರನ್ನು ಕನ್ನಡದಲ್ಲಿ ಮಾತನಾಡಿಸಬೇಕು. ಇಂಗ್ಲಿಷ್ ಮತ್ತು ಹಿಂದಿ ಕಲಿತರೆ ಹೊಟ್ಟೆಗೆ ಅನ್ನ ಎಂಬ ಭಾವನೆ ಬಿಡಬೇಕು. ಕನ್ನಡಿಗನಾಗಿ ಹುಟ್ಟಿ ಕೊನೆಗೆ ಮಣ್ಣಲ್ಲಿ ಮಣ್ಣಾಗುವವರೆಗೂ ಕನ್ನಡಿಗನಾಗಿಯೇ ಬದುಕಿ ಬಾಳುವುದು ನಿಜವಾದ ಮನುಷ್ಯತ್ವವಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಪಂಚದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ನಮ್ಮ ಕನ್ನಡ ಭಾಷೆಯು ಒಂದಾಗಿದ್ದು ತನ್ನದೇ ಆದ ವೈಶಿಷ್ಟ್ಯ ಪೂರ್ಣ ಇತಿಹಾಸ ಮತ್ತು ಪರಂಪರೆ ಹೊಂದಿದೆ. ನಮ್ಮ ಭಾಷೆಯ ಭವ್ಯ ಪರಂಪರೆ ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬ ಕನ್ನಡಿಗನು ಭಾಷೆಯ ಯೋಧರಾಗಬೇಕು. ನಮ್ಮ ನಿತ್ಯ ಜೀವನದಲ್ಲಿ ಕನ್ನಡ ಭಾಷೆಯ ಬಳಕೆ ಪ್ರಥಮ ಆದ್ಯತೆ ನೀಡಬೇಕು. ನಮ್ಮ ಭಾಷೆಯ ಅಮೂಲ್ಯವಾದ ಸಾಹಿತ್ಯದ ಗ್ರಂಥಗಳನ್ನು ಪ್ರಪಂಚದ ವಿವಿಧ ಭಾಷೆಗಳಿಗೆ ಅನುವಾದಿಸಿ ವಿಶ್ವಮಟ್ಟದಲ್ಲಿ ಕನ್ನಡ ಭಾಷೆ ಮತ್ತು ಪರಂಪರೆಯ ಹಿರಿಮೆ ವಿಸ್ತರಿಸಬೇಕು. ಸಮಸ್ತ ಬಾಂಧವರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಮೆಹಬೂಬ್ ಅಸಂತಾಪುರ್ ತಿಳಿಸಿದ್ದಾರೆ.;Resize=(128,128))
;Resize=(128,128))
;Resize=(128,128))