ವಿಜಯ ದಾಸರ ಕೀರ್ತನೆಗಳು ಮನೆ-ಮನಗಳಿಗೆ ತಲುಪಲಿ

| Published : Jun 12 2024, 12:33 AM IST

ಸಾರಾಂಶ

ಸಿಂಧನೂರಿನ ಪಿಡಬ್ಲ್ಯೂಡಿ ಕ್ಯಾಂಪ್ ಸತ್ಯಮಾರುತಿ ದೇವಸ್ಥಾನದಲ್ಲಿ ಕೊಪ್ಪಳದಿಂದ ರಾಯಚೂರು ಹೋಗುವ ಮಧ್ಯೆ ವಿಜಯದಾಸರ ಶಿಲಾಮೂರ್ತಿಯ ಪೂಜೆಯಲ್ಲಿ ಪಾಲ್ಗೊಂಡ ಭಕ್ತ ಸಮೂಹ.

ಸಿಂಧನೂರು: ದಾಸ ಚತುಷ್ಠರಲ್ಲಿ ಒಬ್ಬರಾದ ವಿಜಯ ದಾಸರ ಹಾಡು, ಪದ-ಪದ್ಯಗಳು ಸೂಳಾದಿ, ಕೀರ್ತನೆಗಳು ಜೀವನಾನುಭವಗಳಿಂದ ಕೂಡಿವೆ. ಇವುಗಳನ್ನು ಮನೆ-ಮನಗಳಿಗೆ ತಲುಪಿಸುವ ಕಾರ್ಯ ನಡೆಯಲಿ ಎಂದು ಸೌರಭ ದಾಸ ಸಾಹಿತ್ಯದ ಪ್ರಮೋದಚಾರ್ಯ ಪೂಜಾರ ಹೇಳಿದರು.

ಅವರು ನಗರದ ಪಿಡಬ್ಲ್ಯೂಡಿ ಕ್ಯಾಂಪ್ ಸತ್ಯಮಾರುತಿ ದೇವಸ್ಥಾನದಲ್ಲಿ ಕೊಪ್ಪಳದಿಂದ ರಾಯಚೂರು ಹೋಗುವ ಮಧ್ಯೆ ವಿಜಯದಾಸರ ಶಿಲಾಮೂರ್ತಿ ಪೂಜಾ ಸಮಾರಂಭದಲ್ಲಿ ಮಾತನಾಡಿ, ವಿಜಯ ದಾಸರ ಹಾಡುಗಳನ್ನು ಜನಸಾಮಾನ್ಯರು ಇಹಪರದಲ್ಲಿ ಸಾಧನೆ ಮಾಡಬಹುದು. ಎಲ್ಲಾ ಭಜನಾ ಮಂಡಳಿಗಳು ವಿಜಯದಾಸರ ಸೇವೆ ಮಾಡಲಿ ಎಂದರು. ಮಠಾಧಿಕಾರಿ ವೆಂಕಟಗಿರಿದಾಸ ಶಿಲಾ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿದರು. ಗುರುರಾಜ್ ಭಜನಾ ಮಂಡಳಿ ವಿಜಯ ವಿಠ್ಠಲ, ಶ್ರೀ ರಾಮ, ಜಗನ್ನಾಥ ಹಾಗೂ ಕಾಡ ಮಾರುತಿ ಭಜನಾ ಮಂಡಳಿಗಳ ಸದಸ್ಯರು ಭಾಗವಹಿಸಿದ್ದರು.

ಮುಕುಂದಆಚಾರ್ಯ ರಾಯಚೂರು, ವಸಿಷ್ಠಧಾಮ ಸಂಚಾಲಕ ಭೀಮಸೇನಾಚಾರ್ಯ ನವಲಿ, ಸತ್ಯನಾರಾಯಣ ಆಚಾರ್ಯ ನವಲಿ, ರಾಘವೇಂದ್ರ ಧಡೆಸಗೂರು, ಗುರುರಾಜ್ ಅಲ್ದಾಳ, ವಾದಿರಾಜ್, ರವಿ ಜೂರುಟಗಿ, ಸೌರಭದಾಸ ಸಾಹಿತ್ಯ ವಿದ್ಯಾಲಯದ ಎಲ್ಲ ವರ್ಗದ ವಿದ್ಯಾರ್ಥಿಗಳು ವಿಜಯದಾಸರ ಮೂರ್ತಿಯ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.