ಸಮಾನತೆಯ ಹಾಗೂ ಮಾನವೀಯ ಮೌಲ್ಯ ಕಲ್ಪಿಸಿಕೊಟ್ಟ ಬಾಬಾ ಸಾಹೇಬ್‌ ಡಾ. ಬಿ.ಆರ್. ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿಯಾಗಿದ್ದು ಅವರ ಸೇವೆ ಪ್ರತಿಯೊಬ್ಬ ಭಾರತೀಯರು ಸ್ಮರಿಸಬೇಕು ಎಂದು ದಲಿತ ಮುಖಂಡ ಹಾಗೂ ನಿವೃತ್ತ ಪ್ರಾಂಶುಪಾಲ ಬೆಳ್ಳಿಬಟ್ಟಲು ಬಸವಲಿಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಸಮಾನತೆಯ ಹಾಗೂ ಮಾನವೀಯ ಮೌಲ್ಯ ಕಲ್ಪಿಸಿಕೊಟ್ಟ ಬಾಬಾ ಸಾಹೇಬ್‌ ಡಾ. ಬಿ.ಆರ್. ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿಯಾಗಿದ್ದು ಅವರ ಸೇವೆ ಪ್ರತಿಯೊಬ್ಬ ಭಾರತೀಯರು ಸ್ಮರಿಸಬೇಕು ಎಂದು ದಲಿತ ಮುಖಂಡ ಹಾಗೂ ನಿವೃತ್ತ ಪ್ರಾಂಶುಪಾಲ ಬೆಳ್ಳಿಬಟ್ಟಲು ಬಸವಲಿಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಶನಿವಾರ ಪಟ್ಟಣದ ಟೋಲ್‌ಗೇಟ್‌ನಲ್ಲಿರುವ ಪ್ರತಿಮೆಗೆ ಮಾರ್ಲಾಪಣೆ ಸಲ್ಲಿಸಿದ ಬಳಿಕ ,ಡಾ. ಬಿ.ಆ‌ರ್. ಅಂಬೇಡ್ಕ‌ರ್ ಅವರ 69ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತ್ಯಂತ ಕಡು ಬಡತನದಲ್ಲಿ ಜನಿಸಿ, ಅಸ್ಪಷೃತೆ, ಅಸಮಾನತೆ ವಿರುದ್ದ ಹೋರಾಡಿದ ಮಹಾ ನಾಯಕ ಎಂದರೆ, ಡಾ.ಬಿ.ಆರ್‌.ಅಂಬೇಡ್ಕರ್‌, ಅವರ ಚಿಂತನೆ, ಸಾಮಾಜಿಕ ನ್ಯಾಯ ಹಾಗೂ ಶೋಷಿತ ವರ್ಗಗಳಿಗೆ ಕಲ್ಪಿಸಿದ ಸೌಲಭ್ಯದ ಕೀರ್ತಿ ಅವರಿಗೆ ಸಲ್ಲಬೇಕಿದೆ ಎಂದರು.

ಬಡ ಹಾಗೂ ಎಲ್ಲ ವರ್ಗದವರ ಕಲ್ಯಾಣಕ್ಕಾಗಿ ಅವರ ಜೀವನವನ್ನೆ ಮುಡಿಪಿಟ್ಟು ಈ ದೇಶಕ್ಕೆ ಮಾದರಿಯ ಸಂವಿಧಾನ ಕಲ್ಪಿಸಿಕೊಟ್ಟಿದ್ದು, ಅವರ ಅನೇಕ ಹೋರಾಟದ ಘಟ್ಟ ಸೇರಿದಂತೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ದೂರದೃಷ್ಟಿ, ಆದರ್ಶ ಹಾಗೂ ಸಾಮಾಜಿಕ ಪರಿಕಲ್ಪನೆ ಬಗ್ಗೆ ವಿವರಿಸಿ, ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಈ ದಿನ ಗೌರವ ಸಲ್ಲಿಸಬೇಕಿದೆ ಎಂದರು ಕರೆ ನೀಡಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಕಗೆ.ತಿಪ್ಪೇಸ್ವಾಮಿ ಮಾತನಾಡಿ, ವಿಶ್ವದಲ್ಲಿಯೇ ಕಾಣದಂತಹ ಭಾರತದ ಹಲವು ವೈವಿಧ್ಯತೆಗಳನ್ನು ಏಕೀಕರಣಗೊಳಿಸಿ, ಸಂವಿಧಾನದ ಮೂಲಕ ಎಲ್ಲರಿಗೂ ಸಮಾನತೆಯ ಬದುಕು ಹಾಗೂ ಹಕ್ಕು ಕಲ್ಪಿಸಿಕೊಟ್ಟ ಕೀರ್ತೀ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಸಲ್ಲಬೇಕು. ಸಂವಿಧಾನದಲ್ಲಿ ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿ, ಪ್ರತಿ ಭಾರತೀಯ ಪ್ರಜೆಗೆ ಆತ್ಮ ವಿಶ್ವಾಸ ತಂದು ಕೊಟ್ಟಿದ್ದು, ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ಸಮುದಾಯಗಳಿಗೆ ಅಂಬೇಡ್ಕರ್‌ ಕೊಟ್ಟ ಸಂವಿಧಾನದಿಂದ ಉತ್ತಮ ಬದುಕನ್ನು ಕಟ್ಟಿಕೊಟ್ಟಿದೆ ಎಂದರು.

ಕನ್ನಮೇಡಿ ಕೃಷ್ಣಮೂರ್ತಿ ಮಾತನಾಡಿ,ಸಂವಿಧಾನದ ಮೂಲಕ ಅಂಬೇಡ್ಕರ್‌ ಕಲ್ಪಿಸಿಕೊಟ್ಟ ಸಾಮಾಜಿಕ ನ್ಯಾಯದ ಪರಿಕಲ್ಪನೆ ಹಿನ್ನಲೆಯಲ್ಲಿ ಭಾರತೀಯರೆಲ್ಲ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದರು.

ಇಲ್ಲಿನ ಅದರ್ಶ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಂಡ್ಲಹಳ್ಳಿ ಪ್ರಕಾಶ್, ದೇವಲಕೆರೆ ಲಿಂಗಣ್ಣ,ಮಾದಿಗ ಡಂದೋರ ಜಿಲ್ಲಾ ಉಪಾಧ್ಯಕ್ಷ ವಿ.ಎಸ್‌.ನಾಗೇಶ್, ಕಡಮಕುಂಟೆ ಸುಬ್ಬರಾಯಪ್ಪ, ಡಿಎಸ್‌ಎಸ್‌ ಸಂಚಾಲಕ ಬಿ.ಪಿ.ಪೆದ್ದನ್ನ, ಕಡಪಲಕರೆ ನರಸಿಂಹಪ್ಪ, ಅಪ್‌ಬಂಡೆ ಗೋಪಾಲ್‌, ನಲಿಗಾನಹಳ್ಳಿ ಮಂಜುನಾಥ್‌, ಪಾತಲಿಂಗಪ್ಪ, ದವಡಬೆಟ್ಟ ಮದ್ಲೇಟಪ್ಪ, ಕನ್ನಮೇಡಿ ನಾಗರಾಜ್‌, ಡಿಎಸ್‌ಎಸ್‌ ಜಿಲ್ಲಾ ಸಂಘಟನಾ ಸಂಚಾಲಕ ಟಿ.ಎ.ನರಸಿಂಹಪ್ಪ, ಡಿಜೆಎಸ್‌ನ ಮುಖಂಡ ಕೀರ್ಲಾಲಹಳ್ಳಿ ಈರಣ್ಣ,ದೇವಲಕೆರೆ ಹನುಮಂತರಾಯ,ಸಿದ್ದಪ್ಪ,ಹೊಸಕೋಟೆ ಗೋಪಾಲ್, ರಾಮಾಂಜಿನಪ್ಪ,ಕೆಂಚಪ್ಪ,ನಾಗರಾಜ್‌,ವಿವಿಧ ದಲಿತ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.