ಸಾರಾಂಶ
ಪತ್ರಕರ್ತರು ಅಧ್ಯಯನದ ಜತೆಗೆ ಸಮಾಜಮುಖಿ ಚಿಂತನೆ ಹಾಗೂ ಬರಹಗಳ ಮೂಲಕ ಅಭಿವೃದ್ಧಿಗೆ ಒತ್ತು ನೀಡಬೇಕಿದೆ ಎಂದು ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಭೀಮಶೇನರಾವ್ ಕುಲಕರ್ಣಿ ಹೇಳಿದರು.
ಹುಣಸಗಿ: ಪತ್ರಕರ್ತರು ಅಧ್ಯಯನದ ಜತೆಗೆ ಸಮಾಜಮುಖಿ ಚಿಂತನೆ ಹಾಗೂ ಬರಹಗಳ ಮೂಲಕ ಅಭಿವೃದ್ಧಿಗೆ ಒತ್ತು ನೀಡಬೇಕಿದೆ ಎಂದು ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಭೀಮಶೇನರಾವ್ ಕುಲಕರ್ಣಿ ಹೇಳಿದರು.
ಹುಣಸಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪತ್ರಿಕಾ ದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹುಣಸಗಿ ತಾಲೂಕು ಸಾಕಷ್ಟು ಐತಿಹಾಸಿಕ ಮಹತ್ವದ ತಾಲೂಕು ಆಗಿದ್ದು, ಇಲ್ಲಿ ಸಾಕಷ್ಟು ಸುದ್ದಿಯ ಕಣಜವೇ ಇದೆ. ಆದರೆ ಅದನ್ನು ಗ್ರಹಿಸುವ ಸಾಮರ್ಥ್ಯ ಪತ್ರಕರ್ತರಲ್ಲಿ ಬೇಕು ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿ, ಸಾಮಾಜಿಕ ಸಮಸ್ಯೆಗಳ ವಿರುದ್ಧ ಬೆಳಕು ಚೆಲ್ಲುವ ಜೊತೆಗೆ, ಸಮಾಜದ ಹಿತಕ್ಕಾಗಿಯೇ ಕಾರ್ಯನಿರ್ವಹಿಸುವ ಮೂಲಕ ಪತ್ರಿಕಾ ಧರ್ಮ ಪಾಲನೆ ಮಾಡುವದು ಮುಖ್ಯ ಎಂದು ಹೇಳಿದರು.
ಪತ್ರಕರ್ತ ಬಾಲಪ್ಪ ಕುಪ್ಪಿ ಮಾತನಾಡಿ, ಇಂದು ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ತುಡಿಯುವ ಮನೋಭಾವನೆಯನ್ನು ರೂಡಿಸಿಕೊಳ್ಳಬೇಕಿದೆ ಎಂದು ಹೇಳಿದರು.ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಚಂದ್ರಶೇಖರ, ಹಿರಿಯ ಪತ್ರಕರ್ತ ಬಸವರಾಜ ಅಂಗಡಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಪವನ್ ದೇಶಪಾಂಡೆ ಕೊಡೇಕಲ್ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಕಟ್ಟಿಮನಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಗುತ್ತೇದಾರ ವಂದಿಸಿದರು.
ಈ ಸಂದರ್ಭಲ್ಲಿ ಪತ್ರಕರ್ತರಾದ ಮಲ್ಲಾರಾವ್ ಕುಲಕರ್ಣಿ, ಬಸವರಾಜ ಕಟ್ಟಿಮನಿ, ಮಲ್ಲಿಕಾರ್ಜುನ ಗುತ್ತೇದಾರ, ಸಿದ್ದನಗೌಡ ಬಿರಾದಾರ, ಬಸವರಾಜ ಶಾರದಳ್ಳಿ, ಅನಿಲ ಬಿರಾದಾರ, ಶಾಂತು ಒನಕುದರಿ, ಪ್ರೀತಿ ರಾಠಿ ಸೇರಿದಂತೆ ಇತರರು ಇದ್ದರು.