ಸಾರಾಂಶ
ಯಮಕನಮರಡಿ ಮತಕ್ಷೇತ್ರದ ಕಾರ್ಯಕರ್ತರ ಸಭೆಯು ಸೆ.17ರಂದು ಸಂಜೆ 4ಕ್ಕೆ ಹೆಬ್ಬಾಳ ಗ್ರಾಮದ ಮಧುಬನ ಮಂಗಲ ಕಾರ್ಯಾಲಯದಲ್ಲಿ ನಡೆಯಲಿದೆ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಹುಕ್ಕೇರಿ ಗ್ರಾಮೀಣ ವಿದ್ಯತ್ ಸಹಕಾರಿ ಸಂಘದ ಚುನಾವಣೆ ನಿಮಿತ್ತ ಮಾಜಿ ಸಂಸದ ರಮೇಶ ಕತ್ತಿ ಹಾಗೂ ಮಾಜಿ ಸಚಿವ ಎ.ಬಿ.ಪಾಟೀಲ ಬೆಂಬಲಿತ ಯಮಕನಮರಡಿ ಮತಕ್ಷೇತ್ರದ ಕಾರ್ಯಕರ್ತರ ಸಭೆಯು ಸೆ.17ರಂದು ಸಂಜೆ 4ಕ್ಕೆ ಹೆಬ್ಬಾಳ ಗ್ರಾಮದ ಮಧುಬನ ಮಂಗಲ ಕಾರ್ಯಾಲಯದಲ್ಲಿ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವಾರಜ ಹುಂದ್ರಿ ಹೇಳಿದರು.ಇಲ್ಲಿನ ಹೆಬ್ಬಾಳ ಗ್ರಾಮದಲ್ಲಿ ಭಾನುವಾರ ನಡೆದ ಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ.ಉಮೇಶ ಕತ್ತಿ ಅವರು ಹುಕ್ಕೇರಿ ತಾಲೂಕಿನ ಅಭಿವೃದ್ಧಿ ಮಾಡುವ ಜೊತೆಗೆ ಪಕ್ಷಾತೀತವಾಗಿ ರಾಜಕಾರಣ ಮಾಡಿದ್ದಾರೆ. ತಾಲೂಕಿನ ಜನರಿಗೆ ಯಾವುದೇ ತೊಂದರೆಯಾಗದಂತೆ ನೊಡಿಕೊಂಡಿದ್ದರು. ಆದರೇ ಇತ್ತೀಚೆಗೆ ಸಹಕಾರಿ ರಂಗದಲ್ಲಿ ರಾಜಕೀಯ ಪ್ರವೇಶಿಸಿದ್ದು ಗೂಂಡಾಗರ್ದಿ ಹೆಚ್ಚಾಗಿದೆ. ಇದರ ಬಗ್ಗೆ ಜನ ಎಚ್ಚೆತ್ತು, ನಮ್ಮ ತಾಲೂಕಿನ ಅಭಿವೃದ್ಧಿಗಾಗಿ, ನಮ್ಮ ಸಹಕಾರಿ ಸಂಘಗಳು ನಮ್ಮಲ್ಲಿಯೇ ಉಳಿಯಬೇಕಾದರೇ ಬರುವ ಸೆ.28 ರಂದು ನಡೆಯಲಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ರಮೇಶ ಕತ್ತಿ ಹಾಗೂ ಎ.ಬಿ.ಪಾಟೀಲ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಗೆ ಆಗಮಿಸಿ ತಮ್ಮ ಸಲಹೆ ಸೂಚನೆ ನೀಡಬೇಕೆಂದು ಬಸವರಾಜ ಹುಂದ್ರಿ ಕರೆ ನೀಡಿದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ನಿರ್ದೇಶಕ ಕಲಗೌಡ ಪಾಟೀಲ ಮಾತನಾಡಿ, ಈ ಸಭೆಯು ಪಕ್ಷಾತೀತವಾಗಿದ್ದು ಎಲ್ಲರೂ ಭಾಗವಹಿಸಿ ಬರುವ ಸೆ.28ರಂದು ನಡೆಯಲಿರುವ ಚುಣಾವಣೆಯ ಅಭ್ಯರ್ಥಿಗಳನ್ನು ಗೆಲ್ಲಿಸಬೆಕೆಂದು ಕೋರಿದರು. ರಾಜನ್ ಮಠಪತಿ ಸ್ವಾಗತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಿದ್ದಲಿಂಗ ಸಿದ್ದಗೌಡರ, ಗುರುಸಿದ್ದ ಪಾಯಣ್ಣವರ, ಯಲ್ಲಪ್ಪಾ ಗಡಕರಿ, ಬಾಳಯ್ಯ ತವಗಮಠ, ಡಾ.ಗಣೇಶ ಪಾಟೀಲ, ಆನಂದ ಕಂಕಣವಾಡಿ, ಶಿವಾನಂದ ಬಾಗೇವಾಡಿ, ಸಂತೋಷ ಪಾಟೀಲ ಇನ್ನಿತರರು ಉಪಸ್ಥಿತರಿದ್ದರು.