ಸಾರಾಂಶ
2021ರ ಆ.1.ರಂದು ಮಧ್ಯಪ್ರದೇಶದ ಶ್ವೇತಾ ಅವರು 45 ನಿಮಿಷ 26 ಸೆಕೆಂಡ್ 50 ಮಿಲಿ ಸೆಕೆಂಡ್‌ನಲ್ಲಿ ನಡೆಸಿದ ಯೋಗದ ಕೂರ್ಮಾಸನ ಭಂಗಿಯ ದೀರ್ಘಾವಧಿಯ ಪ್ರದರ್ಶನದ ದಾಖಲೆಯನ್ನು ಮೇಘನಾ ಎಸ್.ಶೆಟ್ಟಿಗಾರ್ ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಲೇಡಿಹಿಲ್ ವಿಕ್ಟೋರಿಯಾ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ, ಯೋಗಪಟು ಮೇಘನಾ ಎಚ್. ಶೆಟ್ಟಿಗಾರ್ ಅವರು ಒಂದು ಗಂಟೆ 17 ಸೆಕೆಂಡ್ ಕಾಲ ಕೂರ್ಮಾಸನ ನಡೆಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಕ್ಟೋರಿಯಾ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಉಜ್ವಲಾ ಎ.ಸಿ., ಪ್ರತಿಭಾವಂತ ವಿದ್ಯಾರ್ಥಿನಿ ಮೇಘನಾ ಯೋಗ ಪ್ರದರ್ಶನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗುವ ಮೂಲಕ ಮಂಗಳೂರು ಮತ್ತು ನಮ್ಮ ಶಿಕ್ಷಣ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.2021ರ ಆ.1.ರಂದು ಮಧ್ಯಪ್ರದೇಶದ ಶ್ವೇತಾ ಅವರು 45 ನಿಮಿಷ 26 ಸೆಕೆಂಡ್ 50 ಮಿಲಿ ಸೆಕೆಂಡ್‌ನಲ್ಲಿ ನಡೆಸಿದ ಯೋಗದ ಕೂರ್ಮಾಸನ ಭಂಗಿಯ ದೀರ್ಘಾವಧಿಯ ಪ್ರದರ್ಶನದ ದಾಖಲೆಯನ್ನು ಮೇಘನಾ ಎಸ್.ಶೆಟ್ಟಿಗಾರ್ ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೆ.27ರಂದು ಹೊಸ ದಾಖಲೆಯನ್ನು ಖಚಿತಪಡಿಸಿಕೊಂಡಿದೆ ಎಂದವರು ಹೇಳಿದರು.
ಮೇಘನಾ ಶೆಟ್ಟಿಗಾರ್, ಮೇಘನಾ ಅವರ ತಂದೆ ದೇರೆಬೈಲ್ ನೆಕ್ಕಿಲ ಗುಡ್ಡೆಯ ಹರೀಶ್ ಶೆಟ್ಟಿಗಾರ್, ತಾಯಿ ಕವಿತಾ ಶೆಟ್ಟಿಗಾರ್, ಶಾಲಾ ಶಿಕ್ಷಕಿ ಕವಿತಾ ಅಶೋಕ್, ಮಂಗಳಾ ಈಜುಕೊಳದ ಚಂದ್ರ ಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.