ಜಿಲ್ಲಾ ಕಾರಾಗೃಹದಲ್ಲಿ ಬಂದಿಗಳಿಗೆ ಮನಪರಿವರ್ತನೆ ಕಾರ್ಯಕ್ರಮ

| Published : Feb 01 2024, 02:02 AM IST

ಜಿಲ್ಲಾ ಕಾರಾಗೃಹದಲ್ಲಿ ಬಂದಿಗಳಿಗೆ ಮನಪರಿವರ್ತನೆ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರಾಗೃಹ ಸಹಯೋಗದಲ್ಲಿ ಕಾರಾಗೃಹದಲ್ಲಿ ಪ್ಯಾನ್ ಇಂಡಿಯಾ ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಮಕ್ಕಳ ರಕ್ಷಣೆ ಮತ್ತು ಪುರ್ನವಸತಿ ಅಭಿಯಾನ ಹಾಗೂ ಗವಿಸಿದ್ದೇಶ್ವರ ಜಾತ್ರಾ ಅಂಗವಾಗಿ ವಿಶೇಷ ಸಾಧಕರಾಗಿ ಆಗಮಿಸಿದ ಲಕ್ಷಣ ಗೋಳೆ ಅವರಿಂದ ಬಂದಿಗಳಿಗೆ ಮನಃ ಪರಿವರ್ತನೆ ಕಾರ್ಯಕ್ರಮ ಆಯೋಜನೆ ಮಾಡಲಾಯಿತು.

ಕೊಪ್ಪಳ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರಾಗೃಹ ಸಹಯೋಗದಲ್ಲಿ ಕಾರಾಗೃಹದಲ್ಲಿ ಪ್ಯಾನ್ ಇಂಡಿಯಾ ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಮಕ್ಕಳ ರಕ್ಷಣೆ ಮತ್ತು ಪುರ್ನವಸತಿ ಅಭಿಯಾನ ಹಾಗೂ ಗವಿಸಿದ್ದೇಶ್ವರ ಜಾತ್ರಾ ಅಂಗವಾಗಿ ವಿಶೇಷ ಸಾಧಕರಾಗಿ ಆಗಮಿಸಿದ ಲಕ್ಷಣ ಗೋಳೆ ಅವರಿಂದ ಬಂದಿಗಳಿಗೆ ಮನಃ ಪರಿವರ್ತನೆ ಕಾರ್ಯಕ್ರಮ ಆಯೋಜನೆ ಮಾಡಲಾಯಿತು.ಕಾರ್ಯಕ್ರಮವನ್ನು ವಿಶೇಷ ಸಾಧಕರಾದ ಲಕ್ಷಣ ಗೋಳೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ್ ಉದ್ಘಾಟಿಸಿದರು.ಕಾರ್ಯಕ್ರಮದ ಕುರಿತು ಲಕ್ಷಣ ಗೋಳೆ ಬಂದಿಗಳಿಗೆ ತಮ್ಮ ಜೀವನದ ಅನುಭವ ಹಾಗೂ ಜೈಲಿನಲ್ಲಿಯೇ ಪರಿವರ್ತನೆಗೊಂಡು ಈ ದಿನ ವಿಶೇಷ ಸಾಧಕರ ಸ್ಥಾನದಲ್ಲಿ ಇರುವುದರ ಕುರಿತು ಮಾತನಾಡಿದರು.ನ್ಯಾಯಾಧೀಶ ದೇವೇಂದ್ರ ಪಂಡಿತ್ ಕಾರ್ಯಕ್ರಮದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕಾರಾಗೃಹದ ಅಧೀಕ್ಷಕ ವಿ.ಡಿ. ಚವ್ಹಾಣ ಉಪಸ್ಥಿತರಿದ್ದರು.