ಸಾರಾಂಶ
ತಾಲೂಕು ಬಿಸಿಯೂಟ ನೌಕರರ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಜಂಟಿಯಾಗಿ ಮಧ್ಯಾಹ್ನ ಬಿಸಿಯೂಟ ನೌಕರರ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿ ತಾಪಂ ಇಒಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಡ ಪ್ರಭ ವಾರ್ತೆ ಚಿತ್ತಾಪುರ
ತಾಲೂಕಿನ ಕೆಲ ಶಾಲೆಗಳಲ್ಲಿ ಮುಖ್ಯಗುರುಗಳು ಹಾಗೂ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರು ಬಿಸಿಯೂಟ ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡಿ ಅವರ ಕೆಲಸಕ್ಕೆ ತೊಂದರೆ ನೀಡುತ್ತಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಸಿಯೂಟ ನೌಕರ ಸಂಘದ ತಾಲೂಕು ಅಧ್ಯಕ್ಷೆ ಸುವರ್ಣ ಸಾಗರ ಹಾಗೂ ದಸಂಸ ತಾಲೂಕು ಸಂಚಾಲಕ ಆನಂದ ಕಲ್ಲಕ್ಕ ಒತ್ತಾಯಿಸಿದ್ದಾರೆ.ಪಟ್ಟಣದ ತಾಪಂ ಅವರಣದಲ್ಲಿ ಪ್ರತಿಭಟನೆ ನಡೆಸಿದ ನಂತರ ಮಾತನಾಡಿದ ಅವರು, ಬಿಸಿಯೂಟ ನೌಕರರೆಂದು ಸುಮಾರು ೨೨ ವರ್ಷಗಳಿಂದ ಬಿಸಿಯೂಟ ತಯಾರಿಸುತ್ತಾ ಶಾಲೆಯ ಕೆಲವೊಂದು ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬರುತ್ತಿದ್ದೇವೆ. ತಾಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಫ್ರೌಡಶಾಲೆಗಳಲ್ಲಿ ತರಕಾರಿಯನ್ನು ಮುಖ್ಯ ಅಡುಗೆಯವರೆ ನಿರ್ವಹಿಸುತ್ತಾ ಬರುತ್ತಿದ್ದೇವು. ಈಗ ಕಳೆದ ೬-೭ ತಿಂಗಳಿಂದ ಮುಖ್ಯ ಅಡುಗೆಯವರಿಗೆ ಇರುವಂತಹ ಜವಾಬ್ದಾರಿಯನ್ನು ಮುಖ್ಯಗುರುಗಳು, ಶಾಲಾ ಸುಧಾರಣೆ ಸಮಿತಿಯ ಅಧ್ಯಕ್ಷರು ಕಸಿದುಕೊಂಡಿದ್ದಾರೆ. ಇದನ್ನು ಮೊದಲಿನಂತೆ ಮುಖ್ಯ ಅಡುಗೆ ಸಿಬ್ಬಂದಿಗೆ ಕೆಲಸ ವಹಿಸಬೇಕು ಎಂದು ಒತ್ತಾಯಿಸಿ ತಾಪಂ ಇಓ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಶಹಬಾದ ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಸಂಪತ್ತಕುಮಾರಿ, ಕಾಳಗಿ ತಾಲೂಕು ಅಧ್ಯಕ್ಷ ಮುಕ್ತಾ ಚೆಂದನ್, ಸುನೀತಾ ಮಹಾದೇವ, ಬಿ/ಬಿ ಹಾಜಿಮಿಯ್ಯ, ಉಷಾದೇವಿ, ಜ್ಯೋತಿ ಬಡಿಗೇರ, ಸಿದ್ದಮ್ಮ, ಸಂತೊಷಕುಮಾರಿ ಶಹಬಾದ, ಶರಣಮ್ಮ ಚಿತ್ತಾಪುರ ಕಲ್ಪನಾ ಕಲ್ಲಕ್ ಇತರರು ಇದ್ದರು.