ಧಾರ್ಮಿಕ ಚಿಂತನೆಯಿಂದ ಮಾನಸಿಕ ನೆಮ್ಮದಿ ಸಾಧ್ಯ: ವೆಂಕಟರಾಮಯ್ಯ ಅಭಿಮತ

| Published : Feb 12 2024, 01:34 AM IST

ಸಾರಾಂಶ

ನಿಮ್ಮೆಲ್ಲರ ಸಹಕಾರದ ಮೇರೆಗೆ ಸುಸಜ್ಜಿತ ದೇವಸ್ಥಾನ ನಿರ್ಮಾಣ ಮಾಡಿ ಜೀರ್ಣೋದ್ಧಾರ ಮತ್ತು ವಿಗ್ರಹ ಪ್ರತಿಷ್ಠಾಪನೆ ಕಾರ್ಯ ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗಿದೆ. ಇನ್ನೂ ಮುಂದೆ ತಾವೆಲ್ಲಾ ಭಕ್ತಿನಿಷ್ಟೆ ಹಾಗೂ ಶಾಂತಿ ರೀತಿಯಲ್ಲಿ ದೇವರ ಕಾರ್ಯ ಮುಂದುವರಿಸಿಕೊಂಡು ಹೋಗುವಂತೆ ದೇವಸ್ಥಾನ ಸಮಿತಿಯ ಸದಸ್ಯ ಹಾಗೂ ತಾಲೂಕು ಬಿಜೆಪಿ ಹಿರಿಯ ಮುಖಂಡ ಡಾ. ಗಂಗಿನೆನಿ ವೆಂಕಟರಾಮಯ್ಯ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಪಾವಗಡ

ನಿಮ್ಮೆಲ್ಲರ ಸಹಕಾರದ ಮೇರೆಗೆ ಸುಸಜ್ಜಿತ ದೇವಸ್ಥಾನ ನಿರ್ಮಾಣ ಮಾಡಿ ಜೀರ್ಣೋದ್ಧಾರ ಮತ್ತು ವಿಗ್ರಹ ಪ್ರತಿಷ್ಠಾಪನೆ ಕಾರ್ಯ ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗಿದೆ. ಇನ್ನೂ ಮುಂದೆ ತಾವೆಲ್ಲಾ ಭಕ್ತಿನಿಷ್ಟೆ ಹಾಗೂ ಶಾಂತಿ ರೀತಿಯಲ್ಲಿ ದೇವರ ಕಾರ್ಯ ಮುಂದುವರಿಸಿಕೊಂಡು ಹೋಗುವಂತೆ ದೇವಸ್ಥಾನ ಸಮಿತಿಯ ಸದಸ್ಯ ಹಾಗೂ ತಾಲೂಕು ಬಿಜೆಪಿ ಹಿರಿಯ ಮುಖಂಡ ಡಾ. ಗಂಗಿನೆನಿ ವೆಂಕಟರಾಮಯ್ಯ ಕರೆ ನೀಡಿದರು.

ಭಾನುವಾರ ತಾಲೂಕಿನ ವೆಂಕಟಮ್ಮನಹಳ್ಳಿ ಹಾಗೂ ಕ್ಯಾತಗಾನಕೆರೆ ಹೊರವಲಯದ ಗುಡ್ಡದಲ್ಲಿ ಹಮ್ಮಿಕೊಂಡಿದ್ದ ಐತಿಹಾಸಿಕ ಹಿನ್ನೆಲೆಯ ಲಕ್ಷ್ಮೀ ವೆಂಕಟರಮಣಸ್ವಾಮಿ ಹಾಗೂ ಗುಡ್ಡಮಯ್ಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದ ನೇತೃತ್ವವಹಿಸಿ ವಿವಿಧ ರೀತಿಯ ಪೂಜಾ ಕೆಂಕೈರ್ಯ ನೆರೆವೇರಿಸಿದರು. ಬಳಿಕ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಭಕ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಇಲ್ಲಿನ ದೇವಸ್ಥಾನ ನಿರ್ಮಾಣದ ಕಾರ್ಯ ಇದೊಂದು ನಮ್ಮೆಲ್ಲರ ಸುದೈವ. ಅಧ್ಯಾತ್ಮಿಕ ಹಾಗೂ ಧಾರ್ಮಿಕತೆಯ ವಿವಿಧ ಕ್ಷೇತ್ರದ ಪ್ರಗತಿಯ ಸಂಕೇತ ಹಾಗೂ ನಮ್ಮ ಯೋಜನೆಗೆ ಒಂದು ಚೈತನ್ಯವಾಗಿದೆ. ತಾವೆಲ್ಲಾ ಸೌಹಾರ್ದತೆಯಿಂದ ದೇವರ ಕಾರ್ಯದಲ್ಲಿ ಭಾಗಯಾಗಿ ಯಶಸ್ವಿಯತ್ತ ಮುನ್ನಡೆಸಬೇಕು. ಅತ್ಯುತ್ತಮ ಚಿಂತನೆಯ ಮೂಲಕ ದೇವರ ಕೃಪೆಗೆ ಪಾತ್ರರಾಗುವಂತೆ ಸಲಹೆ ನೀಡಿದರು.

ಇದೇ ದೇವಸ್ಥಾಕ್ಕೆ ಬಂದಿದ್ದ ಭಕ್ತರಿಗೆ ಅನ್ನದಾಸೋಹ ಹಾಗೂ ಪ್ರಸಾದ ವಿನಿಯೋಗ ನೆರೆವೇರಿಸಿದ್ದು ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಹಕರಿಸಿದ್ದ ಎಲ್ಲಾ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಇದೇ ವೇಳೆ ಹಿಂದೂಪುರ ಮೌನಗಿರಿ ಅಶ್ರಮ ಬ್ರಹ್ಮಪೀಠದ ಅಧ್ಯಕ್ಷ ಈಶ್ವರಯ್ಯಸ್ವಾಮೀಜಿ ದಿವ್ಯ ಸಾನಿದ್ಯವಹಿಸಿದ್ದರು. ಜಿಲ್ಲಾ ಕೇಂದ್ರ ಡಿಸಿಸಿ ಬ್ಯಾಂಕ್‌ ನಿರ್ದೇಶಕ ತಾಳೇಮರದಹಳ್ಳಿ ನರಸಿಂಹಯ್ಯ, ಹಿರಿಯ ಮುಖಂಡ ಹಾಗೂ ನಿವೃತ್ತ ಅಪಾರ ಜಿಲ್ಲಾಧಿಕಾರಿ ದೊಡ್ಡಹಳ್ಳಿ ರಾಮಾಂಜಿನೇಯಲು, ಕೆನರಾ ಬ್ಯಾಂಕ್‌ ನಿವೃತ್ತ ಎಜಿಎಂ ತಿರುಮಣಿ ವೆಂಕಟರಾಮಯ್ಯ, ರಾಜ್ಯ ರೈತ ಸಂಘದ ಅಧ್ಯಕ್ಷ ವಿ. ನಾಗಭೂಷಣರೆಡ್ಡಿ, ಲಕ್ಷ್ಮೀ ವೆಂಕಟರಮಣಸ್ವಾಮಿ ಹಾಗೂ ಗುಡ್ಡಮಯ್ಯಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀದೇವಿ ಡಾ. ಗಂಗಿನೆನಿ ವೆಂಕಟರಾಮಯ್ಯ, ನಿವೃತ್ತ ಬ್ಯಾಂಕ್‌ ವ್ಯವಸ್ಥಾಪಕ ಕ್ಯಾತಗಾಕರೆ ದೈವಾದೀನಂ, ಹಿರಿಯ ಎಂಜಿನಿಯರ್‌ ವೆಂಕಟಸ್ವಾಮಿ, ಸಮಾಜ ಸೇವಕರಾದ ಡಾ.ಜಿ.ವಿ. ಶಶಿಕಿರಣ್‌, ಮಾಜಿ ಎಪಿಎಂಸಿ ಅಧ್ಯಕ್ಷ ಅಂಜಯ್ಯ, ತಾಲೂಕು ಕಸಾಪ ಅಧ್ಯಕ್ಷ ಕಟ್ಟಾನರಸಿಂಹಮೂರ್ತಿ, ಶ್ರೀಶಾಲಾ ಸ್ಕೂಲ್‌ ಪ್ರಾಂಶುಪಾಲ ನಾಗೇಂದ್ರಪ್ಪ, ಶಾಂತಿ ಮೆಡಿಕಲ್‌ ಮಾಲೀಕ ದೇವರಾಜ್‌, ವಿವೇಕಾನಂದ ಕಾಲೇಜು ಪ್ರಾಂಶುಪಾಲ ನಾಗೇಂದ್ರ, ಮೆಡಿಕಲ್‌ ಕೃಷ್ಣಪ್ಪ, ಪ್ರಭಾಕರ್‌, ಉಪನ್ಯಾಸಕ ಶಿವಕುಮಾರ್‌, ಸಹಾಯಕ ಗುಮಾಸ್ತ ರಾಜ್‌ಗೋಪಾಲ್‌, ವೆಂಕಟಮ್ಮನಹಳ್ಳಿ ಲಕ್ಷ್ಮೀನಾರಾಯಣಪ್ಪ, ಕ್ಯಾತಗಾನಕರೆ ಶ್ರೀನಿವಾಸಲು ಸೇರಿದಂತೆ ಕಮ್ಮ ಒಕ್ಕಲಿಗೆ ಸಮುದಾಯದ ಆನೇಕ ಮಂದಿ ಹಿರಿಯ ಮುಖಂಡರು ಹಾಗೂ ಸಾವಿರಾರು ಸಂಖ್ಯೆಯ ಭಕ್ತರು ಇದ್ದರು.