ಸಾರಾಂಶ
ಬುದ್ಧಿ ಮಾಂದ್ಯಮಕ್ಕಳು ದೇವರ ಸ್ವರೂಪಿಗಳು. ದೊಡ್ಡ ಐಶಾರಾಮಿ ಹೋಟೆಲ್‌ಗಳಲ್ಲಿ ಆಚರಿಸಿಕೊಳ್ಳುವುದಕ್ಕಿಂತ ಮಕ್ಕಳ ಜೊತೆ ಆಚರಿಸುವ ನೆಮ್ಮದಿ ಎಂದು ಹಿರಿಯರು ಹಾಗೂ ಜಿಲ್ಲಾ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಬಸವರಾಜ ಮಟಗಾರ ಅವರು ಹೇಳಿದರು.
ಕನ್ನಡಪ್ರಭ ವಾರ್ತೆ ಯಮಕನಮರಡಿ
ಬುದ್ಧಿ ಮಾಂದ್ಯಮಕ್ಕಳು ದೇವರ ಸ್ವರೂಪಿಗಳು. ದೊಡ್ಡ ಐಶಾರಾಮಿ ಹೋಟೆಲ್‌ಗಳಲ್ಲಿ ಆಚರಿಸಿಕೊಳ್ಳುವುದಕ್ಕಿಂತ ಮಕ್ಕಳ ಜೊತೆ ಆಚರಿಸುವ ನೆಮ್ಮದಿ ಎಂದು ಹಿರಿಯರು ಹಾಗೂ ಜಿಲ್ಲಾ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಬಸವರಾಜ ಮಟಗಾರ ಹೇಳಿದರು.ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ದೂಧನಾನ್ ವಿಕಾಸ ಶಿಕ್ಷಣ ಸಂಸ್ಥೆಯ ಬುದ್ಧಿ ವಿಕಲಚೇತನ ವಸತಿ ಶಾಲೆಯಲ್ಲಿ ಮೊಮ್ಮಗ ಮಿವಾನ ಶಿವಕುಮಾರ ಮಟಗಾರನ 6ನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ಮಕ್ಕಳಿಗೆ ಹಣ್ಣು ಹಂಪಲ, ಬಿಸ್ಕಿಟ್‌ಗಳನ್ನು ವಿತರಿಸಿ ಆಚರಿಸಿ ಮಾತನಾಡಿದರು.
ಅಬಕಾರಿ ಇಲಾಖೆ ನಿವೃತ್ತ ಪಿಎಸ್‌ಐ ಸಿದ್ದಪ್ಪ ಹೊಸಮನಿ, ಮಹೇಶ ಶಿರೂರ, ಚಂದ್ರಶೇಖರ ಗಣಾಚಾರಿ, ಮನೋಜ ಜಗತಾಪ, ಸಿದ್ದಪ್ಪ ರಾಮಗೋನಟ್ಟಿ, ಮೀರಾಸಾಬ್ ಮುಲ್ತಾನಿ, ಮಲ್ಲಪ್ಪ ಸಾರವಾಡಿ, ಅಜೀತ ಕಾಂಬಳೆ, ಬಸವರಾಜ ಜಿಂಡ್ರಾಳಿ, ಇರ್ಶಾದ ಕಿಲ್ಲೆದಾರ, ಎ.ಎಸ್.ಮಾಹುಲಿ, ಮಹಾಂತೇಶ ಪಂಚನ್ನವರ, ವಿಠಲ ಬಾಳವ್ವಗೋಳ, ಸದಾಶಿವ ಹಂಚಿನಾಳ, ಮಹಾವೀರ ಲಠ್ಠೆ, ಸಿದ್ದವ್ವ ಕಟ್ಟಿಮನಿ, ರಾಘು ಇಳಿಗಾರ, ಮುಖ್ಯ ಶಿಕ್ಷಕ ಬಿ.ಬಿ.ಸಂಕನ್ನವರ, ಸಿಬ್ಬಂದಿಯರಾದ ಆರತಿ ಗಿಡಗಾರ, ಪದ್ಮಶ್ರೀ ಆಸಂಗಿ, ಪದ್ಮಜಾ ಪತ್ತಾರ, ಚಂದ್ರಕಲಾ ಅಂಗಡಿ, ಆನಂದ ಕಾಂಬಳೆ, ಬಿ.ಬಿ.ಮುದಗನ್ನವರ, ಕಲ್ಲಪ್ಪ ಗೌಡರ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗದವರು, ಬುದ್ಧಿಮಾಂದ್ಯ ಮಕ್ಕಳು ಸೇರಿದಂತೆ ಬಸವರಾಜ ಮಟಗಾರ ಅಭಿಮಾನಿ ಬಳಗದವರು ಇದ್ದರು.