ಸಿಬ್ಬಂದಿ ಕೊರತೆಯಿಂದ ನಲುಗುತ್ತಿರುವ ಮೆಸ್ಕಾಂ: ಸಾರ್ವಜನಿಕರ ಆಕ್ರೋಶ

| Published : Sep 03 2024, 01:41 AM IST

ಸಿಬ್ಬಂದಿ ಕೊರತೆಯಿಂದ ನಲುಗುತ್ತಿರುವ ಮೆಸ್ಕಾಂ: ಸಾರ್ವಜನಿಕರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ಬೀರೂರು ಉಪವಿಭಾಗದ ಮೆಸ್ಕಾಂ ವ್ಯಾಪ್ತಿ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಕಲವೇ ಕೆಲವು ಸಿಬ್ಬಂದಿಗೆ ಕಾರ್ಯಬಾರದ ಒತ್ತಡದಿಂದ ನಮ್ಮ ವ್ಯಾಪ್ತಿಯಲ್ಲಿ ಯಾವುದೇ ಕೆಲಸ ಕಾರ್ಯ ಆಗುತ್ತಿಲ್ಲ ಎಂದು ಸಾರ್ವಜನಿಕರು ಜನಸಂಪರ್ಕ ಸಭೆಯಲ್ಲಿ ತಮ್ಮ ಸಮಸ್ಯೆ ಹೇಳಿಕೊಂಡರು.

- ಬೀರೂರು ಉಪವಿಭಾಗದ ಜನಸಂಪರ್ಕ ಸಭೆಯಲ್ಲಿ ಸಿಬ್ಬಂದಿ ಪೂರೈಸುವಂತೆ ಒತ್ತಾಯ

ಕನ್ನಡಪ್ರಭ ವಾರ್ತೆ, ಬೀರೂರು.ಬೀರೂರು ಉಪವಿಭಾಗದ ಮೆಸ್ಕಾಂ ವ್ಯಾಪ್ತಿ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಕಲವೇ ಕೆಲವು ಸಿಬ್ಬಂದಿಗೆ ಕಾರ್ಯಬಾರದ ಒತ್ತಡದಿಂದ ನಮ್ಮ ವ್ಯಾಪ್ತಿಯಲ್ಲಿ ಯಾವುದೇ ಕೆಲಸ ಕಾರ್ಯ ಆಗುತ್ತಿಲ್ಲ ಎಂದು ಸಾರ್ವಜನಿಕರು ಜನಸಂಪರ್ಕ ಸಭೆಯಲ್ಲಿ ತಮ್ಮ ಸಮಸ್ಯೆ ಹೇಳಿಕೊಂಡರು.

ಸ್ಥಳಿಯ ರಾಜಪ್ಪ ಮಾತನಾಡಿ, ಇಲಾಖೆಯ ಎಇಇ, ಜೆಇ ಗಳಿಗೆ ಸೂಕ್ತ ಸಮಯಕ್ಕೆ ಬಂದು ನಮ್ಮ ಸಮಸ್ಯೆ ಬಗೆಹರಿಸಿ ಎಂದರೆ ಸಿಬ್ಬಂದಿ ಸಮಸ್ಯೆ ಇದೆ. ಇರುವವರು ಕೆಲಸದ ಮೇಲೆ ಹೋಗಿದ್ದಾರೆ. ಸ್ವಲ್ಪ ಕಾಯಿರಿ ಎನ್ನುತ್ತಾರೆ. ಮಳೆಗಾಲ ಎದುರಾಗಿದ್ದು ರೈತರಿಗೆ ಸಮಸ್ಯೆ ಹೆಚ್ಚಿದೆ. ಕಚೇರಿಯಲ್ಲಿ ವಿಚಾರಿಸಿದಾಗ ಬೀರೂರಿನಲ್ಲಿ 30 ಸಿಬ್ಬಂದಿ ನಿಯೋಜನೆಯಾಗಿದ್ದರೆ 10ಹುದ್ದೆ ಖಾಲಿ ಇವೆ. ಯಗಟಿಯಲ್ಲಿ 30ಹುದ್ದೆ ಇದ್ದು ಅದರಲ್ಲಿ 18 ಖಾಲಿ ಇವೆ, ಹಿರೇನಲ್ಲೂರಲ್ಲಿ 30 ಹುದ್ದೆ ಇದ್ದು, 10 ಖಾಲಿ ಇವೆ. ಹೀಗಾದರೆ ರೈತರ ಸಮಸ್ಯೆ ಪಾಡೇನು ಎಂದರು.ಮೆಸ್ಕಾಂ ನ ಚಿಕ್ಕಮಗಳೂರು ಅಧಿಕ್ಷಕ ಜೆ.ಎಸ್. ಲೋಕೇಶ್ ಮಾತನಾಡಿ, ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆ ಗಮನಕ್ಕೆ ಬಂದಿದೆ. ಇದನ್ನು ಮೆಸ್ಕಾಂ ಮಂಡಳಿ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಸದ್ಯದಲ್ಲೆ ಮಂಡಳಿಯಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಸಿಬ್ಬಂದಿ ಕೊರತೆ ನೀಗಿಸಿ ರೈತರ ಸಮಸ್ಯೆ ಬಗೆಹರಿಸಲಾಗುವುದು ಎಂದರು.ಮೆಸ್ಕಾಂನ ಕಡೂರು ಕಾರ್ಯನಿರ್ವಾಹಕ ಲಿಂಗರಾಜು ಮಾತನಾಡಿ, ಸರ್ಕಾರ ರೈತರಿಗೋಸ್ಕರ ಕುಸುಮ್.ಬಿ ಯೋಜನೆ ಯಡಿ ಪಂಪ್ ಸೆಟ್ ಉಚಿತವಾಗಿ ನೀಡಲಾಗುತ್ತಿದೆ. ಸೌರಗೃಹ ಯೋಜನೆಯಡಿ ಅರ್ಜಿ ಆಹ್ವಾನಿಸಿದ್ದು. ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ಪಡೆಯಲು ತಿಳಿಸಿದರು. ಬಿ.ಟಿ.ಚಂದ್ರಶೇಖರ್ ಮಾತನಾಡಿ, ಕಳೆದ ಹಲವು ಸಭೆಗಳಲ್ಲಿ ಡಿಶ್ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಇಲಾಖೆಗೆ ಕಟ್ಟ ಬೇಕಾದ ಹಣ ಪಾವತಿಸಲು ಅಧಿಕಾರಿಗಳು ತಾತ್ಸಾರ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಎಇಇ ನಂದೀಶ್, ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಡಿಶ್ ಮಾಲೀಕರಿಗೆ ಈಗಾಗಲೇ 2 ನೋಟಿಸ್ ನೀಡಲಾಗಿದೆ. ಅಂತಿಮ ನೋಟಿಸ್ ನೀಡಿ ಬಾಕಿ ಹಣ ಪಾವತಿಮಾಡಿಕೊಳ್ಳಲಾಗುವುದು ಎದರಲ್ಲಿ ಸಂಶಯ ಬೇಡ ಎಂದರು.ಎಇ ಯತೀಶ್ ಮಾತನಾಡಿ, 2022-23ರಲ್ಲಿ ನಮ್ಮ ವ್ಯಾಪ್ತಿಯಲ್ಲಿ 13 ಜನರಿಗೆ ಗಂಗಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದ ಅವರು, ಗಣೇಶ ಪ್ರತಿಷ್ಠಾಪನೆಗೆ ಪುರಸಭೆ ಅನುಮತಿ, ಮೆಸ್ಕಾಂ ಪರವಾನಗಿ ಪಡೆಯಬೇಕು ಇಲ್ಲವಾದಲ್ಲಿ ಅಂತಹ ಅಕ್ರಮ ವಿದ್ಯುತ್ ಸಂಪರ್ಕ ಖಡಿತ ಗೊಳಿಸಿ, ದಂಡ ವಿಧಿಸಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಯಗಟಿ ಜೆಇ ರಮೇಶ್, ಹಿರೇನಲ್ಲೂರು ಕಿಶೋರ್ ರಾಜ್, ವಸಂತ್, ಯತೀಶ್, ಬಿ.ಟಿ. ಓಂಕಾರಮ್ಮ, ಎಸ್.ಜಿ.ರಮೇಶ್, ಗ್ರಾಹಕರಾದ ಮಲ್ಲಿಕಾರ್ಜುನ, ಲೋಕೇಶಪ್ಪ, ಶಂಕರ್, ವರದರಾಜು ಸೇರಿದಂತೆ ಮತ್ತಿತರ ಸಾರ್ವಜನಿಕರು ಇದ್ದರು.30 ಬೀರೂರು 2ಬೀರೂರಿನ ಮೆಸ್ಕಾಂ ಉಪವಿಭಾಗದ ಕಚೇರಿಯಲ್ಲಿ ಚಿಕ್ಕಮಗಳೂರು ಅಧೀಕ್ಷಕ ಲೋಕೇಶ್ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ನಡೆಯಿತು. ಕಡೂರು ಕಾರ್ಯನಿರ್ವಾಹಕ ಲಿಂಗರಾಜು, ಎಇಇ ನಂದೀಶ್ ಸೇರಿದಂತೆ ಇತರರಿದ್ದರು.