ಸಾರಾಂಶ
ನಿಶಾನ ರಾಯ್, ವಾಯಸ್ ರಾಜ್, ಮಂಜು, ಮಧುಸುಧನ, ಐಶ್ವರ್ಯ, ಶಾಲಿನಿ, ಸುನೀಲ, ಶಾಕಿರಧಾರ ಸಾರ್ವಜನಿಕರ ರಂಜಿಸಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪುತ್ರಿ ಅರ್ಪಿತಾ ಜೋಶಿ ಕೆಲ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.
ಹುಬ್ಬಳ್ಳಿ: ಕಿಕ್ಕಿರಿದು ತುಂಬಿದ ಮೈದಾನ., ಎಲ್ಲಿ ನೋಡಿದರಲ್ಲಿ ಜನವೋ...ಜನ..., ಎಲ್ಲೆಡೆ ಎಲ್‌ಇಡಿ ಸ್ಕ್ರೀನ್ ಹಾಗೂ ಡಿಜೆ ಮ್ಯೂಸಿಕ್ ಅಬ್ಬರ..,ಆಗಾಗ ಕೇಳಿ ಬರುತ್ತಿದ್ದ ಭರ್ಜರಿ ಚೆಪ್ಪಾಳೆ ಮತ್ತು ಶಿಳ್ಳೆಗಳು., ಸಂಗೀತದ ಲೋಕದಲ್ಲಿ ತೇಲಾಡಿದ ಮಹಾನಗರದ ಜನತೆ..!
ಇದು ಹುಬ್ಬಳ್ಳಿ ಆಕ್ಸ್‌ಫರ್ಡ್ ಕಾಲೇಜಿನ ಬಳಿಯ ಮೈದಾನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆಯೋಜಿಸಿದ್ದ ಗಾಳಿಪಟ ಉತ್ಸವದ ಅಂಗವಾಗಿ ಶನಿವಾರ ಸಂಜೆ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವದಲ್ಲಿ ಕಂಡು ಬಂದ ದೃಶ್ಯ.ಖ್ಯಾತ ಸಂಗೀತ ನಿರ್ದೇಶಕ ಅರ್ಜುನ ಜನ್ಯಾ ಅವರ ಮ್ಯಾಜಿಕಲ್ ಕಂಪೋಸ್ ತಂಡದಿಂದ ಸಂಗೀತಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಜನತೆ ಮನಸೋತರು.
ಸಂಗೀತ ನಿರ್ದೇಶಕ ಅರ್ಜುನ ಜನ್ಯ ಅವರು ಭಜರಂಗಿ ಸಿನಿಮಾದ ಶ್ರೀಆಂಜನೇಯಂ ಪ್ರಸನ್ನ ಆಂಜನೇಯಂ ಸಾಂಗ್ ಹಾಡುವ ಮೂಲಕ ನೋಡುಗರ ರಂಜಿಸಿದರು.ಈ ಗೀತೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರುಗಳು ನೃತ್ಯ ಮಾಡಿದರು.
ರಾಬರ್ಟ್ ಸಿನಿಮಾದ ಜೈ ಶ್ರೀರಾಮ ಗೀತೆಗೆ ಹುಬ್ಬಳ್ಳಿ ಮಂದಿ ಹುಚ್ಚೆದ್ದು ಕುಣಿದರು. ನಿ ಕೊನೆವರೆಗೂ...,ಹೂವಿನ ಬಾನದಂತೆ......,ಏನಮ್ಮಿ ಏನಮ್ಮಿ......ಸಾಂಗ್ ಗಳನ್ನು ಅವರ ತಂಡದವರು ಹಾಡಿದರು.ನಿಶಾನ ರಾಯ್, ವಾಯಸ್ ರಾಜ್, ಮಂಜು, ಮಧುಸುಧನ, ಐಶ್ವರ್ಯ, ಶಾಲಿನಿ, ಸುನೀಲ, ಶಾಕಿರಧಾರ ಸಾರ್ವಜನಿಕರ ರಂಜಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪುತ್ರಿ ಅರ್ಪಿತಾ ಜೋಶಿ ಕೆಲ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.ಸಂಜೆಯಿಂದ ಶುರುವಾಗಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ತಡರಾತ್ರಿವರೆಗೂ ನಡೆಯಿತು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಚಿವ ಸಿ,ಸಿ. ಪಾಟೀಲ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಬೆಲ್ಲದ್, ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ ಇದ್ದರು.