ಕೊಪ್ಪಳದಲ್ಲಿ ಮಿಲ್ಕ್ ಪ್ರಕ್ಯೂರ್ಮೆಂಟ್ ಪ್ಲಾಂಟ್ ಸ್ಥಾಪನೆ

| Published : Sep 08 2025, 01:01 AM IST

ಸಾರಾಂಶ

ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಹೈನುಗಾರಿಕೆ, ರೇಷ್ಮೆ ಬೆಳೆ ಜತೆಗೆ ಏನೇನು ಮಾಡಲು ಸಾಧ್ಯವೋ ಅದನ್ನು ಮಾಡೋಣ

ಕೊಪ್ಪಳ: ಹಾಲು ಉತ್ಪಾದನೆ ಜತೆಗೆ ಅವುಗಳ ಉಪ ಉತ್ಪನ್ನಕ್ಕಾಗಿ ಕೊಪ್ಪಳದಲ್ಲಿ ಮಿಲ್ಕ್ ಪ್ರಕ್ಯೂರ್ಮೆಂಟ್ ಪ್ಲಾಂಟ್ ಸ್ಥಾಪಿಸಲಾಗುವುದು ಎಂದು ಶಾಸಕ ಹಾಗೂ ರಾಬಕೊವಿ ಹಾಲು ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಹಾಲು ಉತ್ಪಾದರ ಮಹಿಳಾ ಸಂಘದಿಂದ ಹಮ್ಮಿಕೊಂಡಿದ್ದ ಕಾಮಧೇನು ಸಭಾಂಗಣ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ನಾನು ರಾಕೊವಿ ಎಂ.ಎಫ್.ಅಧ್ಯಕ್ಷನಾಗಿ ಆಯ್ಕೆ ಆದ ಮೇಲೆ ರಾಯಚೂರು,ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಹಾಲು ಉತ್ಪಾದನೆ ಹೆಚ್ಚಳ ಮಾಡಲು ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.

ಅದರಲ್ಲೂ ವಿಶೇಷವಾಗಿ ನಮ್ಮ ಕೊಪ್ಪಳ ಜಿಲ್ಲೆಗೆ ಹೆಚ್ಚಿನ ಒತ್ತನ್ನು ನೀಡುವ ಕೆಲಸ ಮಾಡುತ್ತೇನೆ.ಕೊಪ್ಪಳ ತಾಲೂಕಿನಲ್ಲಿ 72 ಮಿಲ್ಕ್ ಸೊಸೈಟಿಗಳಿಗೆ, ನಮ್ಮ ರಾಬಕೊವಿ ವ್ಯಾಪ್ತಿಗೆ ಬರುವ ನಾಲ್ಕು ಜಿಲ್ಲೆಗಳ ಪ್ರತಿ ತಾಲೂಕಿನಲ್ಲಿ 100 ಮಿಲ್ಕ್ ಸೊಸೈಟಿ ಮಾಡಬೇಕು ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.

ರೈತರು ಕೇವಲ ವ್ಯವಸಾಯದಿಂದ ಲಾಭ ತೆಗೆಯುಲಿಕ್ಕೆ ಆಗುವುದಿಲ್ಲ. ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಹೈನುಗಾರಿಕೆ, ರೇಷ್ಮೆ ಬೆಳೆ ಜತೆಗೆ ಏನೇನು ಮಾಡಲು ಸಾಧ್ಯವೋ ಅದನ್ನು ಮಾಡೋಣ ಎಂದರು.

ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ ಯೋಜನೆಯಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 2 ಶಾಲಾ ಕೊಠಡಿಗಳ ಉದ್ಘಾಟನೆಯನ್ನು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೆ.ಎಂ.ಎಫ್ ಉಪಾಧ್ಯಕ್ಷ ಎನ್. ಸತ್ಯನಾರಾಯಣ ನಿರ್ದೇಶಕ ಕೃಷ್ಣರಡ್ಡಿ ಗಲಬಿ, ಮಹೇಶ ಗೌರಾಳ, ಗೂಳಪ್ಪ ಹಲಿಗೇರಿ, ತೋಟಪ್ಪ ಕಾಮನೂರು, ಹ್ಯಾಟಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷೆ ನೀಲಮ್ಮ ಚಿನ್ನರೆಡ್ಡಿ, ಗ್ರಾಪಂ ಅಧ್ಯಕ್ಷ ಯೋಗಾನಂದ ಲೇಬಗೇರಿ, ಶರಣಪ್ಪ ಸಜ್ಜನ್, ಹನಮೇಶ ಹೊಸಳ್ಳಿ, ಗ್ಯಾನಪ್ಪ ಹ್ಯಾಟಿ, ಚಾಂದ್ ಪಾಷಾ ಕಿಲ್ಲದರ್, ಶಿವಯ್ಯ ತೋಟದ್, ದೇವಪ್ಪ ಬಹದ್ದೂರ್ ಬಂಡಿ, ಚಿನ್ನರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು