ಕನಿಷ್ಠ ವೇತನ, ಕಾಯಂಗೆ ಆಗ್ರಹ

| Published : Apr 24 2025, 02:04 AM IST

ಸಾರಾಂಶ

ಕಳೆದ 17 ವರ್ಷಗಳಿಂದ ಗೌರವಧನದ ಆಧಾರದಲ್ಲಿ ಗ್ರಾಮಗಳಲ್ಲಿ 34 ಹೆಚ್ಚು ಸೇವೆಗಳನ್ನು ಒದಗಿಸುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿಶೇಷಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಕನಿಷ್ಠ ವೇತನ ಹಾಗೂ ಕಾಯಂಗೊಳಿಸುವಂತೆ ಆಗ್ರಹಿಸಿ ನವ ಕರ್ನಾಟಕ ವಿಶೇಷಚೇತನರ ಗೌರವಧನ ಕಾರ್ಯಕರ್ತರ ಸಂಘದವರು ಬುಧವಾರ ಪ್ರತಿಭಟಿಸಿದರು.

ರಾಜ್ಯದ 31 ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 4500 ವಿಶೇಷಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಏ.21 ರಂದು ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದಿಂದ ಪಾದಯಾತ್ರೆ ಹೊರಟು ಬುಧವಾರ ಮೈಸೂರಿನ ಜೆ.ಕೆ. ಮೈದಾನಕ್ಕೆ ತಲುಪಿ, ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕಳೆದ 17 ವರ್ಷಗಳಿಂದ ಗೌರವಧನದ ಆಧಾರದಲ್ಲಿ ಗ್ರಾಮಗಳಲ್ಲಿ 34 ಹೆಚ್ಚು ಸೇವೆಗಳನ್ನು ಒದಗಿಸುತ್ತಿದ್ದೇವೆ. ಆದರೆ ಕೇವಲ 9 ಸಾವಿರ ರೂ. ಗೌರವ ಧನ ನೀಡುತ್ತಿದ್ದಾರೆ. ಪ್ರಸ್ತುತ ಇದರಲ್ಲಿ ಜೀವನ ನಡೆಸುವುದೇ ಕಷ್ಟಕರವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್‌ ನಲ್ಲಿ ಪ್ರತಿಭಟನೆ ಮಾಡಿದ್ದಾಗ ಬೇಡಿಕೆ ಈಡೇರಿಸುವುದಾಗ ಭರವಸೆ ನೀಡಿದ್ದರೂ ಏನು ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಜಿ ಪಿ. ಮೇಟಿ ತಾರಾಫಾಲಿ, ಜಿಲ್ಲಾಧ್ಯಕ್ಷ ದೇವರಾಜು, ಪದಾಧಿಕಾರಿಗಳಾದ ಮಹದೇವಯ್ಯ, ಆರ್.ಎಂ. ಸ್ವಾಮಿ, ದತ್ತಾಂತ್ರೇಯ ಆರ್. ಕುಡಕಿ, ಫಾರೂಕಿಗೌಡ ಸಿ. ಪಾಟೀಲ್ ಮೊದಲಾದವರು ಇದ್ದರು.