ಸಾಮಾಜಿಕ ಜಾಲತಾಣದಲ್ಲಿ ಕನ್ನಡಪ್ರಭ ವರದಿ ಹಂಚಿಕೊಂಡ ಪಂಚಾಯತ್ ರಾಜ್ ಸಚಿವ ಸಚಿವ ಪ್ರಿಯಾಂಕ್ ಖರ್ಗೆ

| Published : Jul 18 2024, 01:34 AM IST / Updated: Jul 18 2024, 09:58 AM IST

ಸಾಮಾಜಿಕ ಜಾಲತಾಣದಲ್ಲಿ ಕನ್ನಡಪ್ರಭ ವರದಿ ಹಂಚಿಕೊಂಡ ಪಂಚಾಯತ್ ರಾಜ್ ಸಚಿವ ಸಚಿವ ಪ್ರಿಯಾಂಕ್ ಖರ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ ಖರ್ಗೆ ತಮ್ಮ ಫೇಸ್ಬುಕ್ ಪುಟದಲ್ಲಿ ನರೇಗಾ ಯೋಜನೆಯ ಕುರಿತು ಕನ್ನಡಪ್ರಭ ಪ್ರಕಟಿಸಿದ ವರದಿಯನ್ನು ಹಂಚಿಕೊಂಡಿದ್ದಾರೆ.

 ಕುಷ್ಟಗಿ :  ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ ಖರ್ಗೆ ತಮ್ಮ ಫೇಸ್ಬುಕ್ ಪುಟದಲ್ಲಿ ನರೇಗಾ ಯೋಜನೆಯ ಕುರಿತು ಕನ್ನಡಪ್ರಭ ಪ್ರಕಟಿಸಿದ ವರದಿಯನ್ನು ಹಂಚಿಕೊಂಡಿದ್ದಾರೆ.

ಜೂ. 29ರಂದು ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮದ ಸುಧಾ ಹೂಗಾರ ಎಂಬ ಮಹಿಳೆಯು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ತೂಗಿಸುತ್ತಿರುವ ಕುರಿತು "ಸುಧಾ ಬದುಕಿನ ಬಂಡಿಗೆ ಖಾತ್ರಿ ಆಸರೆ " ಎಂಬ ತಲೆ ಬರಹದಡಿಯಲ್ಲಿ ಸಮಗ್ರ ವರದಿ ಮಾಡಿತ್ತು.

ವರದಿಯ ತುಣುಕನ್ನು ಜು. 2ರಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಫೇಸ್ಬುಕ್. ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಜು. 17ರಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ ಖರ್ಗೆ ತಮ್ಮ ಫೇಸ್ಬುಕ್ ಪೇಜ್‌ನಲ್ಲಿ ಹಂಚಿಕೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಉದ್ಯೋಗಖಾತ್ರಿ ಯೋಜನೆ ಗ್ರಾಮೀಣ ಜನತೆಯ ಅದರಲ್ಲೂ ವಿಶೇಷವಾಗಿ ಮಹಿಳೆಯರ ಬದುಕಿಗೆ ಹೇಗೆ ನೆರವಾಗಬಲ್ಲದು ಎಂಬುದಕ್ಕೆ ಕುಷ್ಟಗಿಯ ಕಂದಕೂರು ಗ್ರಾಮದ ಸುಧಾ ಹೂಗಾರ ಎಂಬ ಮಹಿಳೆಯ ಬದುಕೇ ಒಂದು ಜ್ವಲಂತ ಉದಾಹರಣೆಯಾಗಿದೆ ಎಂದಿದ್ದಾರೆ.

ಪತಿಯನ್ನು ಕಳೆದುಕೊಂಡ ತನ್ನ ಬದುಕಿಗೆ, ಮಗಳ ಭವಿಷ್ಯಕ್ಕೆ ನರೇಗಾ ಯೋಜನೆ ಹೇಗೆ ಆಧಾರ ಸ್ತಂಭವಾಯಿತು ಎಂಬುದನ್ನು ಸುಧಾ ಹೂಗಾರ ಅವರ ಮಾತಲ್ಲಿ ಕೇಳಬಹುದಾಗಿದೆ. ಇದು ಕೇವಲ ಈಕೆಯೊಬ್ಬರ ಕಥೆಯಲ್ಲ. ನರೇಗಾ ಯೋಜನೆಯಡಿ ಕೆಲಸ ಮಾಡುತ್ತ ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ಕರ್ನಾಟಕದ 17.84 ಲಕ್ಷಕ್ಕೂ ಅಧಿಕ ಮಹಿಳೆಯರ ಕಥೆ. ಒಂದು ಯೋಜನೆ ಹೇಗೆ ಒಂದು ಕುಟುಂಬದ, ಒಂದು ಗ್ರಾಮದ, ಒಂದು ಸಮುದಾಯದ ಕೊನೆಗೆ ಇಡೀ ನಾಡಿನ ಪ್ರಗತಿಗೆ ಕಾರಣವಾಗುತ್ತದೆ ಎಂಬುದಕ್ಕೆ ನರೇಗಾ ಒಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಪ್ರಿಯಾಂಕಾ ಖರ್ಗೆ ಬರೆದುಕೊಂಡಿದ್ದಾರೆ.