ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಕೃಷ್ಣ ಭೈರೇಗೌಡ

| Published : Nov 18 2023, 01:00 AM IST

ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಕೃಷ್ಣ ಭೈರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಕಂದಾಯ ಸಚಿವ ರು ಮಾತನಾಡುತ್ತಾ, ಸಣ್ಣಪುಟ್ಟ ವಿಷಯಗಳಿಗೆ ಜನರನ್ನು ಕಂದಾಯ ಇಲಾಖೆ ಗೋಳು ಹೊಯ್ದುಕೊಳ್ಳಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಅಧಿಕಾರಿಗಳು ಜನರು ಕಂದಾಯ ಇಲಾಖೆಗೆ ಬಂದರೇ ಅವರನ್ನು ವಿನಾಕಾರಣ ಅಲೆಸದೇ ಶೀಘ್ರ ಕೆಲಸವನ್ನು ಮಾಡಿಕೊಡಬೇಕು. ಇನ್ನು ರಾಜ್ಯದಲ್ಲೆ ತ್ತಾ, ಸಣ್ಣಪುಟ್ಟ ವಿಷಯಗಳಿಗೆ ಜನರನ್ನು ಕಂದಾಯ ಇಲಾಖೆ ಗೋಳು ಹೊಯ್ದುಕೊಳ್ಳಬಾರದು. ಇದರಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಇದು ಕಂದಾಯ ಇಲಾಖೆ ಭಸ್ಮಾಸುರನ ಕಥೆ ಆಗಿದೆ. ಭಸ್ಮಾಸುರ ತಪಸ್ಸು ಮಾಡಿದ್ದಕ್ಕೆ ಶಿವ ವರ ಕೊಟ್ಟ. ಆದ ಕಾರಣ ನೀವು ಸರ್ಕಾರಿ ನೌಕರರಾಗಿದ್ದೀರಿ. ಜನ ಮತ ನೀಡಿ ನಮ್ಮನ್ನು ಶಾಸಕರನ್ನಾಗಿ ಮಾಡಿದ್ದಾರೆ. ಯಾರು ವರ ಕೊಟ್ಟರು ಇಬ್ಬರಿಗೂ ಗೊತ್ತಿಲ್ಲ. ವರ ಕೊಟ್ಟ ಜನರ ತಲೆ ಮೇಲೆ ಕಾಲಿಡುವ ಪರಿಸ್ಥಿತಿ ಬಂದಿದೆ. ಜನ ದಿನನಿತ್ಯ ತಮ್ಮ ಕೆಲಸ ಬಿಟ್ಟು ಕಂದಾಯ ಇಲಾಖೆ ಕಚೇರಿ ಸುತ್ತುವುದೇ ಒಂದು ಕೆಲಸವಾಗಿದೆ. ನಾನು ಬಂದಿರುವುದಕ್ಕೆ ಏನಾದರೂ ಫಲಿತಾಂಶ ಆಗಬೇಕು ಎಂದು ತಾಕೀತು ಮಾಡಿದರು. ಕುಡಿವ ನೀರಿಗೆ ಸಮಸ್ಯೆ ಆಗಬಹುದು ಸಮಸ್ಯೆ ಬಂದ ಮೇಲೆ ಎಚ್ಚೆತ್ತುಕೊಳ್ಳುವ ಬದಲು ಮೊದಲೆ ನಾವು ತಯಾರಿಯಾಗಬೇಕು ಎಂದು ಸೂಚನೆ ನೀಡಿದರು.

ಫ್ರೂಟ್ ಸರ್ವೆಯಲ್ಲಿ ಪೂರ್ತಿ ರೈತರ ಜಮೀನು ಮುಂದಿನ ಹತ್ತು ದಿನಗಳಲ್ಲಿ ರೈತರ ಒಟ್ಟು ಜಮೀನಿನ ವಿಸ್ತೀರ್ಣ ಅಪ್‌ಡೇಟ್ ಮಾಡಬೇಕು. ಬೆಳೆ ಪರಿಹಾರ ಸಿಗಬೇಕಾದರೆ ರೈತರ ಫ್ರೂಟ್ ಡೆಟಾಬೇಸ್‌ನಲ್ಲಿ ಅಪ್‌ಡೆಟ್ ಮಾಡಬೇಕು. ಪ್ರೂಟ್ ಡೇಟಾದಲ್ಲಿ ರೈತರ ಜಮಿನು ನೋಂದಣಿ ಆಗದೆ ಹೋದರೆ ಯಾರಿಗೂ ಪರಿಹಾರ ಸಿಗುವುದಿಲ್ಲ. ಇದನ್ನು ಕ್ಯಾಂಪೆನ್ ಮಾಡಿ ರೈತರಿಗೆ ಮುಂದಿನ ಹತ್ತು ದಿನಗಳಲ್ಲಿ ಮಾಡಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಒಟ್ಟು ಶೇ. ೩೫ ಪಹಣಿಗಳಿಗೆ ಫ್ರೂಟ್‌ ಐಡಿ ನೋಂದಣಿ ಆಗಿಲ್ಲ. ಆಯಾ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ರೈತರ ಜಮೀನು ಮಾಹಿತಿ ಇದೆ. ಅದನ್ನು ಫ್ರೂಟ್‌ ಐಡಿಯಲ್ಲಿ ನೋಂದಣಿ ಮಾಡಲು ಸ್ಥಳದಲ್ಲಿ ವಿ.ಎ ಗಳಿಗೆ ಆದೇಶಿಸಿದರು. ಗ್ರಾಮ ಸಹಾಯಕರು ಇಲ್ಲಿಲ್ಲ: ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಗ್ರಾಮ ಸಹಾಯಕರು ಆಯಾ ಕೇಂದ್ರ ಸ್ಥಾನದಲ್ಲಿ ವಾಸವಿಲ್ಲ. ಬೆಂಗಳೂರು ಮೈಸೂರಿನಿಂದ ಓಡಾಡುತ್ತಿದ್ದಾರೆ ಎಂದು ಶಾಸಕರು ಸಚಿವರಿಗೆ ದೂರಿದರು. ವಿ.ಎ ಗಳು ಬರಿ ತಾಲೂಕು ಕಚೇರಿಯಲ್ಲಿ ಇರುತ್ತಾರೆ. ಅವರನ್ನು ರೆವಿನ್ಯೂ ಇನ್ಸ್‌ಪೆಕ್ಟರ್ ಕೂಡ ನಿಯಂತ್ರಣ ಮಾಡುತಿಲ್ಲ ಎಂದು ಆರೋಪಿಸಿದರು.

ಅರಕಲಗೂಡು ತಾಲೂಕಿನಲ್ಲಿ ೮,೨೦೦ ಅರ್ಜಿ ಫಾರಂ ಇರುವ ಬಗ್ಗೆ ತಹಸೀಲ್ದಾರರಿಗೆ ಪ್ರಶ್ನೆ ಮಾಡಿದರು. ನೀವು ತಹಸೀಲ್ದಾರರ? ನಿಮಗೆ ಬಾಕಿ ಇರುವ ಮಾಹಿತಿ ನಿಮ್ಮ ಬಳಿ ಮಾಹಿತಿ ಯಾಕಿಲ್ಲ? ರಾಜ್ಯದಲ್ಲಿ ಎಲ್ಲೂ ಬಾಕಿ ಇಲ್ಲದೆ ಇರುವುದು ಅರಕಲಗೂಡು ತಾಲೂಕಿನಲ್ಲಿ ಯಾಕೆ ಇದೆ ಎಂದು ಪ್ರಶ್ನೆ ಮಾಡಿದರು. ಫಾರ್೫೩ ಬಂದಿದ್ದು, ೧೯೯೮ನೇ ಸಾಲಿನಲ್ಲಿ, ೨೫ ವರ್ಷ ಆದರೂ ಬಾಕಿ ಯಾಕೆ ಇದೆ ಎಂದು ಗರಂ ಆದರು. ಸಭೆಯಲ್ಲಿ ಬೇಲೂರು ತಹಸೀಲ್ದಾರರ ವಿರುದ್ಧವೂ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಫಾರ್ಂ ೫೩ ಫಾರ್ಂ ೫೭ ಎರಡು ಸೇರಿ ಒಂದು ವರ್ಷದಲ್ಲಿ ಮುಕ್ತಾಯ ಮಾಡಬೇಕು. ಅರ್ಹತೆ ಇದ್ದರೆ ಕೊಡಿ ಇಲ್ಲದೆ ಹೊದರೆ ವಜಾ ಮಾಡುವಂತೆ ಸೂಚನೆ ನೀಡಿದರು.

ಬಗರ್‌ಹುಕುಂ ಆ್ಯಪ್‌ನಲ್ಲಿ ತಿಂಗಳಿಗೆ ಎರಡು ಸಭೆ ನಡೆಸಬೇಕು. ಏನಾದರು ಮಾಡದೆ ಹೋದರೆ ತಹಶಿಲ್ದಾರಗಳಿಗೆ ನೋಟಿಸ್ ಜಾರಿ ಮಾಡುವುದಾಗಿ ಎಚ್ಚರಿಕೆ ನೀಡಿದರು. ಫಾರಂ ೫೩ ಮತ್ತು ೫೭ ಅರ್ಜಿ ಮಂಜೂರು ಮಾಡುವಾಗ ಅರ್ಜಿ ಹಾಕಿದ ವ್ಯಕ್ತಿ ಕುಟುಂಬದ ಯಾರಿಗೂ ೪ ಎಕರೆ ೩೮ ಗುಂಟೆಗಿಂತ ಜಮೀನು ಹೆಚ್ಚು ಇರಬಾರದು. ಯಾವುದೇ ಗೋಮಾಳ ಮಂಜೂರು ಮಾಡಬಾರದು. ಅರ್ಜಿ ಹಾಕಿದ ಸ್ಥಳದ ಜಮೀನಿನ ಪೋಟೊ ತೆಗೆದರೆ ಆ ಜಮೀನಿನ ಸ್ಯಾಟಲೈಟ್ ಚಿತ್ರ ದೊರೆಯುತ್ತದೆ. ಅರ್ಜಿ ಹಾಕಿರುವರು ಎಷ್ಟು ವರ್ಷದಿಂದ ಸಾಗುವಳಿ ಮಾಡುತ್ತಿದ್ದಾರೆ ಎಂದು ಮಾಹಿತಿ ಸಿಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಜಿಪಂ ಸಿಇಒ ಪೂರ್ಣಿಮಾ, ಶಾಸಕರಾದ ಸಿ.ಎನ್. ಬಾಲಕೃಷ್ಣ, ಹೆಚ್.ಪಿ. ಸ್ವರೂಪ್ ಹಾಗೂ ಕೆ.ಎಂ. ಶಿವಲಿಂಗೇಗೌಡ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.