ಸ್ಥಳೀಯ ಇಜಾರಿಲಕಮಾಪುರದ ಲಿಂಗದಹಳ್ಳಿ ಲೇಔಟ್ ಪಕ್ಕದಲ್ಲಿ ಜಿಲ್ಲಾ ಕುಂಬಾರ ಸಮಾಜದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಸರ್ವಜ್ಞ ಸಮುದಾಯ ಭವನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಶಂಕುಸ್ಥಾಪನೆ ನೆರವೇರಿಸಿದರು.
ಹಾವೇರಿ:ಸ್ಥಳೀಯ ಇಜಾರಿಲಕಮಾಪುರದ ಲಿಂಗದಹಳ್ಳಿ ಲೇಔಟ್ ಪಕ್ಕದಲ್ಲಿ ಜಿಲ್ಲಾ ಕುಂಬಾರ ಸಮಾಜದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಸರ್ವಜ್ಞ ಸಮುದಾಯ ಭವನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮಾತನಾಡಿ, ಕುಂಬಾರ ಸಮಾಜದ ಕಾರ್ಯಕ್ರಮಗಳು, ಸಭೆ-ಸಮಾರಂಭಗಳು ಹಾಗೂ ಸಮುದಾಯದ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಸರ್ವಜ್ಞ ಸಮುದಾಯ ಭವನ ನಿರ್ಮಿಸಬೇಕಿದೆ. ಇದಕ್ಕಾಗಿ ಐದು ಕೋಟಿ ರು. ಅನುದಾನ ನೀಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.ಮನವಿಗೆ ಸ್ಪಂದಿಸಿದ ಸಚಿವ ರುದ್ರಪ್ಪ ಲಮಾಣಿ, ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಭವನ ನಿರ್ಮಾಣಕ್ಕೆ ಎಷ್ಟು ಅನುದಾನದ ಅವಶ್ಯಕತೆ ಇದೆ ಎಂಬುದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹನುಮಂತಪ್ಪ ಮರಡಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರ, ಜಿಲ್ಲಾ ಕುಂಬಾರ ಸಮಾಜದ ಗೌರವಾಧ್ಯಕ್ಷ ಶಿವಣ್ಣ ಚಕ್ರಸಾಲಿ, ಜಿಲ್ಲಾಧ್ಯಕ್ಷ ರೇವಣಪ್ಪ ಚಕ್ರಸಾಲಿ, ಕಾರ್ಯದರ್ಶಿ ಭರಮಪ್ಪ ಚಕ್ರಸಾಲಿ, ನಿಂಗರಾಜ ಕುಂಬಾರ, ಕೆ. ಬಸವರಾಜಪ್ಪ, ಸುರೇಶ ಕುಂಬಾರ, ಬಿ.ಬಿ. ಚಕ್ರಸಾಲಿ, ಎಂ.ಪಿ. ಕುಂಬಾರ, ಸೋಮಲಿಂಗಪ್ಪ ಕುಂಬಾರ, ಶಿವಾನಂದ ಚಕ್ರಸಾಲಿ, ನಿಂಗಪ್ಪ ಕುಂಬಾರ, ಪುಷ್ಪರಾಜ ಕುಂಬಾರ, ಸುಭಾಷ ಕುಂಬಾರ, ಚನ್ನಬಸಪ್ಪ ಕುಂಬಾರ, ದೊಡ್ಡಪ್ಪ ಕುಂಬಾರ, ಬಸವರಾಜ ಚಕ್ರಸಾಲಿ, ಶೇಖಪ್ಪ ಚಕ್ರಸಾಲಿ, ಕೊಟ್ರೇಶ ಕೆಂಚಪ್ಪನವರ, ರಮೇಶ ಚಕ್ರಸಾಲಿ, ಬಸವರಾಜ ಕುಂಬಾರ, ಮಲ್ಲೇಶಪ್ಪ ಚಕ್ರಸಾಲಿ, ಮುತ್ತಪ್ಪ ಶಿಗ್ಗಾಂವಿ ಹಾಗೂ ನಾಗಪ್ಪ ಕೆಂಚಪ್ಪನವರ ಉಪಸ್ಥಿತರಿದ್ದರು. ಚನ್ನವೀರಪ್ಪ ಚಕ್ರಸಾಲಿ ಕಾರ್ಯಕ್ರಮ ನಿರ್ವಹಿಸಿದರು.