ಸಾರಾಂಶ
ಮುಧೋಳ: ಜಲಸಂಪನ್ಮೂಲ ಇಲಾಖೆಯ ಅಚ್ವುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳಡಿ ಉತ್ತೂರ ಗ್ರಾಮದಿಂದ ರೂಗಿ, ಗುಲಗಾಲಜಂಬಗಿ, ಮೆಟಗುಡ್ಡ ಗ್ರಾಮದವರೆಗೆ ಮುಖ್ಯರಸ್ತೆ ಸುಧಾರಣೆಗೆ ₹ 41 ಲಕ್ಷ ಅನುದಾನ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಚಾಲನೆ ನೀಡಿದರು.
ಕನ್ನಡ ಪ್ರಭ ವಾರ್ತೆಮುಧೋಳ
ಜಲಸಂಪನ್ಮೂಲ ಇಲಾಖೆಯ ಅಚ್ವುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳಡಿ ಉತ್ತೂರ ಗ್ರಾಮದಿಂದ ರೂಗಿ, ಗುಲಗಾಲಜಂಬಗಿ, ಮೆಟಗುಡ್ಡ ಗ್ರಾಮದವರೆಗೆ ಮುಖ್ಯರಸ್ತೆ ಸುಧಾರಣೆಗೆ ₹ 41 ಲಕ್ಷ ಅನುದಾನ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಚಾಲನೆ ನೀಡಿದರು.ಬಳಿಕ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ಸೇರಿದಂತೆ ಇನ್ನಿತರ ಮೂಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಶ್ರಮಿಸುತ್ತಿದ್ದು ಎಂದರು.
ಲೋಕಾಪುರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಶೋಕ ಕಿವಡಿ, ಕೆ.ಟಿ. ಪಾಟೀಲ, ಗೋವಿಂದಪ್ಪ ಗುಜ್ಜನ್ನವರ, ಸಂಜೀವ ನಾಯಕ, ಉದಯಕುಮಾರ ಸಾರವಾಡ, ಸದುಗೌಡ ಪಾಟೀಲ, ಮುದಕಣ್ಣ ಅಂಬಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.