ಮಡಿಕೇರಿ ಕ್ಷೇತ್ರ ಶಾಸಕರ ವಿಧಾನಸೌಧ ಪ್ರವೇಶಕ್ಕೆ ಸಂಬಂಧಿಸಿದಂತೆ ವಿಶೇಷ ಪಾಸ್ ದುರುಪಯೋಗ ಮಾಡಿರುವ ಬಗ್ಗೆ ಶಾಸಕ ಡಾ ಮಂತರ್ ಗೌಡ ವ್ಯಕ್ತಿ ಒಬ್ಬನನ್ನು ತರಾಟೆಗೆ ತೆಗೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

ಕುಶಾಲನಗರ : ಮಡಿಕೇರಿ ಕ್ಷೇತ್ರ ಶಾಸಕರ ವಿಧಾನಸೌಧ ಪ್ರವೇಶಕ್ಕೆ ಸಂಬಂಧಿಸಿದಂತೆ ವಿಶೇಷ ಪಾಸ್ ದುರುಪಯೋಗ ಮಾಡಿರುವ ಬಗ್ಗೆ ಶಾಸಕ ಡಾ ಮಂತರ್ ಗೌಡ ವ್ಯಕ್ತಿ ಒಬ್ಬನನ್ನು ತರಾಟೆಗೆ ತೆಗೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

ಮಡಿಕೇರಿ ಕ್ಷೇತ್ರದ ಶಾಸಕರ ವಿಶೇಷ ಪಾಸ್ ಅನ್ನು ಬೆಂಗಳೂರಿನ ವ್ಯಕ್ತಿ ಒಬ್ಬ ತನ್ನ ಕಾರಿಗೆ ಅಳವಡಿಸಿ ವಿಧಾನಸೌಧಕ್ಕೆ ಪ್ರವೇಶ ಮಾಡಿರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ವ್ಯಕ್ತಿಯನ್ನು ಪತ್ತೆಹಚ್ಚಿ ಆತನನ್ನು ದೂರವಾಣಿ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೂಡಲೇ ಪಾಸ್ ವಾಹನದಿಂದ ತೆರವುಗೊಳಿಸಿ ಸಂಬಂಧಿಸಿದವರಿಗೆ ಹಿಂತಿರುಗಿಸುವಂತೆ ಸೂಚನೆ ನೀಡಿದ್ದಾರೆ.

ಹುಂಡೈ ನೂತನ ಕಾರಿನಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಂಖ್ಯೆಯನ್ನು ಒಳಗೊಂಡ ಪಾಸ್ ಕಂಡ ವಿಧಾನಸೌಧ ಭದ್ರತಾ ಸಿಬ್ಬಂದಿ ತಕ್ಷಣ ಮಂತರ್ ಗೌಡ ಅವರ ಗಮನಕ್ಕೆ ತಂದಿದ್ದಾರೆ.

ಈ ಬಗ್ಗೆ ಕುಶಾಲನಗರದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಶಾಸಕರು ಪಾಸ್ ದುರುಪಯೋಗ ಮಾಡಿರುವ ಪ್ರಕರಣವನ್ನು ಸ್ಪೀಕರ್ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.