ಸಾರಾಂಶ
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಸಾಪುರ ಗ್ರಾಮದಲ್ಲಿರುವ ಚಾಲಕರ ತರಬೇತಿ ಕೇಂದ್ರದ ಆವರಣದಲ್ಲಿ ನಾಲ್ಕು ಕೋಟಿ ರು. ವೆಚ್ಚದ ನೂತನ ವಸತಿ ಗೃಹಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಶಂಕುಸ್ಥಾಪನೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮೃತಪಟ್ಟರೆ ಒಂದು ಕೋಟಿ ರು. ಪರಿಹಾರ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು, ಯಾವ ಇಲಾಖೆಯಲ್ಲೂ ಇಂತಹ ಸವಲತ್ತಿಲ್ಲ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಸಾಪುರ ಗ್ರಾಮದಲ್ಲಿರುವ ಚಾಲಕರ ತರಬೇತಿ ಕೇಂದ್ರದ ಆವರಣದಲ್ಲಿ ನಾಲ್ಕು ಕೋಟಿ ರು. ವೆಚ್ಚದ ನೂತನ ವಸತಿ ಗೃಹಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಚಾಲಕ ಯಾವುದೇ ಪ್ರೀಮಿಯಂ ಕಟ್ಟದಿದ್ದರೂ ಪರವಾಗಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ತೆರೆದರೆ ಸಾಕು. ಅಪಘಾತದಲ್ಲಿ ಮೃತಪಟ್ಟಾಗ ಕುಟುಂಬಕ್ಕೆ ಒಂದು ಕೋಟಿ ರು.ಗಳ ಪರಿಹಾರ ಸಿಗುತ್ತದೆ. ಕೈಕಾಲು ಊಣವಾದರೆ ನಲವತ್ತು ಲಕ್ಷ ರು. ಸಣ್ಣಪುಟ್ಟ ಗಾಯಗಳಾದರೆ ಇಪ್ಪತ್ತು ಲಕ್ಷ ರು. ಸಿಗುವ ನಮ್ಮ ಯೋಜನೆಯನ್ನು ನೋಡಿ ಕೊಂಡು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ನಮಗೂ ಇಂತಹ ಯೋಜನೆ ಜಾರಿಗೊಳಿಸಬೇಕೆಂದು ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ದ್ದಾರೆಂದರು.ಚಾಲಕರ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಟಿ.ಎನ್.ನವೀನ್ ಕುಮಾರ್ ಚಿತ್ರದುರ್ಗ ಕೆ.ಎಸ್.ಆರ್.ಟಿ.ಸಿ. ಉಪ ವಿಭಾಗದ ಡಿ.ಸಿ. ಸಿದ್ದೇಶ್, ಕೆಎಸ್‌ಆರ್‌ಟಿ ಎ.ಇ.ಇ ನಾಗರಾಜ್, ಕೆಎಸ್ ಆರ್ ಟಿ ನಿವೃತ್ತ ನೌಕರ ರಾಜಪ್ಪ ಪ್ರವೀಣ್, ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಫೋಟೋ (5 ಹೆಚ್ ಎಲ್ ಕೆ 2): ಹೊಳಲ್ಕೆರೆ ಚಾಲಕರ ತರಬೇತಿ ಕೇಂದ್ರದ ಆವರಣದಲ್ಲಿ ನಾಲ್ಕು ಕೋಟಿ ರೂ.ವೆಚ್ಚದಲ್ಲಿ ನೂತನ ವಸತಿ ಗೃಹಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಡಾ.ಎಂ.ಚಂದ್ರಪ್ಪ.