ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಶಾಸಕ ನರೇಂದ್ರಸ್ವಾಮಿ ಖಂಡನೆ

| Published : Dec 19 2024, 12:31 AM IST

ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಶಾಸಕ ನರೇಂದ್ರಸ್ವಾಮಿ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಸ್ಪೃಶ್ಯತೆ, ಅಮಾನತೆಯಿಂದ ನೊಂದಿರುವ ಜನರು ಭಾರತಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್‌ರವರ ಹೆಸರನ್ನು ಹೇಳಿಕೊಂಡು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ.

ಮಳವಳ್ಳಿ:

ಅಂಬೇಡ್ಕರ್ ಹೆಸರು ಬಳಸುವುದು ಫ್ಯಾಷನ್ ಎಂಬ ಅಮಿತ್‌ ಶಾ ಹೇಳಿಕೆಯನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಖಂಡಿಸಿದ್ದು, ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮುದಾಯದ ಜನರಿಗೆ ಡಾ. ಬಿ.ಆರ್ ಅಂಬೇಡ್ಕರ್ ಸ್ಪೂರ್ತಿಯ ನಾಯಕರಾಗುವ ಜೊತೆಗೆ ಶಕ್ತಿಯಾಗಿದ್ದಾರೆ. ಅಸ್ಪೃಶ್ಯತೆ, ಅಮಾನತೆಯಿಂದ ನೊಂದಿರುವ ಜನರು ಭಾರತಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್‌ರವರ ಹೆಸರನ್ನು ಹೇಳಿಕೊಂಡು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ.

ಭವಿಷ್ಯತ್‌ನ ಜೀವನದ ಮಾರ್ಗವನ್ನು ತೋರಿಸಿಕೊಟ್ಟ ಮಹಾತ್ಮರನ್ನು ಸ್ಮರಿಸುವ ಹಿನ್ನೆಲೆಯಲ್ಲಿ ಬಾಬಾ ಸಾಹೇಬರ ಹೆಸರನ್ನು ಹೇಳುವುದು ಬದ್ದತೆಯಾಗಿದೆ. ಇದನ್ನು ತಪ್ಪಾಗಿ ಅರ್ಥೈಸಿ ರಾಜ್ಯಸಭೆಯಲ್ಲಿ ಗೃಹಸಚಿವ ಅಮಿತ್‌ ಶಾ ಮಾತನಾಡುವ ವೇಳೆ ಅಂಬೇಡ್ಕರ್ ಹೆಸರು ಬಳಸುವುದು ಫ್ಯಾಷನ್ ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಂವಿಧಾನದ ಹುದ್ದೆಯಲ್ಲಿರುವ ಅಮಿತ್‌ ಶಾ ಅವರಿಗೆ ಅಂಬೇಡ್ಕರ್ ಹಾಗೂ ಸಂವಿಧಾನ ಬಗ್ಗೆ ದ್ವೇಷ ಇದೆ ಎನ್ನುವುದನ್ನು ಹೇಳಿಕೆ ಮೂಲಕ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.ಅಂಬೇಡ್ಕರ್ ಬಗೆಗಿನ ವಿರೋಧ ಹೇಳಿಕೆ ಬಿಜೆಪಿಗರ ಮನುವಾದಿ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇಡಿ ರಾಷ್ಟ್ರದಲ್ಲಿ ಬಾಬಾ ಸಾಹೇಬರ ಸಂವಿಧಾನದ ಪರವಾಗಿ ವಿಸೃತವಾದ ಧ್ವನಿ ಹತ್ತಿರವಾಗುತ್ತಿದೆ. ಬಿಜೆಪಿ ಮತ್ತು ಮಿತ್ರ ಪಕ್ಷಗಳು ಅಂಬೇಡ್ಕರ್ ವಿರೋಧಿ ದಳ್ಳುರಿಗಳಿಗೆ ಸುಟ್ಟು ಕರಕಲಾಗುವುದು ಸನ್ನಿಹವಾಗುತ್ತಿದೆ ಎಂದರು.ಸಂವಿಧಾನ ವಿರುದ್ದದ ಮನುಸ್ಮುತಿ ಹಾಗೂ ಆರ್‌ಎಸ್‌ಎಸ್ ಚಿಂತನೆಗಳನ್ನು ಹೊಂದಿರುವ ಅಮಿತ್‌ ಶಾ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜೊತೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.--------