ಸಾರಾಂಶ
ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಅವರು ಕೈಮುಗಿದು ಕಾಲುಮಟ್ಟಿ ನಮಸ್ಕರಿಸಿದರು.
ಮಂಡ್ಯ : ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಅವರು ಕೈಮುಗಿದು ಕಾಲುಮಟ್ಟಿ ನಮಸ್ಕರಿಸಿದರು.
ಕುಮಾರಸ್ವಾಮಿ ಅವರು ಸಭೆಗೆ ಆಗಮಿಸುತ್ತಿದ್ದಂತೆ ಗೌರವದಿಂದ ಕೈಮುಗಿದರಲ್ಲದೆ, ಕಾಲು ಮುಟ್ಟಿ ನಮಸ್ಕರಿಸಿದರು. ಇದಕ್ಕೆ ಕುಮಾರಸ್ವಾಮಿ ಅವರೂ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದರು. ಸಭೆಯ ನಡುವೆಯೂ ಒಬ್ಬರಿಗೊಬ್ಬರು ಮಾತನಾಡಿದ ದೃಶ್ಯ ಕಂಡುಬಂದಿತು.
ದಿಶಾ ಸಮಿತಿ ಸದಸ್ಯ ಡಾ.ಕೆ.ಅನ್ನದಾನಿ ಅವರು ಮಳವಳ್ಳಿ ಪುರಸಭೆ ವಿಚಾರವನ್ನು ಪ್ರಸ್ತಾಪಿಸಿದಾಗ, ಪುರಸಭೆ ವಿಚಾರ ದಿಶಾ ಸಮಿತಿ ಸಭೆಯಲ್ಲಿ ಚರ್ಚಿಸುವ ವಿಷಯವಲ್ಲ. ಇಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡೋಣ ಎಂದಾಗಲೂ ಕುಮಾರಸ್ವಾಮಿ ಅವರು ಮೌನದಿಂದ ಇದ್ದದ್ದು ಅವರ ಮಾತಿಗೆ ಸಹಮತ ಸೂಚಿಸಿದಂತಿತ್ತು.
ಸುದ್ದಿಗಾರರ ಜೊತೆ ಮಾತನಾಡುವಾಗ, ದಿಶಾ ಸಭೆಗೆ ಕಾಂಗ್ರೆಸ್ ಶಾಸಕರು ಬರ್ತಾರೋ ಇಲ್ವೋ ಗೊತ್ತಿಲ್ಲ. ನನ್ನ ಕೆಲಸವನ್ನು ನಾವು ಮಾಡ್ತೀನಿ. ನನಗೆ ಯಾವ ಪ್ರತಿಷ್ಠೆಯೂ ಇಲ್ಲ. ನನಗೆ ಕಾಂಗ್ರೆಸ್ ಶಾಸಕರ ಆಹ್ವಾನ ಬೇಕಿಲ್ಲ. ಮಂಡ್ಯ ಜನರು ನನಗೆ ಆಹ್ವಾನ ನೀಡಿದ್ದಾರೆ. ನಾನು ಇಲ್ಲಿಗೆ ಬಂದು ಅಭಿವೃದ್ಧಿ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.