ನಿಗಮ ಮಂಡಳಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಆಯ್ಕೆ

| Published : Jan 28 2024, 01:16 AM IST / Updated: Jan 28 2024, 01:17 AM IST

ಸಾರಾಂಶ

ಶಾಸಕ ರಮೇಶ ಬಂಡಿಸಿದ್ದೇಗೌಡರ ಸರಳತೆ ಮೆಚ್ಚಿ ಮೂರು ಬಾರಿ ಗೆಲ್ಲಿಸಿದ್ದಾರೆ. ಇವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಆದರೂ ಸರ್ಕಾರ ಅವರನ್ನು ಗುರುತಿಸಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದೆ. ಇದರಿಂದ ಈ ಕ್ಷೇತ್ರದ ಅಭಿವೃದ್ದಿಗೆ ಇನ್ನಷ್ಟು ಮಹತ್ವ ನೀಡಲಿದೆ.

ಜನಪ್ರತಿನಿಧಿಗಳು, ತಾಲೂಕು ಆಡಳಿತಾಧಿಕಾರಿಗಳಿಂದ ಅಭಿನಂದನೆ

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ರಮೇಶ ಬಂಡಿಸಿದ್ದೇಗೌಡರನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ತಾಲೂಕು ಆಡಳಿತ ವತಿಯಿಂದ ಅಭಿನಂದಿಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಹಸೀಲ್ದಾರ್ ಪರಶುರಾಮು ಸತ್ತಿಗೇರಿ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಶಾಸಕರನ್ನು ಭೇಟಿ ಮಾಡಿ ಹೂಗುಚ್ಚ ನೀಡಿ ಅಭಿನಂದಿಸಿದರು.

ಪುರಸಭಾ ಸದಸ್ಯ ಎಂ.ಎಲ್. ದಿನೇಶ್ ನೇತೃತ್ವದಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು ಸೇರಿ ಇತರ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು.

ನಂತರ ಎಂ.ಎಲ್. ದಿನೇಶ್ ಮಾತನಾಡಿ, ಕ್ಷೇತ್ರದಲ್ಲಿ ಶಾಸಕ ರಮೇಶರ ತಂದೆ ಬಂಡಿಸಿದ್ದೇಗೌಡರು ಎರಡು ಬಾರಿ ಶಾಸಕ ಹಾಗೂ ರಾಮಕೃಷ್ಣ ಹೆಗಡೆ ಅವರ ಮಂತ್ರಿ ಮಂಡಲದಲ್ಲಿ ಬಂಧಿಖಾನೆ ಮತ್ತು ಉಗ್ರಾಣ ಸಚಿವರಾಗಿದ್ದರು. ಅವರ ತಾಯಿ ವಿಜಯಲಕ್ಷ್ಮಮ್ಮ ಮೂರು ಬಾರಿ ಶಾಸಕರಾಗಿ ಹಾಗೂ ರಾಜ್ಯ ಕರಕುಶಲ ನಿಗಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.

ಶಾಸಕ ರಮೇಶ ಬಂಡಿಸಿದ್ದೇಗೌಡರ ಸರಳತೆ ಮೆಚ್ಚಿ ಮೂರು ಬಾರಿ ಗೆಲ್ಲಿಸಿದ್ದಾರೆ. ಇವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಆದರೂ ಸರ್ಕಾರ ಅವರನ್ನು ಗುರುತಿಸಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದೆ. ಇದರಿಂದ ಈ ಕ್ಷೇತ್ರದ ಅಭಿವೃದ್ದಿಗೆ ಇನ್ನಷ್ಟು ಮಹತ್ವ ನೀಡಲಿದೆ ಎಂದು ಹೇಳಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಎಂ. ನಂದೀಶ್, ಕಾಂಗ್ರೆಸ್‌ ನಗರ ಘಟಕ ಅಧ್ಯಕ್ಷ ಎಂ. ಸುರೇಶ್, ಪುರಸಭಾ ಸದಸ್ಯ ದಯಾನಂದ್, ಸೋಮಶೇಖರ್, ಗುತ್ತಿಗೆದಾರ ಮಲ್ಲರಾಜ ಅರಸ್ ಸೇರಿ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

--------------

27ಕೆಎಂಎನ್ ಡಿ34

ಶ್ರೀರಂಗಪಟ್ಟಣ ಪ್ರವಾಸಿ ಮಂದಿರದಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡರನ್ನು ತಾಲೂಕು ಆಡಳಿತ ವತಿಯಿಂದ ಅಭಿನಂದಿಸಲಾಯಿತು.