ಸಾರಾಂಶ
ಮಕ್ಕಳ ಜೊತೆ ಶಾಲೆಯ ಕಾರ್ಯನಿರ್ವಹಣೆಯ ಬಗ್ಗೆ ಸಂವಾದ । ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಶಿಕ್ಷಕರಿಗೆ ತಾಕೀತು
ಕನ್ನಡಪ್ರಭ ವಾರ್ತೆ ಕೆಜಿಎಫ್ಮಾಲೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಲದ ಗುಂಡಿ ಸ್ವಚ್ಚತೆಗೆ ಮಕ್ಕಳ ಬಳಕೆ ಹಿನ್ನಲೆ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಕೆಜಿಎಫ್‌ನ ಸುಮತಿ ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳ ಕುಂದು,ಕೊರತೆಗಳ ವಿಚಾರಣೆ ನಡೆಸಿದರು.ಮಕ್ಕಳ ಜೊತೆ ಸಂವಾದ ನಡೆಸಿದ ಶಾಸಕಿ ರೂಪಕಲಾ ಶಶಿಧರ್, ನಿಮಗೆ ಊಟವನ್ನು ಕಾಲ ಕಾಲಕ್ಕೆ ಕೊಡುತ್ತಿದ್ದಾರಾ? ಕೊಡುವ ಆಹಾರ ಗುಣಮಟ್ಟದಿಂದ ಕೂಡಿದೆಯೇ? ಶುದ್ದ ಕುಡಿವ ನೀರಿನ ಲಭ್ಯತೆ ಇದೆಯೇ? ಪುಸ್ತಕ, ಲೇಖನಿ ಸಾಮಾಗ್ರಿಗಳನ್ನು ನೀಡಿದ್ದಾರೆಯೇ? ಎಂದು ಮಕ್ಕಳನ್ನು ಪ್ರಶ್ನಿಸಿದರು. ಮಕ್ಕಳಿಗೆ ಅಗತ್ಯವಿರುವ ಸಮವಸ್ತ್ರ, ವಸತಿ ನಿಲಯದಲ್ಲಿ ಸ್ವಚ್ಛತೆ, ಮಕ್ಕಳಿಗೆ ನೀಡುವ ಹಾಸಿಗೆ ಹೊದಿಕೆ ಬಗ್ಗೆಯೂ ಖುದ್ದು ಶಾಸಕರು ಮಕ್ಕಳ ಬಳಿ ವಿಚಾರಣೆ ನಡೆಸಿದರು, ಇದೇ ರೀತಿ ಹೆಣ್ಣು ಮಕ್ಕಳ ಬಳಿ ತೆರಳಿ ವಸತಿ ನಿಲಯದಲ್ಲಿ ಹಣ್ಣು ಮಕ್ಕಳಿಗೆ ಅಗತ್ಯವಿರುವ ಪ್ಯಾಡ್ ನೀಡಲಾಗುತ್ತಿದ್ದೆಯೇ, ಇಲ್ಲವೇ ಎಂದು ಸೌಲಭ್ಯಗಳು ಕುರಿತು ಹೆಣ್ಣು ಮಕ್ಕಳ ಬಳಿ ಚರ್ಚಿಸಿದರು.
ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿವಸತಿ ನೀಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಾಸಕರು ಪ್ರತ್ಯೇಕ ಶಿಕ್ಷಕರ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಬಡ ಮಕ್ಕಳಿಗೆ ಅನ್ಯಾಯ ಮಾಡಬೇಡಿ, ಮಕ್ಕಳಲ್ಲಿ ಭಿನ್ನಾಭಿಪ್ರಾಯ ಮೂಡಿಸಬೇಡಿ, ಎಲ್ಲ ಮಕ್ಕಳನ್ನು ಒಂದಾಗಿ ಕಾಣಬೇಕು, ಮಕ್ಕಳ ಬಳಿ ಸೌಜನ್ಯದಿಂದ ವರ್ತಿಸಿ, ಮಕ್ಕಳ ಮೇಲೆ ದಬ್ಬಾಳಿಕೆ ಮಾಡಬೇಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತಮ ಪರಿಸರ ನಿರ್ಮಾಣ ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮವಹಿಸಿಬೇಕೆಂದು ಶಿಕ್ಷಕರಿಗೆ ಪಾಠ ಮಾಡಿದರು.
ಸಿಬ್ಬಂದಿಯು ಹೊಂದಾಣಿಕೆಯಿಂದ ಕಾರ್‍ಯನಿರ್ವಹಿಸಿ:ಸಿಬ್ಬಂದಿಯ ಬಿನ್ನಾಭಿಪ್ರಾಯಗಳು ಮಕ್ಕಳ ಮೇಲೆ ಪರಿಣಾಮ ಬೀರಲಿವೆ, ಆದ್ದರಿಂದ ಸಿಬ್ಬಂದಿಯು ಇದಕ್ಕೆ ಅವಕಾಶ ಮಾಡಿಕೊಡಬಾರದು,ಇದರಿಂದ ಶಾಲಾ ಕಾಲೇಜಿನ ವಾತವರಣ ಕೆಡಲಿದೆ, ಬಡ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆಯೂ ಗಮನವನ್ನು ಹರಿಸಬೇಕು, ಏನೇ ಸಮಸ್ಯೆಗಳು ಇದ್ದರೂ ನಮ್ಮ ಗಮನಕ್ಕೆ ತರಬೇಕೆಂದು ಪ್ರಾಂಶುಪಾಲ ನಾಗರಾಜ್ ಅವರಿಗೆ ಸೂಚನೆ ನೀಡಿದರು.
ಬಾಕ್ಸ್....ಮಕ್ಕಳಿಂದ ವಸತಿ ಶಾಲೆಯ ಬಗ್ಗೆ ಉತ್ತಮ ಪ್ರತಿಕ್ರಿಯೆ
ಶಾಸಕರು ವಸತಿ ಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಕ್ಕಳ ವಿಚಾರಣೆ ವೇಳೆ ಮಕ್ಕಳಿಂದ ವಸತಿ ನೀಲಯದ ಬಗ್ಗೆ ಉತ್ತಮ ಪ್ರತಿಕ್ರಿಯೆ ಕೇಳಿ ಬಂತು, ಊಟದ ವಿಚಾರದಲ್ಲಿ ವಸತಿ ನೀಲಯದ ಮೆನು ಪ್ರಕಾರ ಊಟವನ್ನು ನೀಡುತ್ತಿರುವುದಾಗಿ ವಿದ್ಯಾರ್ಥಿಗಳು ಶಾಸಕರಿಗೆ ತಿಳಿಸಿದರು, ಇನ್ನೂ ವಸತಿ ನಿಲಯದ ಸ್ವಚ್ಛತೆ ಮತ್ತು ಉಪನ್ಯಾಸಕರ ಪಾಠಗಳ ಬಗ್ಗೆಯೂ ವಿದ್ಯಾರ್ಥಿಗಳು ಉತ್ತಮ ಪ್ರತಿಕ್ರಿಯೆ ನೀಡಿದರು, ೨೦೨೨-೨೩ ನೇ ಸಾಲಿನ ೧೦ ನೇ ತರಗತಿಯ ಫಲಿತಾಂಶ ಶೇ.೧೦೦ ರಷ್ಟು ಬಂದಿರುವುದಾಗಿ ತಿಳಿಸಿದರು, ೨೦೨೩-೨೪ ನೇ ಸಾಲಿನಲ್ಲಿ ಒಟ್ಟು ವಸತಿ ಶಾಲೆಯಲ್ಲಿ ೪೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.ಈ ವೇಳೆ ಪೌರಾಯುಕ್ತ ಪವನ್‌ಕುಮಾರ್, ವಸತಿ ಶಾಲೆಯ ಪ್ರಾಂಶುಪಾಲ ನಾಗರಾಜ್ ಹಾಗೂ ಶಾಲಾ ಸಿಬ್ಬಂದಿ ಮತ್ತಿತರರಿದ್ದರು.
---