ಸಾರಾಂಶ
ತಾಲೂಕಿನ ಢವಳಗಿ ಗ್ರಾಮದ ಕೆ.ಎಸ್.ಆರ್.ಟಿ.ಸಿ ನಿರ್ವಾಹಕ ಮಡಿವಾಳಪ್ಪ ಕೊಣ್ಣೂರ ಅವರ ಪುತ್ರಿ, ಸರ್ಕಾರಿ ಆರ್ಎಂಎಸ್ಎ ಶಾಲೆಯ ವಿದ್ಯಾರ್ಥಿನಿ ಪವಿತ್ರಾ ಕೊಣ್ಣೂರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625(623) ಅಂಕಪಡೆದು ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದು ಜಿಲ್ಲೆ ಹಾಗೂ ಮುದ್ದೇಬಿಹಾಳದ ಕೀರ್ತಿ ತಂದಿದ್ದಾರೆ.
ಮುದ್ದೇಬಿಹಾಳ: ತಾಲೂಕಿನ ಢವಳಗಿ ಗ್ರಾಮದ ಕೆ.ಎಸ್.ಆರ್.ಟಿ.ಸಿ ನಿರ್ವಾಹಕ ಮಡಿವಾಳಪ್ಪ ಕೊಣ್ಣೂರ ಅವರ ಪುತ್ರಿ, ಸರ್ಕಾರಿ ಆರ್ಎಂಎಸ್ಎ ಶಾಲೆಯ ವಿದ್ಯಾರ್ಥಿನಿ ಪವಿತ್ರಾ ಕೊಣ್ಣೂರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625(623) ಅಂಕಪಡೆದು ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದು ಜಿಲ್ಲೆ ಹಾಗೂ ಮುದ್ದೇಬಿಹಾಳದ ಕೀರ್ತಿ ಹೆಚ್ಚಿಸಿದ ಹಿನ್ನೆಲೆಯಲ್ಲಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ವಿದ್ಯಾರ್ಥಿನಿ ಪವಿತ್ರಾ ಹಾಗೂ ಅವಳ ತಂದೆ ತಾಯಿಗೆ ಹುಡ್ಕೋ ಬಡಾವಣೆಯಲ್ಲಿರುವ ಶಾಸಕರ ಗೃಹ ಕಚೇರಿಯಲ್ಲಿ ಸನ್ಮಾನಿಸಿದರು.