ಹಾವು ಕಚ್ಚಿ ಮೃತಪಟ್ಟ ಪತ್ರಕರ್ತ ಉಮೇಶ ಮನೆಗೆ ಶಾಸಕರ ಭೇಟಿ, ಸಾಂತ್ವನ

| Published : Jun 16 2024, 01:53 AM IST

ಹಾವು ಕಚ್ಚಿ ಮೃತಪಟ್ಟ ಪತ್ರಕರ್ತ ಉಮೇಶ ಮನೆಗೆ ಶಾಸಕರ ಭೇಟಿ, ಸಾಂತ್ವನ
Share this Article
  • FB
  • TW
  • Linkdin
  • Email

ಸಾರಾಂಶ

ಈಚೆಗೆ ಹಾವು ಕಚ್ಚಿ ಮೃತಪಟ್ಟಿದ ಪತ್ರಕರ್ತ ಉಮೇಶ ಆಲಕೊಪ್ಪರ ಅವರ ಮನೆಗೆ ಸಾಬೂನ ಮತ್ತು ಮಾರ್ಜಕ ನಿಮಗದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಭೇಟಿ ನೀಡಿ ಕುಟುಂಬಕ್ಕೆ ಸ್ವಾಂತನ ಹೇಳಿ, ಸರ್ಕಾರದಿಂದ ವಿಶೇಷ ಅನುದಾನದಲ್ಲಿ ಆರ್ಥಿಕ ಸಹಾಯ ಕೊಡಿಸುವ ಭರವಸೆ ನೀಡಿದರು.

ನಾಲತವಾಡ: ಈಚೆಗೆ ಹಾವು ಕಚ್ಚಿ ಮೃತಪಟ್ಟಿದ ಪತ್ರಕರ್ತ ಉಮೇಶ ಆಲಕೊಪ್ಪರ ಅವರ ಮನೆಗೆ ಸಾಬೂನ ಮತ್ತು ಮಾರ್ಜಕ ನಿಮಗದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಭೇಟಿ ನೀಡಿ ಕುಟುಂಬಕ್ಕೆ ಸ್ವಾಂತನ ಹೇಳಿ, ಸರ್ಕಾರದಿಂದ ವಿಶೇಷ ಅನುದಾನದಲ್ಲಿ ಆರ್ಥಿಕ ಸಹಾಯ ಕೊಡಿಸುವ ಭರವಸೆ ನೀಡಿದರು.

ನಂತರ ಮಾತನಾಡಿದ ಅವರು, ಮೃತ ಪತ್ರಕರ್ತನಿಗೆ ಸರಕಾರದಿಂದ ಸಿಎಂ ಅವರ ವಿಶೇಷ ಅನುದಾನದಲ್ಲಿ ಆರ್ಥಿಕವಾಗಿ ಸಹಾಯ ಕೊಡಿಸುತ್ತೇನೆ. ಮೆಡಿಕಲ್ ರಿಪೋರ್ಟ್‌ ಹಚ್ಚಿ ನನಗೆ ಕೊಡಿ. ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸಬೇಡಿ, ಅವರು ಎಲ್ಲಿಯವರೆಗೆ ಶಿಕ್ಷಣ ಕಲಿಯಲು ಬಯಸುತ್ತಾರೆ ಶಿಕ್ಷಣ ಕೊಡಿಸಿ ಎಂದರು.

ಈ ವೇಳೆ ಮುಖಂಡರಾದ ರಾಯನಗೌಡ ತಾತರೆಡ್ಡಿ, ಎ.ಜಿ.ಗಂಗನಗೌಡರ, ಪ.ಪಂ ಸದಸ್ಯ ಬಸವರಾಜ ಗಂಗನಗೌಡರ, ರಮೇಶ ಆಲಕೊಪ್ಪರ, ಸಿದ್ದಣ್ಣ ಆಲಕೊಪ್ಪರ, ದೌರ್ಜನ್ಯ ಸಮಿತಿ ಸದಸ್ಯ ಮಲ್ಲು ತಳವಾರ, ಹಣಮಂತ ಕುರಿ, ಪರಶು ಕೆಂಭಾವಿ, ಬಸವರಾಜ ಇಲಕಲ್ ಹಾಗೂ ಇನ್ನಿತರರು ಇದ್ದರು.