ಸಾರಾಂಶ
ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಗ್ರಾಮಗಳಿಗೆ ಭೇಟಿ ನೀಡಿದಾಗ ಇಲ್ಲಿನ ರಸ್ತೆಗಳ ದುಸ್ಥಿತಿಯನ್ನು ಕಂಡು ತಾವು ಗೆದ್ದರೆ ಮೊದಲು ತೀರ ಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದು ಅದರಂತೆ ತಮ್ಮ ಕೈಲಾದಷ್ಟು ಅನುದಾನವನ್ನು ತಂದು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದೆ. ಚುನಾವಣೆಗೆ ಮೊದಲು ದೊಡ್ಡ ಬ್ಯಾಡಗೆರೆ, ಮುತ್ತುಗನ್ನೇ, ಮಲ್ಲನಹಳ್ಳಿ, ಹೆಬ್ಬಾಳು ಕೂಡುರಸ್ತೆಯ ಪರಿಸ್ಥಿತಿ ಕಂಡು ಗೆದ್ದ ಮೇಲೆ ಕಾಮಗಾರಿಗೆ ಗುದ್ದಲಿಪೂಜೆಗೆ ಬರುತ್ತೇನೆ ಎಂದು ಹೇಳಿದ್ದು ಇಂದು ಹೇಳಿದಂತೆ ನಡೆದ ತೃಪ್ತಿ ತಮಗಿದೆ ಎಂದರು.
ಕನ್ನಡಪ್ರಭ ವಾರ್ತೆ ಬೇಲೂರು
ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗ್ರಾಮೀಣ ಭಾಗದ ರಸ್ತೆಗಳಿಗೆ ಆದ್ಯತೆ ನೀಡಿ ತಮ್ಮ ಕೈಲಾದಷ್ಟು ಅನುದಾನವನ್ನು ತಂದು ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುತ್ತಿದ್ದು ತಮ್ಮನ್ನು ಟೀಕಿಸುವ ವಿರೋಧಿಗಳಿಗೆ ತಮ್ಮ ಕೆಲಸವೇ ಉತ್ತರ ಹೇಳಲಿದೆ ಎಂದು ಎಂದು ಶಾಸಕ ಎಚ್ ಕೆ ಸುರೇಶ್ ಹೇಳಿದರು. ಯಗಚಿ ನೀರಾವರಿ ಯೋಜನೆಯಡಿಯಲ್ಲಿ 249.9 ಲಕ್ಷ ರುಪಾಯಿಗಳ ಅಂದಾಜು ಮೊತ್ತದ 1135 ಮೀಟರ್ ಹೆಬ್ಬಾಳು ಗ್ರಾಮ ಪಂಚಾಯಿತಿಯ ದೊಡ್ಡ ಬ್ಯಾಡಗೆರೆ, ಮುತ್ತುಗನ್ನೇ, ಮಲ್ಲಳ್ಳಿಗೆ ಸೇರುವ ಡಾಂಬರ್ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಗ್ರಾಮಗಳಿಗೆ ಭೇಟಿ ನೀಡಿದಾಗ ಇಲ್ಲಿನ ರಸ್ತೆಗಳ ದುಸ್ಥಿತಿಯನ್ನು ಕಂಡು ತಾವು ಗೆದ್ದರೆ ಮೊದಲು ತೀರ ಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದು ಅದರಂತೆ ತಮ್ಮ ಕೈಲಾದಷ್ಟು ಅನುದಾನವನ್ನು ತಂದು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದೆ. ಚುನಾವಣೆಗೆ ಮೊದಲು ದೊಡ್ಡ ಬ್ಯಾಡಗೆರೆ, ಮುತ್ತುಗನ್ನೇ, ಮಲ್ಲನಹಳ್ಳಿ, ಹೆಬ್ಬಾಳು ಕೂಡುರಸ್ತೆಯ ಪರಿಸ್ಥಿತಿ ಕಂಡು ಗೆದ್ದ ಮೇಲೆ ಕಾಮಗಾರಿಗೆ ಗುದ್ದಲಿಪೂಜೆಗೆ ಬರುತ್ತೇನೆ ಎಂದು ಹೇಳಿದ್ದು ಇಂದು ಹೇಳಿದಂತೆ ನಡೆದ ತೃಪ್ತಿ ತಮಗಿದೆ ಎಂದರು.ಚುನಾವಣಾ ಸಂದರ್ಭದಲ್ಲಿ ಈ ಗ್ರಾಮಗಳಿಗೆ ಭೇಟಿ ನೀಡಿದಾಗ ಜಲ್ಲಿ ಕ್ರಷರ್‌ನಿಂದ ಅತಿ ಭಾರ ಹೊತ್ತ ಟಿಪ್ಪರ್‌ಗಳ ಓಡಾಟದಿಂದ ರಸ್ತೆಗಳು ಸಂಪೂರ್ಣ ಹಾಳಾಗಿತ್ತು. ಸಾಮರ್ಥ್ಯಕಿಂತ ಹೆಚ್ಚಿನ ತೂಕದ ಮರಳು, ಜಲ್ಲಿ ತುಂಬಿದ ಲಾರಿಗಳು ಹಗಲಿರುಳು ಓಡಾಡುತ್ತಿರುವುದರಿಂದ ರಸ್ತೆಗಳು ಹಾಳಾಗಿದ್ದು ಈಗಲೂ ಇದೇ ಸಮಸ್ಯೆ ಮುಂದುವರಿಯುತ್ತಿದೆ. ಚುನಾವಣೆ ಸಂದರ್ಭ ಈ ಬಾಗದ ಮತದಾರರು ತಮ್ಮ ಬೇಡಿಕೆಗಳನ್ನು ತಿಳಿಸಿದ್ದರು. ಅದರಂತೆ ಚುನಾವಣೆಯಲ್ಲಿ ಹೆಬ್ಬಾಳು ಗ್ರಾಮ ಪಂಚಾಯಿತಿ ಸುತ್ತ ಮುತ್ತಲಿನ ಗ್ರಾಮದ ಜನರು ಬೆಂಬಲ ನೀಡಿದ್ದರು. ಅದರಂತೆ ಅಂದು ನೀಡಿದ ಆಶ್ವಾಸನೆ ಇಂದು ಈಡೇರಿಸುತ್ತಿರುವ ನೆಮ್ಮದಿ ತಮಗಿದೆ ಎಂದರು.
ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಪರ್ವತಯ್ಯ ಮಾತನಾಡಿ, ಶಾಸಕರು ಚುನಾವಣೆ ಸಂದರ್ಭದಲ್ಲಿ ನುಡಿದ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ವಿರೋಧ ಪಕ್ಷದ ಕೆಲವರು ಶಾಸಕರು ಕೇವಲ ಗುದ್ದಲಿಪೂಜೆ, ಶಂಕುಸ್ಥಾಪನೆ ಮಾಡಿಕೊಂಡು ಬರುತ್ತಿದ್ದಾರೆ ಯಾವುದೇ ಅನುದಾನ ತರುತ್ತಿಲ್ಲ, ತಾಲೂಕಿನ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಟೀಕೆ ಮಾಡುತ್ತಿದ್ದರು. ತಮ್ಮ ಸ್ವಂತ ಸಾಮರ್ಥ್ಯದಿಂದ ಅನುದಾನ ತಂದು ತಾಲೂಕಿನಲ್ಲಿ ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಟೀಕಾಕಾರರಿಗೆ ಉತ್ತರ ಕೊಟ್ಟಿದ್ದಾರೆ ಎಂದರು.ಈ ಸಂದರ್ಭದಲ್ಲಿ ಹೆಬ್ಬಾಳು ಗ್ರಾಮ ಪಂಚಾಯತಿ ಸದಸ್ಯರಾದ ಗಂಗಾಧರಪ್ಪ, ದೇವೇಂದ್ರ, ಶಶಿಕಲಾ, ಗ್ರಾಮಸ್ಥರಾದ ದೊಡ್ಡ ವಿರೇಗೌಡ, ಮಲ್ಲಿಕಾರ್ಜುನ ಗುತ್ತಿಗೆದಾರ ಜಯಮೂರ್ತಿ ಇತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))