ಎಸ್.ಎಫ್.ಸಿ ಅನುದಾನ ಕಡಿತಗೊಳಿಸಿದ್ದು ಏಕೆ?: ಶಾಸಕ ಟಿ.ಎಸ್. ಶ್ರೀವತ್ಸ

| Published : Feb 23 2024, 01:45 AM IST

ಎಸ್.ಎಫ್.ಸಿ ಅನುದಾನ ಕಡಿತಗೊಳಿಸಿದ್ದು ಏಕೆ?: ಶಾಸಕ ಟಿ.ಎಸ್. ಶ್ರೀವತ್ಸ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೆ.ಆರ್. ಕ್ಷೇತ್ರಕ್ಕೆ 45 ಕೋಟಿ ಎಸ್.ಎಫ್.ಸಿ ಅನುದಾನ ನೀಡಿದ್ದರು. ಅದು ಟೆಂಡರ್ಹಂತದವರೆಗೂ ಹೋಗಿತ್ತು. ಸರ್ಕಾರದ ಆದೇಶಕ್ಕೆ ನಗರ ಪಾಲಿಕೆ ಆಯುಕ್ತರು 45 ಕೋಟಿಯಲ್ಲಿ ಪಕ್ಕದ ಚಾಮರಾಜ ಕ್ಷೇತ್ರಕ್ಕೆ 25 ಕೋಟಿ, ನರಸಿಂಹರಾಜ ಕ್ಷೇತ್ರಕ್ಕೆ 20 ಕೋಟಿ ನೀಡಿ ಎಂದು ಆದೇಶಿಸಿದ್ದಾರೆ.ಈ ಬಗ್ಗೆ ಮುಖ್ಯಮಂತ್ರಿಗಳಿಗೆ, ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡಿದ್ದೇನೆ. ಈಗ ನನ್ನ ಕ್ಷೇತ್ರದ ಜನರಿಗೆ ಏನು ಹೇಳಲಿ

ಕನ್ನಡಪ್ರಭ ವಾರ್ತೆ ಮೈಸೂರು

ಕೃಷ್ಣರಾಜ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ್ದ ಎಸ್.ಎಫ್.ಸಿ ಅನುದಾನ ಕಡಿತಗೊಳಿಸಿರುವುದು ಏಕೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಪ್ರಶ್ನಿಸಿದ್ದಾರೆ.

ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೆ.ಆರ್. ಕ್ಷೇತ್ರಕ್ಕೆ 45 ಕೋಟಿ ಎಸ್.ಎಫ್.ಸಿ ಅನುದಾನ ನೀಡಿದ್ದರು. ಅದು ಟೆಂಡರ್ಹಂತದವರೆಗೂ ಹೋಗಿತ್ತು. ಸರ್ಕಾರದ ಆದೇಶಕ್ಕೆ ನಗರ ಪಾಲಿಕೆ ಆಯುಕ್ತರು 45 ಕೋಟಿಯಲ್ಲಿ ಪಕ್ಕದ ಚಾಮರಾಜ ಕ್ಷೇತ್ರಕ್ಕೆ 25 ಕೋಟಿ, ನರಸಿಂಹರಾಜ ಕ್ಷೇತ್ರಕ್ಕೆ 20 ಕೋಟಿ ನೀಡಿ ಎಂದು ಆದೇಶಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿಗಳಿಗೆ, ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡಿದ್ದೇನೆ. ಈಗ ನನ್ನ ಕ್ಷೇತ್ರದ ಜನರಿಗೆ ಏನು ಹೇಳಲಿ ಎಂದು ಅವರು ಪ್ರಶ್ನಿಸಿದರು.

ಹಾಗೆಯೇ ಪೂರಕ ಬಜೆಟ್ನಲ್ಲಿ ಸರ್ಕಾರಿ ಎಂಜಿನಿಯರಿಂಗ್ಕಾಲೇಜನ್ನು ಘೋಷಿಸಬೇಕು. ಮೈಸೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ವಿದ್ಯಾರ್ಥಿಗಳಿದ್ದಾರೆ. ಆದ್ದರಿಂದ ಇನ್ನೊಂದೆರಡು ಮಹಿಳಾ ಕಾಲೇಜು ತೆರೆಯಬೇಕು ಎಂದು ಅವರು ಒತ್ತಾಯಿಸಿದರು.

ಮೈಸೂರು ಕರಗಕ್ಕೆ ನೂರು ವರ್ಷವಾಗುತ್ತಿದೆ. ಅದಕ್ಕೆ ವಿಶೇಷ ಅನುದಾನ ನೀಡಬೇಕು. ನಮ್ಮ ಕ್ಷೇತ್ರಕ್ಕೆ 2001ರಲ್ಲಿ ಆಶ್ರಯ ಮನೆ ಹಂಚಲಾಗಿತ್ತು. ಆದರೆ 20 ವರ್ಷದಿಂದಲೂ ಕಡತ ನಾಪತ್ತೆಯಾಗಿದೆ. ಫಲಾನುಭವಿಗಳ ಪಟ್ಟಿ ಪದೇ ಪದೇ ಬದಲಾಗುತ್ತಿದೆ. ಹಕ್ಕು ಪತ್ರವೂ ಇಲ್ಲ. ಆದರೆ ನೊಂದಣಿಯಾಗಿದೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಿ

ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ಹೊಸ ಹೊಸ ಕಾರ್ಯಕ್ರಮ ರೂಪಿಸಬೇಕು ಎಂದು ಶಾಸಕ ಟಿ.ಎಸ್. ಶ್ರೀವತ್ಸ ಆಗ್ರಹಿಸಿದರು.

ಮೈಸೂರನ್ನು ನಾವು ಈಗಲೂ ಮಹಾರಾಜರು ನಿರ್ಮಿಸಿದ ಅರಮನೆ, ಮೃಗಾಲಯ, ರೇಷ್ಮೆ ಕಾರ್ಖಾನೆಯನ್ನು ತೋರಿಸಿ ಕರೆಯುತ್ತಿದ್ದೇವೆ. ಈ ವಿಷಯದಲ್ಲಿ ಸರ್ಕಾರದ ಪಾತ್ರವೇನು? ಏನೇನು ಕಾರ್ಯಕ್ರಮ ರೂಪಿಸಿದೆ ಎಂದರೆ ಏನೂ ಇಲ್ಲ. ಆದ್ದರಿಂದ ವಾರದ ಎಲ್ಲಾ ದಿನವೂ ಪ್ರವಾಸಿಗರು ಇರುವುದರಿಂದ ಅರಮನೆಗೆ ಪ್ರತಿದಿನ ಸಂಜೆ ಕೆಲಕಾಲ ವಿದ್ಯುತ್ದೀಪ ಬೆಳಗಿಸಬಹುದೇ ಎಂಬುದನ್ನು ಚಿಂತಿಸಬೇಕು ಎಂದರು.

ಅರಮನೆ ಎದುರು ಕಾಡಾ ಕಚೇರಿ ಇದೆ. ಅಲ್ಲಿರುವ ಎಲ್ಲಾ ಕಚೇರಿಗಳನ್ನು ಹೊಸ ಜಿಲ್ಲಾಧಿಕಾರಿ ಕಚೇರಿಗೆ ಸ್ಥಳಾಂತರಿಸಿ, ಹಳೆ ಕಾಡಾ ಕಚೇರಿಯಲ್ಲಿ ಮೈಸೂರು ಬ್ರಾಂಡ್ ಉತ್ಪನ್ನಗಳ ಮಾರಾಟ ಮಳಿಗೆ ತೆರೆಯುವುದು ಸೂಕ್ತ. ಏಕೆಂದರೆ ಮೈಸೂರು ಬ್ರಾಂಡ್ ಹೆಸರಿನಲ್ಲಿ ಅನೇಕರು ಮೋಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.