ಸಾರಾಂಶ
ಮುದಗಲ್ ಪಟ್ಟಣದ ಎಸ್‌ಪಿಆರ್‌ಡಿಪಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಭಾ ಭವನಕ್ಕೆ ಶಾಸಕ ಮಾನಪ್ಪ ವಜ್ಜಲ ಭೂಮಿ ಪೂಜೆ ನೆರವೇರಿಸಿದರು.
ಮುದಗಲ್: ಸ್ಥಳೀಯ ಪದ್ಮಾವತಿ ಬಾಯಿ ರಾಘವೇಂದ್ರರಾವ್ ದೇಶಪಾಂಡೆ ಪಿಕಳಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ₹1.50 ಕೋಟಿ ಮೊತ್ತದಲ್ಲಿ ನಿರ್ಮಿಸುವ ಸಭಾಭವನಕ್ಕೆ ಲಿಂಗಸುಗೂರು ಕ್ಷೇತ್ರದ ಶಾಸಕ ಮಾನಪ್ಪ.ಡಿ.ವಜ್ಜಲ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಮಸ್ಕಿ ರಸ್ತೆಗೆ ಹೊಂದಿಕೊಂಡಿರುವ ಎಸ್‌ಪಿಆರ್‌ಡಿಪಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ 2021-22ನೇ ಸಾಲಿನ ಕಾಲೇಜು ಶಿಕ್ಷಣ ಇಲಾಖೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಕಾಮಗಾರಿಗಾಗಿ ಸಭಾಭವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ₹1.50 ಕೋಟಿ ಮೊತ್ತದಲ್ಲಿ ನಿರ್ಮಿಸುವದಕ್ಕಾಗಿ ಭೂಮಿ ಪೂಜೆ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಮುಂದಗಲ್ ಘಟಕದ ಅದ್ಯಕ್ಷ ಹುಲ್ಲೇಶ ಸಾಹುಕಾರ, ಹನುಮಂತಪ್ಪ ಕಂದಗಲ್ಲ, ಸಣ್ಣ ಸಿದ್ದಯ್ಯಸ್ವಾಮಿ, ಪ್ರಾಚಾರ್ಯ ಸಿದ್ರಾಮಪ್ಪ ಪಾಟೀಲ, ಉದಯಕುಮಾರ, ಶರಣಪ್ಪ, ಮಲ್ಲಣ್ಣ ಮಾಟೂರ,ಕರಿಯಪ್ಪ ಯಾದವ, ನಾಗರಾಜ ತಳವಾರ, ಮಂಜುನಾಥ, ಮಹಾಂತಗೌಡ ಬಯ್ಯಾಪೂರ, ಈರಣ್ಣ ಕಳ್ಳಿಮನಿ, ಚಂದಾವಲಿಸಾಬ, ಬಾಷಾಸಾಬ ಜಂಬಾಳಿ, ಲಕ್ಷ್ಮಿ ಕೋರಿಶೆಟ್ಟಿ ಇನ್ನಿತರರಿದ್ದರು.