ಮಳೆಹಾನಿ ಪ್ರದೇಶಗಳಿಗೆ ಶಾಸಕ ವಿಜಯೇಂದ್ರ ಭೇಟಿ

| Published : Jul 22 2024, 01:15 AM IST

ಮಳೆಹಾನಿ ಪ್ರದೇಶಗಳಿಗೆ ಶಾಸಕ ವಿಜಯೇಂದ್ರ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆಯಿಂದಾಗಿ ಹಾನಿಗೊಳಗಾದ ಶಿಕಾರಿಪುರ ತಾಲೂಕಿನ ವಿವಿಧ ಗ್ರಾಮಗಳಿಗೆ ಶಾಸಕ ವಿಜಯೇಂದ್ರ ಬೇಟಿ ನೀಡಿ ಪರಶೀಲಿಸಿ ತಾತ್ಕಾಲಿಕ ಪರಿಹಾರ ವಿತರಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಮಳೆಹಾನಿಗೊಳಗಾದ ಪ್ರದೇಶಗಳಿಗೆ ಶನಿವಾರ ಶಾಸಕ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಪರಿಶೀಲಿಸಿ, ತಾಳಗುಂದ, ಉಡುಗಣಿ, ಕಸಬಾ, ಅಂಜನಪುರ ಹೋಬಳಿ ವ್ಯಾಪ್ತಿಯಲ್ಲಿ ತುಂಬಿರುವ ಕೆರೆ,ಕಟ್ಟೆಗಳು, ಮಳೆಯಿಂದ ಜಲಾವೃತಗೊಂಡಿರುವ ಬೆಳೆಗಳನ್ನು ವೀಕ್ಷಿಸಿದರು.

ಮಂಚಿಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಕ್ಕಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಅವರು ಹಾನಿಗೊಳಗಾದ ಮನೆಗಳಿಗೆ ಪರಿಹಾರ ವಿತರಣೆ ಮಾಡಿದರು. ಇದೇ ಗ್ರಾಮದ ಮೃತ ಗಂಗಮ್ಮ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಮಳೆಯಿಂದ ಮನೆ ಹಾನಿಗೊಳಗಾಗಿರುವ ಬಿಳಿಕಿ ಗ್ರಾಮದ ಮುಬಾರಕ್, ಹನುಮಮ್ಮ, ರೆಹಾನ ಕಲೀಂವುಲ್ಲಾ ಅವರ ಮನೆಗೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿ ಎಲ್ಲರಿಗೂ ವೈಯಕ್ತಿಕ ಧನ ಸಹಾಯ ಮಾಡಿದರು.

ನಂತರ ಇನಾಂ ಅಗ್ರಹಾರ ಮುಚಡಿ ಗ್ರಾಮಕ್ಕೆ ಭೇಟಿ ನೀಡಿ ಶುಕ್ರವಾರ ನಡೆದ ದುರಂತದಲ್ಲಿ 5 ಜಾನುವಾರುಗಳನ್ನು ಕಳೆದುಕೊಂಡು ನೊಂದಿರುವ ರೈತ ಹನುಮಗೌಡರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಸರ್ಕಾರದಿಂದ 17.5 ರು. ಸಾವಿರ ಪರಿಹಾರ ವಿತರಿಸಲಾಯಿತು. ಜೊತೆಗೆ ಶಾಸಕರು ವೈಯಕ್ತಿಕ ಧನ ಸಹಾಯ ಮಾಡಿದರು.

ಬಿಳಿಕಿಯಲ್ಲಿ ಶಾಲಾ ಮಕ್ಕಳು ಹಾಗೂ ಇನಾಂ ಅಗ್ರಹಾರ ಮುಚಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಶಿರಾಳಕೊಪ್ಪ, ತಾಳಗುಂದ, ಬಿಳಿಕಿ, ಇನಾಂ ಅಗ್ರಹಾರ ಮುಚಡಿ, ಚಿಕ್ಕೇರೂರು ಮಾರ್ಗಕ್ಕೆ ಖಾಯಂ ಬಸ್ ಅನ್ನು ಒದಗಿಸಲು ಕೋರಿದರು. ತತ್‌ಕ್ಷಣ ಕ್ರಮ ಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಶೆಟ್ಟಿಹಳ್ಳಿ ಗ್ರಾಮದಲ್ಲಿ ಕೆರೆಯಲ್ಲಿ ಮುಳುಗಿ ಆಕಸ್ಮಿಕವಾಗಿ ಸಾವನ್ನಪ್ಪಿದ ನಾಗರಾಜ್ ಅವರಿಗೆ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕಟ್ಟಿಗೆ ಹಳ್ಳ ಮರಾಠ ಕ್ಯಾಂಪ್ ಭೇಟಿ ನೀಡಿ ಕೊಟ್ಟಿಗೆ ಬಿದ್ದು ಹಸು ಮೃತಪಟ್ಟ ರೈತ ಜಯಪ್ಪರವರ ಮನೆಗೆ ತೆರಳಿ ಸರ್ಕಾರದ ಪರಿಹಾರ ವಿತರಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಮಲ್ಲೇಶ್ ಬಿ ಪುಜಾರ್,ತಾಲೂಕು ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರಪ್ಪ, ಸಹಾಯಕ ಕೃಷಿ ನಿರ್ದೇಶಕ ಕಿರಣ್ ಕುಮಾರ್, ತಾಲೂಕು ತೋಟಗಾರಿಕಾಧಿಕಾರಿ ಪ್ರಶಾಂತ್, ತಾಳಗುಂದ ಹೋಬಳಿ ರಾಜಸ್ವ ನಿರೀಕ್ಷಕ ಮೇಘರಾಜ್, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೀರೇಂದ್ರ ಪಾಟೀಲ್, ತಾ.ಕಾರ್ಯದರ್ಶಿ ಕೊರಳಹಳ್ಳಿ ನಾಗರಾಜ, ತೊಗರ್ಸಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ದಿನೇಶ್ ಈಸೂರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕಲ್ಮನೆ ಉಮೇಶ್, ತಾ. ಕಾರ್ಯದರ್ಶಿ ಸತೀಶ್ ತಾಳಗುಂದ, ಮಾರವಳ್ಳಿ ಅಶೋಕ್, ರೈತ ಮೋರ್ಚಾ ಮುಖಂಡ ಗಿರೀಶ್ ಧಾರವಾಡ, ಸುಣ್ಣದ ಕೊಪ್ಪ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಿತ್ತಲ ಪರಮೇಶಪ್ಪ, ಶಂಭು,ಬಿಜೆಪಿ ಅಧ್ಯಕ್ಷ ಚನ್ನವೀರ ಶೆಟ್ರು, ಮಂಚಿ ಶಿವಾನಂದ, ಭೋವಿ ನಿಗಮದ ಮಾಜಿ ನಿರ್ದೇಶಕ ಸಣ್ಣ ಹನುಮಂತಪ್ಪ, ಜಿಲ್ಲಾ ಒಬಿಸಿ ಮೋರ್ಚಾದ ಡಿ.ಕೆ.ದಿವಾಕರ್ ಸೇರಿದಂತೆ ಮಂಚಿಕೊಪ್ಪ, ಬಿಳಿಕಿ, ಇನಾಂ ಅಗ್ರಹಾರ ಮುಚಡಿ ಗ್ರಾಮ ಪಂಚಾಯ್ತಿ ಹಾಲಿ ಹಾಗೂ ಮಾಜಿ ಸದಸ್ಯರು, ಪ್ರಮುಖರು ಹಾಜರಿದ್ದರು.

ತಾಳಗುಂದ-ಉಡಗಣಿಯಲ್ಲಿ ಕೆರೆಕಟ್ಟೆ

ತುಂಬಿ, ಹೊಲ-ಗದ್ದೆಗಳು ಜಲಾವೃತಶಿರಾಳಕೊಪ್ಪ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಶಿರಾಳಕೊಪ್ಪ ಭಾಗದ ತಾಳಗುಂದ - ಉಡಗಣಿ ಹೋಬಳಿಯ ಕೆರೆಕಟ್ಟೆಗಳು ತುಂಬಿ ಗದ್ದೆಗಳಲ್ಲಿ ನೀರು ತುಂಬಿ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆ ಉಂಟಾಗಿದೆ.

ಸುರಿಯುತ್ತಿರುವ ಮಳೆಗೆ ಈ ಭಾಗದ ೧೦ಕ್ಕೂ ಹೆಚ್ಚು ಮನೆಗಳ ಗೋಡೆ ಕುಸಿದಿವೆ. ಶಿರಾಳಕೊಪ್ಪ ಹೊರವಲಯದ ಚುರ್ಚಿಕಟ್ಟೆ ಕೆರೆ ಏರಿ ಒಡೆದು ತೀವ್ರ ಹಾನಿ ಯಾಗಿದೆ. ಐತಿಹಾಸಿಕ ಬಳ್ಳಿಗಾವಿ ಗ್ರಾಮದಲ್ಲಿ ರಸ್ತೆ ಮೇಲೆ ನೀರು ಹರಿದು ಒಡಾಡಲೂ ತೊಂದರೆ ಉಂಟಾಗಿದೆ. ಬಳ್ಳಿಗಾವಿ ಗ್ರಾಮದ ತಾಳಗುಂದ ರಸ್ತೆಯಲ್ಲಿ ಕಾಳಿಕಾಂಬಾ ಕೆರೆ ತುಂಬಿ ತುಳುಕುತ್ತಿದೆ. ಬಳ್ಳಿಗಾವಿ ದೊಡ್ಡ ಕೆರೆಯಿಂದ ಹೊರ ಹೋಗುವ ಕೋಡಿಯನ್ನು ಮುಚ್ಚಿ ಕೆರೆ ತುಂಬಿ ಹೆಚ್ಚಿನ ನೀರು ರಸ್ತೆಗೆ ಬರು ವಂತಾಗಿದೆ, ಹಾಗೆಯೇ ಕೆರೆ ಕೋಡಿ ಬಳಿ ಎರಡು ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಮಕ್ಕಳು ನೀರಲ್ಲಿ ಹೋಗುವಂತಾಗಿದೆ ಎಂದು ಬಳ್ಳಿಗಾವಿ ಗ್ರಾಪಂ ಸದಸ್ಯ ರಾಮಣ್ಣ ಪತ್ರಿಕೆಗೆ ತಿಳಿಸಿದ್ದಾರೆ.ಶಾಸಕ ಮಿಂಚಿನ ಸಂಚಾರ:

ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಮಳೆಯಿಂದ ತಾಲೂಕಲ್ಲಿ ಆಗುತ್ತಿರುವ ಅನಾಹುತವನ್ನು ಸಂಬಂಧಿಸಿದ ಅಧಿಕಾರಿಗಳಿಂದ ತಿಳಿದು ಬಳ್ಳಾರಿಯಿಂದ ನೇರವಾಗಿ ಶಿರಾಳಕೊಪ್ಪ ಹತ್ತಿರದ ಹಕ್ಕಳಿ ಗ್ರಾಮಕ್ಕೆ ಆಗಮಿಸಿ ಮಳೆಗೆ ಕುಸಿದು ಬಿದ್ದ ಮನೆ ವೀಕ್ಷಿಸಿ, ನಂತರ ವಿವಿಧೆಡೆ ಭೇಟಿ ನೀಡಿದರು.ವಿಜಯೇಂದ್ರ ಅವರ ಜೊತೆಯಲ್ಲಿ ತಹಶೀಲ್ದಾರ್ ಮಲ್ಲೇಶ್ ಪೂಜಾರ್‌, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ವರಪ್ಪ, ಸಹಾಯಕ ಕೃಷಿ ನಿರ್ದೇಶಕ ಕಿರಣಕುಮಾರ್ ತಾಲೂಕು ತೋಟಗಾರಿಕಾ ಅಧಿಕಾರಿ ಪ್ರಶಾಂತ್, ತಾಳಗುಂದ ರಾಜಸ್ವ ನಿರೀಕ್ಷಕ ಮೇಘರಾಜ್, ನಿಂಬೆಗೊಂದಿ ಸಿದ್ದಲಿಂಗಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಹನುಮಂತಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೀರೇಂದ್ರ ಪಾಟೀಲ್, ಶಿರಾಳಕೊಪ್ಪ ಬಿಜೆಪಿ ನಗರ ಅಧ್ಯಕ್ಷ ಚೆನ್ನವೀರಶೆಟ್ಟಿ, ಮಂಜಿ ಶಿವಣ್ಣ, ಸಣ್ಣ ಹನುಮಂತಪ್ಪ, ರವಿ ಶಾನಭೋಗ ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು.