ವಿಜಯಪುರ ನಗರದ ಕೇಂದ್ರ ಕಾರಾಗೃಹ ಬಳಿ ಗಣೇಶ ವಿಸರ್ಜನೆಗೆ ಶಾಶ್ವತ ಪುಷ್ಕರಣಿ ಹಾಗೂ ಬಯಲು ರಂಗಮಂದಿರ ಮಾದರಿಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗುವುದು. ಅದಕ್ಕಾಗಿ ಶಾಸಕರ ನಿಧಿಯಿಂದ ₹1 ಕೋಟಿ ಅನುದಾನ ಒದಗಿಸುತ್ತೇನೆ. ಪ್ರತಿ ವರ್ಷ ಪಾಲಿಕೆಯಿಂದ ₹50 ಲಕ್ಷ ಅನುದಾನ ಪಡೆದು ಮುಂದಿನ ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಗಣೇಶೋತ್ಸವಕ್ಕೆ ಅನುಕೂಲ ಕಲ್ಪಿಸುವುದಾಗಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಕೇಂದ್ರ ಕಾರಾಗೃಹ ಬಳಿ ಗಣೇಶ ವಿಸರ್ಜನೆಗೆ ಶಾಶ್ವತ ಪುಷ್ಕರಣಿ ಹಾಗೂ ಬಯಲು ರಂಗಮಂದಿರ ಮಾದರಿಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗುವುದು. ಅದಕ್ಕಾಗಿ ಶಾಸಕರ ನಿಧಿಯಿಂದ ₹1 ಕೋಟಿ ಅನುದಾನ ಒದಗಿಸುತ್ತೇನೆ. ಪ್ರತಿ ವರ್ಷ ಪಾಲಿಕೆಯಿಂದ ₹50 ಲಕ್ಷ ಅನುದಾನ ಪಡೆದು ಮುಂದಿನ ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಗಣೇಶೋತ್ಸವಕ್ಕೆ ಅನುಕೂಲ ಕಲ್ಪಿಸುವುದಾಗಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

ವಿಜಯಪುರ ನಗರದಲ್ಲಿ ಮುಂಬರುವ ಗಣೇಶ ವಿಸರ್ಜನೆಗಾಗಿ ಕೇಂದ್ರ ಕಾರಾಗೃಹ ಹತ್ತಿರ, ಸ್ಯಾಟಲೈಟ್ ಬಸ್ ನಿಲ್ದಾಣ ಹತ್ತಿರ, ತಾಜ್ಬಾವಡಿ ಆವರಣದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಹೊಂಡಗಳ ಕಾಮಗಾರಿ ವೀಕ್ಷಣೆ ಮಾಡಿ, ಪಾಲಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಗೌರಯುತವಾಗಿ ಹಿಂದೂ ಸಂಪ್ರದಾಯದಂತೆ ಗಣೇಶ ವಿಸರ್ಜನೆ ಮಾಡಲು ಅನುಕೂಲ ಕಲ್ಪಿಸಲು ಮೂರು ಕಡೆ ಹೊಂಡ ನಿರ್ಮಿಸಲಾಗುತ್ತದೆ. ತಾಜ್‌ಬಾವಡಿ ಬಳಿ ಗಣೇಶ ವಿಸರ್ಜನೆ ಕೈಬಿಡಲಾಗುತ್ತಿದೆ ಎಂದು ಕೆಲವರು ಅಪಪ್ರಚಾರ ನಡೆಸಿದ್ದಾರೆ. ಅದಕ್ಕೆ ಯಾರೂ ಕಿವಿಗೊಡಬಾರದು ಎಂದರು.

ಮಹಾನಗರ ಪಾಲಿಕೆ ಮೇಯರ್ ಎಂ.ಎಸ್. ಕರಡಿ, ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಡಿ.ಎಸ್.ಪಿ ಜಿ. ನಾಗರಾಜ, ಸಿಪಿಐ ಪ್ರದೀಪ ತಳಕೇರಿ, ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ರಾಹುಲ ಜಾಧವ, ಮುಖಂಡರಾದ ಗುರು ಗಚ್ಚಿನಮಠ, ಚಂದ್ರು ಚೌಧರಿ, ಶಂಕರ ಹೂಗಾರ, ರಾಜು ಜಾಧವ ಉಪಸ್ಥಿತರಿದ್ದರು.