ಸಾರಾಂಶ
ಚಿಟ್ಟಗುಪ್ಪಾ ತಾಲೂಕಿನ ಉಡಬಾಳ ಹಾಗೂ ಮುಸ್ತರಿ ಗ್ರಾಮಕ್ಕೆ ಸಂಕರ್ಪ ಸೇತುವೆ ಹಾಗೂ ರಸ್ತೆ ಭಾರಿ ಮಳೆಗೆ ಗ್ರಾಮಗಳ ಸಂಪರ್ಕ ಕಡಿತಗೊಂಡಿರುವುದನ್ನು ಎಂಎಲ್ಸಿ ಭೀಮರಾವ ಪಾಟೀಲ್ ವಿಕ್ಷಿಸಿದರು.
ಕನ್ನಡಪ್ರಭ ವಾರ್ತೆ ಹುಮನಾಬಾದ
ಇತ್ತಿಚಿಗೆ ಸುರಿದ ಭಾರೀ ಮಳೆಗೆ ಗ್ರಾಮ ಸಂಪರ್ಕ ಸೇತುವೆ ಹಾಗೂ ರಸ್ತೆ ಕೊಚ್ಚಿಕೊಂಡು ಹೋಗಿದ್ದ ಸ್ಥಳಕ್ಕೆ ಎಂಎಲ್ಸಿ ಭೀಮರಾವ ಪಾಟೀಲ್ ಭೇಟಿ ನೀಡಿದ್ದರು. ಚಿಟ್ಟಗುಪ್ಪಾ ತಾಲೂಕಿನ ಉಡಬಾಳ ಹಾಗೂ ಮುಸ್ತರಿ ಗ್ರಾಮಕ್ಕೆ ಸಂಕರ್ಪ ಸೇತುವೆ ಹಾಗೂ ರಸ್ತೆ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಇದೇ ರೀತಿ ನಿತ್ಯ ಜೀವನಕ್ಕೆ ಓಡಾಡುವ ಜನಜೀವನ ಅಸ್ತವ್ಯಸ್ಥವಾಗಿದೆ.ಪ್ರತಿನಿತ್ಯ ಓಡಾಡುವ ವಾಹನ ಸವಾರರು ಪರದಾಡುವಂತಾಗಿದ್ದು ಶೀಘ್ರದಲ್ಲೆ ರಸ್ತೆ ಕಾಮಗಾರಿ ಪ್ರಾರಂಭಿಸುವ ಮೂಲಕ ಸಾರ್ವಜನಿಕರ ಓಡಾಡಕ್ಕೆ ಅನುಕೂಲ ಕಲ್ಪಿಸುವಂತೆ ಹಾಗೂ ಮುಂಬರುವ ದಿನಗಳಲ್ಲಿ ಇನ್ನೂ ಭಾರೀ ಮಳೆಯ ಸಂಭವ ವಿರುವ ಕಾರಣ ಮುಂಜಾಗೃತ ಕ್ರಮ ವಹಿಸುವಂತೆ, ಕ್ಷೇತ್ರ ವ್ಯಾಪ್ತಿಯಲ್ಲಿರುವ ಇನ್ನಿತರ ಕಡೆಯಲ್ಲಿ ಹಾನಿ ಕುರಿತು ಪರೀಶಿಲಿಸಿ ಶೀಘ್ರದಲ್ಲಿ ವರದಿ ಸಲ್ಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಸೂಚಿಸಿದರು.