ಎಂ.ಎಂ.ಸಿಂಧೂರ ಬೀಳ್ಕೊಡುಗೆ ಸಮಾರಂಭ ಇಂದು

| Published : Aug 03 2024, 12:37 AM IST

ಎಂ.ಎಂ.ಸಿಂಧೂರ ಬೀಳ್ಕೊಡುಗೆ ಸಮಾರಂಭ ಇಂದು
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಜಿಲ್ಲಾ ಗುರುಸ್ಪಂದನ ಶಿಕ್ಷಕರ ಬಳಗ ಹಾಗೂ ಎಂ.ಎಂ.ಸಿಂಧೂರ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ಸಹನಿರ್ದೇಶಕರು/ಬೆಳಗಾವಿ ಸಿಟಿಇ ಪ್ರಾಚಾರ್ಯರಾದ ಎಂ.ಎಂ. ಸಿಂಧೂರ ಸೇವಾನಿವೃತ್ತರಾದ ಪ್ರಯುಕ್ತ ಆ.3ರಂದು ಮಧ್ಯಾಹ್ನ 2.30ಕ್ಕೆ ನಗರದ ಗಾಂಧಿ ಭವನದಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ.

ಬೆಳಗಾವಿ: ಬೆಳಗಾವಿ ಜಿಲ್ಲಾ ಗುರುಸ್ಪಂದನ ಶಿಕ್ಷಕರ ಬಳಗ ಹಾಗೂ ಎಂ.ಎಂ.ಸಿಂಧೂರ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ಸಹನಿರ್ದೇಶಕರು/ಬೆಳಗಾವಿ ಸಿಟಿಇ ಪ್ರಾಚಾರ್ಯರಾದ ಎಂ.ಎಂ. ಸಿಂಧೂರ ಸೇವಾನಿವೃತ್ತರಾದ ಪ್ರಯುಕ್ತ ಆ.3ರಂದು ಮಧ್ಯಾಹ್ನ 2.30ಕ್ಕೆ ನಗರದ ಗಾಂಧಿ ಭವನದಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ.ಕರ್ನಾಟಕ ನಗರ ಮೂಲ ಸೌರ್ಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಹುಬ್ಬಳ್ಳಿ ಕಾರ್ಯನಿರ್ವಾಹಕ ನಿರ್ದೇಶಕರಾದ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ ಉದ್ಘಾಟಿಸಲಿದ್ದು, ಶಾಲಾ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಸಿದ್ದರಾಮ ಮನಹಳ್ಳಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ, ಅತಿಥಿಗಳಾಗಿ ಶಾಲಾ ಶಿಕ್ಷಣ ಇಲಾಖೆ ಧಾರವಾಡ ಅಪರ ಆಯುಕ್ತ ಈಶ್ವರ ನಾಯಕ, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಬೆಳಗಾವಿ ಸಹನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ, ಬೆಳಗಾವಿಯ ಕಿಡ್ನಿ ಸ್ಪೇಷಾಲಿಸ್ಟ್ ಡಾ.ಎಂ.ಎಸ್‌.ಖಾನಪೇಟ, ಹುಬ್ಬಳ್ಳಿ ಕಿಮ್ಸ್ ಆ್ಸಪತ್ರೆಯ ಡಾ. ರವಿ ಗದಗ, ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ, ಬೆಳಗಾವಿ ಡಯಟ್‌ ಪ್ರಾಚಾರ್ಯ ಬಸವರಾಜ ನಾಲತವಾಡ ಆಗಮಿಸುವರು.