ಮೋದಿ ಮತ್ತೆ ಪ್ರಧಾನಿ ಆಗೋದು ಸೂರ್ಯ ಚಂದ್ರರಷ್ಟೇ ಸತ್ಯ: ಬಿ.ಎಸ್.ಯಡಿಯೂರಪ್ಪ

| Published : Apr 14 2024, 01:50 AM IST

ಮೋದಿ ಮತ್ತೆ ಪ್ರಧಾನಿ ಆಗೋದು ಸೂರ್ಯ ಚಂದ್ರರಷ್ಟೇ ಸತ್ಯ: ಬಿ.ಎಸ್.ಯಡಿಯೂರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮೊಳಕಾಲ್ಮುರು ತಾಲೂಕಿನ ರಾಂಪುರ ಗ್ರಾಮದಲ್ಲಿ ಶನಿವಾರ ಬಿಜೆಪಿ ಪ್ರಚಾರ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ, ಮೊಳಕಾಲ್ಮುರು

ಜಾತಿ ವಿಷ ಬೀಜ ಬಿತ್ತಿ ಮತ ಪಡೆಯಲು ಹವಣಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಜನ ಬೆಂಬಲ ಕಂಡು ನಡುಕ ಶುರುವಾಗಿದೆ. ಸೂರ್ಯ, ಚಂದ್ರ ಇರುವುದೆಷ್ಟು ಸತ್ಯವೋ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗೋದು ಅಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ತಾಲೂಕಿನ ರಾಂಪುರ ಗ್ರಾಮದಲ್ಲಿ ಶನಿವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಆ ಪಕ್ಷದಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂಬುದೇ ಸ್ಪಷ್ಟತೆ ಇಲ್ಲದಾಗಿದೆ. ವಿಶ್ವವೇ ಹಾಡಿ ಹೊಗಳುವಂತಹ ನಾಯಕ ನರೇಂದ್ರ ಮೋದಿಯವನ್ನು ಮತ್ತೊಮ್ಮೆ ಪ್ರಧಾನಿಯಾಗು ವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.

ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಗೆ ನಾವು ನಾಲ್ಕು ಸಾವಿರ ಸೇರಿಸಿ ಕೊಡುತ್ತಿದ್ದೆವು. ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ನಿಲ್ಲಿಸಿದೆ. ಜತೆಗೆ ಭಾಗ್ಯ ಲಕ್ಷ್ಮಿ ಯೋಜನೆಯನ್ನು ಸ್ಥಗಿತಗೊಳಿಸಿದೆ. ಬಿಟ್ಟಿ ಭಾಗ್ಯದ ಹೆಸರಲ್ಲಿ ರಾಜ್ಯವನ್ನು ದಿವಾಳಿಗೆ ಹಂಚಿಗೆ ತಂದಿರುವ ಕಾಂಗ್ರೆಸ್ ಜಾತಿಯ ವಿಷ ಬೀಜ ಬಿತ್ತಿ ಮತ ಪಡೆಯುತ್ತಿದ್ದ ಕಾಲ ಸರಿದು ಹೋಗಿದೆ. ಹಣ ಬಲ, ತೋಳ್ಬಲ ಹೆಂಡ ಹಂಚಿ ಗೆಲ್ಲುವ ಕಾಲ ಕೂಡಾ ಸರಿದಿದೆ. ಸರಿ ತಪ್ಪು ಅರಿಯುವ ಕಾಲ ಬಂದಿದೆ. ಕಾಂಗ್ರೆಸ್ ಭ್ರಮೆಯಿಂದ ಹೊರ ಬರಬೇಕು. ರಾಜ್ಯದಲ್ಲಿ ಈ ಬಾರಿ 28 ಸ್ಥಾನಗಳನ್ನು ಗೆಲ್ಲಿಸಿ ಎಲ್ಲರನ್ನೂ ಮೋದಿ ಬಳಿ ಕರೆದೊಯ್ಯ ಬೇಕು. ಮುತ್ಸದ್ದಿ ರಾಜಕಾರಣಿ ಗೋವಿಂದ ಕಾರಜೋಳ ಅವರನ್ನು ಎರಡು ಲಕ್ಷಕ್ಕೂ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕಾದರೆ ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಬೇಕು ಎಂದರು.

ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ ದಲಿತ, ಹಿಂದುಳಿದ ಸಮುದಾಯಗಳನ್ನು ಓಟ್ ಬ್ಯಾಂಕ್ ನ್ನಾಗಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷದ ದಲಿತರ ಅಭಿವೃದ್ಧಿ ಬಯಸಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ದೇಶ ಮುನ್ನೆಡೆಸುವ ನಾಯಕರಿಲ್ಲ. ದಾರಿಯಲ್ಲಿ ಹೋಗುವ ಹುಚ್ಚನೂ ರಾಹುಲ್ ಗಾಂಧಿಯವರನ್ನು ಪ್ರಧಾನಿಯನ್ನಾಗಿಸಲು ಒಪ್ಪುವುದಿಲ್ಲ, ಅಂತಹುದರಲ್ಲಿ ಕಾಂಗ್ರೆಸ್ ಕನಸು ಕಾಣುವುದು ಬಿಡಬೇಕು. ವಿಶ್ವವೇ ಹಾಡಿ ಹೊಗಳುತ್ತಿರುವ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಯಾಗಬೇಕಾದರೆ ಈ ಬಾರಿ ಪಕ್ಷದ ಅಭ್ಯರ್ಥಿಯನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು. ಬಸವಣ್ಣನ ನಾಡಿನಲ್ಲಿ ಹುಟ್ಟಿ ಬೆಳೆದಿರುವ ನಾನು ಮಾದಾರ ಚನ್ನಯ್ಯನ ವಂಶಕ್ಕೆ ಸೇರಿದವನು. ಬಸವಣ್ಣನ ಆಶಯದಂತೆ ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ ಕಲ್ಪಿಸಿ ನೀರಾವರಿ, ಶಿಕ್ಷಣಕ್ಕೆ ಆದ್ಯತೆ ನೀಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪ್ರತಿಯೊಬ್ಬರು ನನಗೆ ಮತ ನೀಡಿ ಆಶೀರ್ವದಿಸಬೇಕೆಂದು ಹೇಳಿದರು.

ಮಾಜಿ ಸಚಿವ ಭೈರತಿ ಬಸವರಾಜ, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಪಕ್ಷದ ಜಿಲ್ಲಾಧ್ಯಕ್ಷ ಮುರಳಿ, ಮಂಡಲ ಅಧ್ಯಕ್ಷರಾದ ಡಾ.ಪಿ.ಎಂ.ಮಂಜುನಾಥ, ರಾಮರೆಡ್ಡಿ, ಜಯಪಾಲಯ್ಯ, ದಾವಣಗೆರೆ ಹಾಲೂರು ನಿಂಗರಾಜ್, ಡಿ.ಒ.ಮುರಾರ್ಜಿ, ಟಿ.ರೇವಣ್ಣ, ಜಿಂಕ್ಲ ಬಸವರಾಜ, ಪ್ರಭಾಕರ್, ಸೂರಮ್ಮನಹಳ್ಳಿ ನಾಗರಾಜ, ವೆಂಕಟೇಶ,ರಾಮದಾಪ್ಪ, ಜೀರಳ್ಳಿ ತಿಪ್ಪೇಸ್ವಾಮಿ,ಮೂರ್ತಿ ಇದ್ದರುಕಾರಜೋಳರು ಗೆದ್ದರದೇ ತಂಗಡಗಿಗೆ ಕಪಾಳಮೋಕ್ಷನೂರರ ಗಡಿ ದಾಟದಿರುವ ಇಂಡಿಯಾ ಒಕ್ಕೂಟಕ್ಕೆ ಮತ ಹಾಕಿದರೆ ಡಸ್ಟ್ ಬಿನ್‌ಗೆ ಹಾಕಿದಂತಾಗುತ್ತದೆ ಇಡಿ ವಿಶ್ವವೇ ಹಾಡಿ ಹೊಗಳುವಂಥ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕೆಂದು ಶಾಸಕ ಜನಾರ್ಧನ ರೆಡ್ಡಿ ಹೇಳಿದರು.

ಇಡಿ ಕುಟುಂಬವನ್ನೇ ತ್ಯಾಗ ಮಾಡಿ ಯೋಧರ ಜತೆಗೆ ದೀಪಾವಳಿ ಆಚರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯ ದಿಟ್ಟ ನಿರ್ಧಾರದಿಂದ ಇಡೀ ವಿಶ್ವವೇ ಭಾರತ ವನ್ನು ಗಮನಿಸುತ್ತಿದೆ. ಅಂತಹ ಒಬ್ಬ ಮಹಾನ್ ನಾಯಕನ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಕೀಳಾಗಿ ಮಾತನಾಡುತ್ತಾರೆ. ನಾವುಗಳು ಅವರ ಕಪಾಳಕ್ಕೆ ಹೊಡೆ ಯುವುದು ಬೇಡ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕಪಾಳ ಮೋಕ್ಷ ಮಾಡೋಣವೆಂದರು.ಹಟ್ಟಿ ಮಾದಿಗ ಅನ್ನೋ ಕಾರಣಕ್ಕೆ ಬಿಜೆಪಿ ಟಿಕೆಟ್ ನೀಡಿದೆ: ಗೋವಿಂದ ಕಾರಜೋಳ

ಮೊಳಕಾಲ್ಮುರು: ಮಾದಾರ ಚೆನ್ನಯ್ಯನ ವಂಶಕ್ಕೆ ಸೇರಿದವನಾಗಿರುವ ನಾನು ಮೂಲತಃ ಹಟ್ಟಿ ಮಾದಿಗ. ಆ ಕಾರಣಕ್ಕೆ ಬಿಜೆಪಿ ಲೋಕಸಭೆಗೆ ಟಿಕೆಟ್ ನೀಡಿದೆ. ರಾಜ್ಯ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ, ಸಚಿವ ಸ್ಥಾನ ಎಲ್ಲವೂ ಮಾದಿಗ ಎಂಬ ಕಾರಣಕ್ಕೆ ಬಂದ ಬಳುವಳಿಯಾಗಿವೆ ಎಂದು ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದಕಾರಜೋಳ ಹೇಳಿದರು.ತಾಲೂಕಿನ ಬಿಜಿಕೆರೆ ಗ್ರಾಮದಲ್ಲಿ ಶನಿವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯದ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ನವರು ಗೋವಿಂದ ಕಾರಜೋಳ ಸ್ಪರ್ಧೆ ಮಾಡಬಾರದಿತ್ತು ಎಂದು ಸಭೆಯೊಂದರಲ್ಲಿ ಮಾತನಾಡಿದ್ದಾರೆ. ಅವರ ಬಗ್ಗೆ ನನಗೆ ಗೌರವ ಇದೆ. ಪಕ್ಷ ಮಾದಿಗರಿಗೆ ಟಿಕೆಟ್ ನೀಡಿದಾಗ ನಾನು ಸ್ಪರ್ಧಿಸಲೇಬೇಕು. ನನ್ನ ರಾಜಕೀಯ ಜೀವನದಲ್ಲಿ ಸದಾ ಬಸವಣ್ಣನ ಆದರ್ಶಗಳನ್ನು ಪಾಲಿಸಿಕೊಂಡು ಬಂದಿರುವೆ. ಬಸವಣ್ಣನ ನಾಡಿನಲ್ಲಿ ಹುಟ್ಟಿ ಬೆಳೆದ ನಾನು ಜಾತಿ ಹೆಸರಲ್ಲಿ ಯಾವತ್ತೂ ರಾಜಕಾರಣ ಮಾಡದೆ ಸದಾ ಬಡವರ,ದುರ್ಬಲ ವರ್ಗದ ಏಳಿಗೆಗಾಗಿ ಶ್ರಮಿಸಿದ್ದೇನೆ ಎಂದರು.ಕಾಂಗ್ರೆಸ್ ಪಕ್ಷ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನ ಬದಲಾಯಿಸುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಮಾನವ ಕುಲ ಕೋಟಿ ಇರುವವರೆಗೆ ದೇಶದ ಸಂವಿಧಾನ ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದನ್ನು ಪ್ರತಿಯೊಬ್ಬರು ಅರಿಯಬೇಕು. ಮೊದಲ ಬಾರಿ ಪ್ರಧಾನಿ ಹುದ್ದೆ ಅಲಂಕರಿಸುವ ಮುನ್ನ ನರೇಂದ್ರ ಮೋದಿಯವರು ಸಂಸತ್ ಭವನದ ಬಾಗಿಲಿಗೆ ಶಿರಬಾಗಿ ನಮಸ್ಕರಿಸಿದ್ದರು. ಸಾಮಾನ್ಯ ವ್ಯಕ್ತಿಯಾಗಿದ್ದ ನಾನು ಪ್ರಧಾನಿಯಾಗಲು ದೇಶದ ಸಂವಿಧಾನದಿಂದ ಸಾಧ್ಯವಾಯಿತು ಎಂದಿದ್ದರು. ಅಂಬೇಡ್ಕರರನ್ನೇ ಸೋಲಿಸಿದ ಕಾಂಗ್ರೆಸ್ ಪಕ್ಷ ಕೊನೆಗೆ ಅವರ ಶವಸಂಸ್ಕಾರಕ್ಕೂ ಜಾಗ ನೀಡಲು ಹಿಂದೇಟು ಹಾಕಿತು. ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ವಿರೋದ ಪಕ್ಷದ ಸಾಲಲ್ಲಿ ಕೂರುತ್ತಾರೆ. ಬಿಜೆಪಿ ಗೆ ಮತ ಹಾಕಿದರೆ ಅಭಿವೃದ್ಧಿ ಹರಿಕಾರ ನರೇಂದ್ರ ಮೋದಿಯವರ ಜೊತೆ ಕುಳಿತುಕೊಳ್ಳುವೆ. ಪ್ರಬುದ್ಧ ಆಯ್ಕೆ ಮತದಾರರದ್ದಾಗಲಿ ಎಂದು ಕಾರಜೋಳ ಹೇಳಿದರು.

ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ,ಕಾಲುವೆಹಳ್ಳಿ ಶ್ರೀನಿವಾಸ, ಮಂಡಲ ಅಧ್ಯಕ್ಷರಾದ ಡಾ.ಪಿ.ಎಂ.ಮಂಜುನಾಥ, ರಾಮರೆಡ್ಡಿ, ಜಯಪಾಲಯ್ಯ,ಡಿ.ಒ.ಮುರಾರ್ಜಿ, ಟಿ.ರೇವಣ್ಣ,ಜಿಂಕ್ಲ ಬಸವರಾಜ, ಪ್ರಭಾಕರ್,ಸೂರಮ್ಮನಹಳ್ಳಿ ನಾಗರಾಜ, ವೆಂಕಟೇಶ,ರಾಮದಾಸಪ್ಪ, ಸಿದ್ದಾರ್ಥ ಇದ್ದರು.