ಸಾರಾಂಶ
ಲೋಕಸಭೆ ಚುನಾವಣೆ ಸಂಬಂಧ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲು ಏ.೧೪ ರಂದು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದಲ್ಲಿ ಮೋದಿ ಗೋಬ್ಯಾಕ್ ಚಳವಳಿ ನಡೆಯಿತು.
ಚಾಮರಾಜನಗರ: ಲೋಕಸಭೆ ಚುನಾವಣೆ ಸಂಬಂಧ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲು ಏ.೧೪ ರಂದು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದಲ್ಲಿ ಮೋದಿ ಗೋಬ್ಯಾಕ್ ಚಳವಳಿ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಮೋದಿ ವಿರುದ್ದ ಘೋಷಣೆ ಕೂಗಿದರು. ಜಿಲ್ಲಾ ಕಾಂಗ್ರೆಸ್ ಹಾಗೂ ಕಾಡಾ ಅಧ್ಯಕ್ಷಪಿ.ಮರಿಸ್ವಾಮಿ ಮಾತನಾಡಿ, ರಾಜ್ಯದ ೨೨೩ ತಾಲೂಕಿನಲ್ಲಿ ತೀವ್ರ ಬರಗಾಲ ಎದುರಾಗಿದ್ದು, ರಾಜ್ಯಕ್ಕೆ ಬರ ಪರಿಹಾರದ ಹಣ ನೀಡಲಿಲ್ಲ. ರಾಜ್ಯದಿಂದ ಕೇಂದ್ರಕ್ಕೆ ೪.೫೦ಲಕ್ಷ ಕೋಟಿ ಜಿಎಸ್ಟಿ ರೂಪದಲ್ಲಿ ಸಂಗ್ರಹವಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯಕ್ಕೆ ಕೊಟ್ಟಿರುವ ಹಣ ೫೦ ಸಾವಿರ ಕೋಟಿ ರು. ಮಾತ್ರ ಕೊಡಲಾಗಿದೆ. ಮೇಕೆದಾಟು ಯೋಜನೆಗೆ ಅನುಮತಿ ನೀಡಿಲ್ಲ. ಮಹಾದಾಯಿ ನದಿ ಯೋಜನೆ ನೀರಿಗೆ ಅನುದಾನ ಒದಗಿಸಿಲ್ಲ. ಕರ್ನಾಟಕದ ಬಗ್ಗೆ ಮೋದಿಯ ಮಲತಾಯಿ ಧೋರಣೆ ಖಂಡಿಸಿ ರಾಜ್ಯಾದ್ಯಂತ ಕೆಪಿಸಿಸಿ ಆದೇಶದ ಮೇರೆಗೆ ಮೋದಿ ಗೋಬ್ಯಾಕ್ ಚಳವಳಿ ನಡೆಸಲಾಗಿದೆ ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಮಹದೇವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ, ನಂಪುರ ಗ್ರಾಪಂ ಅಧ್ಯಕ್ಷ ಶೇಖರಪ್ಪ, ಎಸ್ಸಿಮೋರ್ಚಾ ವಿಭಾಗದ ಜಿಲ್ಲಾಧ್ಯಕ್ಷ ನಲ್ಲೂರುಸೋಮೇಶ್ವರ್, ಜಿಪಂ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ನಗರಸಭಾ ಸದಸ್ಯ ರಾಜಪ್ಪ, ರವಿಗೌಡ, ವೀರಭದ್ರಸ್ವಾಮಿ, ನಾಗೇಂದ್ರ, ನಾಗರಾಜು, ದೊರೆ ಮುತ್ತಿಗೆ, ತೌಸಿಫ್, ಮಧು, ರಾಜೇಶ್, ಅಕ್ಷಯ್, ಶಶಾಂಕ, ಮಲ್ಲಿಕಾರ್ಜುನ ಸ್ವಾಮಿ, ನಾಗಯ್ಯ, ಮಾಧ್ಯಮ ಸಂಯೋಜಕ ಗೌಡಳ್ಳಿ ರಾಜೇಶ್, ಮಹದೇವಸ್ವಾಮಿ, ಆರ್.ಕೆ.ಶಿವಕುಮಾರ್, ಸೌಪಿಯಾ ಮತ್ತಿತ್ತರರು ಹಾಜರಿದ್ದರು.
;Resize=(128,128))
;Resize=(128,128))